Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಕೊಣಾಜೆ

ಗ್ರಂಥ ಸಂಪಾದನಾ ಶಾಸ್ತ್ರವನ್ನು ಸೀಮಿತಗೊಳಿಸದೆ ವಿಸ್ತರಿಸುವ ಕಾರ್ಯ ಆಗಬೇಕಿದೆ : ಪ್ರೊ.ಕೆ.ಚಿನ್ನಪ್ಪ ಗೌಡ

UllalaVaniBy UllalaVaniAugust 12, 2019No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಕೊಣಾಜೆ : ಗ್ರಂಥಸಂಪಾದನಾ ಶಾಸ್ತ್ರವನ್ನು ಪ್ರಾಚೀನ ಕಾಲದ ಗ್ರಂಥಸಂಪಾದನೆಗಳಿಗಷ್ಟೇ ಸೀಮಿತಗೊಳಿಸದೆ ಆಧುನಿಕ ಕಾಲದ ಹಸ್ತಪ್ರತಿ ಸಾಹಿತ್ಯ ಮತ್ತು ಜನಪದ ಮೌಖಿಕ ಪಠ್ಯಗಳ ಸಂಪಾದನೆಗೂ ಇದನ್ನು ವಿಸ್ತರಿಸುವ ಕಾರ್ಯ ಅಗತ್ಯವಾಗಿ ಆಗಬೇಕಿದೆ ಎಂದು ಹಾವೇರಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಚಿನ್ನಪ್ಪ ಗೌಡ ಅವರು ಅಭಿಪ್ರಾಯಪಟ್ಟರು.

ಅವರು ಗುರುವಾರ ಮಂಗಳೂರು ವಿಶ್ವವಿದ್ಯಾಲಯದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಮೈಸೂರಿನ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ ವಿವಿಯಲ್ಲಿ ಕನ್ನಡ ಗ್ರಂಥ ಸಂಪಾದನೆ: ಹೊಸ ಚಿಂತನೆಗಳು ಎಂಬ ವಿಷಯದಲ್ಲಿ ಮೂರು ದಿನಗಳ ಕಾಲ ನಡೆದ ವಿಚಾರಸಂಕಿರಣದ ಸಮಾರೋಪ ಭಾಷಣದಲ್ಲಿ ಮಾತನಾಡಿದರು.ಪ್ರಾಚೀನ ಕಾಲದ ತಾಳೆಗರಿಯ ಕಾವ್ಯ ವಸ್ತುಶಾಸ್ತ್ರ ಗ್ರಂಥಗಳನ್ನು ಪ್ರಕಟಿಸುವ ಗ್ರಂಥ ಸಂಪಾದನಾ ಶಾಸ್ತ್ರಕ್ಕೆ ಮಹತ್ವದ ಸ್ಥಾನವಿದೆ. ಈ ಶಾಸ್ತ್ರವು ಸಂಕೀರ್ಣವಾದ ಮತ್ತು ಬೆಳವಣಿಗೊಳ್ಳುತ್ತಾ ಬಂದ ಅಧ್ಯಯನ ಶಿಸ್ತು ಆಗಿದೆ. ಗ್ರಂಥ ಸಂಪಾದನಾ ಶಾಸ್ತ್ರವು ಸಾಹಿತ್ಯ ಚರಿತ್ರೆಯ ಚರಿತ್ರೆ ಮತ್ತು ಕವಿ ಕೇಂದ್ರಿತ, ಕೃತಿ ಕೇಂದ್ರಿತ ಹಾಗೂ ಓದುಗ ಕೇಂದ್ರಿತ ವಿಮರ್ಶೆಗಳಿಗೆ, ಗ್ರಂಥ ಸಂಪಾದನೆಗಳಿಗೆ ಪ್ರೇರಣೆಯಾಗಿರುವುದನ್ನು ನಾವು ಪ್ರಮುಖವಾಗಿ ಗಮನಿಸಬೇಕು ಎಂದು ಹೇಳಿದರು.

ಜಾನಪದ ಗ್ರಂಥ ಸಂಪಾದನೆಯಲ್ಲಿ ಹಲವು ಮಾದರಿಗಳಿದ್ದು, ಕಲಾವಿದ-ಗಾಯಕ ಕೇಂದ್ರಿತ ಪಠ್ಯ ಸಂಗ್ರಹ ವಿಧಾನವು ಬಹಳ ಮುಖ್ಯವಾಗಿದೆ. ಜಾನಪದ ಪಠ್ಯಗಳನ್ನು ಸಂಗ್ರಹಿಸುವಾಗ ಜನಪದ ಕಲಾವಿದ ಮತ್ತು ಗಾಯಕರನ್ನು ಜನಪದ ಪರಂಪರೆಯ ಅಧಿಕೃತ ಒಡೆಯ ಎಂದು ಪರಿಗಣಿಸಬೇಕು. ಅವರ ಜ್ಞಾನವನ್ನು ಬಳಸಿಕೊಂಡು ಜನಪದ ಪಠ್ಯಗಳನ್ನು ಸಂಗ್ರಹಿಸಿ ಪ್ರಕಟಿಸುವ ಯೋಜನೆಗೆ ಹೆಚ್ಚಿನ ಮಹತ್ವವಿದೆ. ಈ ನಿಟ್ಟಿನಲ್ಲಿ ಸಿರಿ ಕಾವ್ಯ ಸಂಪಾದನೆಯನ್ನು ಒಂದು ಮಾದರಿ ಗ್ರಂಥ ಸಂಪಾದನೆಯ ಕ್ರಮ ಎಂದು ಗುರುತಿಸಬಹುದಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು, ಅಧ್ಯಯನ ಎಂಬುದು ಒಂದು ನಿರಂತರ ಪ್ರಕ್ರಿಯೆಯಾಗಿದೆ. ಕನ್ನಡ ಗ್ರಂಥ ಸಂಪಾದನೆಯಂತಹ ಪ್ರಮುಖವಾದ ವಿಚಾರಸಂಕಿರಣದಲ್ಲಿ ಯುವ ಸಮುದಾಯ, ವಿದ್ಯಾರ್ಥಿಗಳು ಹೆಚ್ಚೆಚ್ಚು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಡಾ.ಕೆ.ಆರ್.ದುರ್ಗಾದಾಸ್, ಡಾ.ರಾಮಮೂರ್ತಿ, ವಿಚಾರ ಸಂಕಿರಣದ ಸಂಚಾಲಕ ಡಾ.ಬಸವರಾಜಪ್ಪ ಮೊದಲಾದವರು ಉಪಸ್ಥಿತರಿದ್ದರು. ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥರಾದ ಪ್ರೊ.ಅಭಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿದರು. ಡಾ.ಶಂಕರ್ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಚಂದನಾ ಕೆ.ಎಸ್. ಕಾರ್ಯಕ್ರಮ ನಿರೂಪಿಸಿದರು.

ಯುವ ಸಮುದಾಯ ಗ್ರಂಥ ಸಂಪಾದನೆಯದಂತಹ ಮಹತ್ವದ ಕಾರ್ಯದ ಮೂಲಕ ಜ್ಞಾನ ಕೌಶಲ್ಯವನ್ನು ವಿಸ್ತರಿಸುವ ಕಾರ್ಯದಲ್ಲಿ ಮುನ್ನಡೆಯಬೇಕು ಹಾಗೂ ಮೌಲ್ಯಯುತ ಸಮಾಜದ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು.
ಪ್ರೊ.ಪಿ.ಎಸ್.ಯಡಡಿತ್ತಾಯ
ಕುಲಪತಿಗಳು
ಮಂಗಳೂರು ವಿವಿ

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ತೊಕ್ಕೊಟ್ಟಿನಲ್ಲಿ 18ನೇ ವರ್ಷದ ಗೂಡುದೀಪ ಸಂಗಮ – ದೀಪಾವಳಿ ಸಂಭ್ರಮ 2026ರ ಆಮಂತ್ರಣ ಪತ್ರಿಕೆ ಬಿಡುಗಡೆ

October 17, 2026

ಕೋಟೆಕಾರ್: ಅಕ್ಟೋಬರ್ 18ರಂದು ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್

October 17, 2026

ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಜಯರಾಮ ಆಳ್ವ ಪೋಡಾರು (74) ಅನಾರೋಗ್ಯದಿಂದ ನಿಧನ…!

October 16, 2026
Leave A Reply

Advertise
ಸಂಪರ್ಕಿಸಿ

ವೆನ್ಲಾಕ್‌ನಲ್ಲಿ ಕೇರಳದ ರೋಗಿಗಳು; ದ.ಕ ಬಡ ರೋಗಿಗಳಗೆ ಐಸಿಯು ಕೊರತೆ

September 29, 2026

ಅಡ್ಯಾರ್‌ನ ದಿ ಕೇಂಬ್ರಿಡ್ಜ್ ಇಂಟರ್‌ನ್ಯಾಷನಲ್ ಶಾಲೆಯಲ್ಲಿ‘ದಿ ಅಲ್ಫಾಸ್’ ಥ್ರೋಬಾಲ್‌ ಪಂದ್ಯಾಟ

September 26, 2026

ರಾತ್ರಿ ಮಲಗುವಾಗ ಕಾಲುಗಳನ್ನು ಹೊದಿಕೆಯ ಹೊರಗೆ ಇಡುತ್ತೀರಾ?

September 25, 2026

ಇನ್ನುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು ಬದಲಿಸುವಂತೆ ಕೇಂದ್ರ ನೋಟಿಫಿಕೇಷನ್

September 25, 2026
suddi

ತೊಕ್ಕೊಟ್ಟಿನಲ್ಲಿ 18ನೇ ವರ್ಷದ ಗೂಡುದೀಪ ಸಂಗಮ – ದೀಪಾವಳಿ ಸಂಭ್ರಮ 2026ರ ಆಮಂತ್ರಣ ಪತ್ರಿಕೆ ಬಿಡುಗಡೆ

By UllalaVaniOctober 17, 20260

ತೊಕ್ಕೊಟ್ಟು: ಭಗತ್ ಸಿಂಗ್ ಸೇವಾ ಪ್ರತಿಷ್ಠಾನ (ರಿ.), ತೊಕ್ಕೊಟ್ಟು, ಉಳ್ಳಾಲ ಗೂಡುದೀಪ ಸ್ಪರ್ಧಾ ಸಮಿತಿಯ ವತಿಯಿಂದ ನಡೆಯಲಿರುವ 18ನೇ ವರ್ಷದ…

ಕೋಟೆಕಾರ್: ಅಕ್ಟೋಬರ್ 18ರಂದು ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್

October 17, 2026

ಅಕ್ಟೋಬರ್ 20 ಬೆಂಗಳೂರಿನಲ್ಲಿ ಎಸ್.ಎಂ.ಎ. ಪ್ರೇರು ಉಮ್ಮಃ ಅಭಿಯಾನದ ಸಮಾರೋಪ ಸಮಾರಂಭ

October 17, 2026

ಬಿಜೆಪಿ ಹಿರಿಯ ಮುಖಂಡ ಎಲ್‌ಕೆ ಅಡ್ವಾಣಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

October 17, 2026
1 2 3 … 2,136 Next
Automatic YouTube Gallery

||PRAJASEVA|| ಅ.17ರಂದು ಉಳ್ಳಾಲ ತಾಲೂಕಿನಲ್ಲಿ ಪ್ರಜಾಸೇವಾ ಆಂದೋಲನ ಆಯೋಜನೆ

ಉಳ್ಳಾಲ ತಾಲೂಕಿನಲ್ಲಿ ಅ.17ರಂದು ಪ್ರಜಾಸೇವಾ ಆಂದೋಲನ ಆಯೋಜನೆ;ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ಅರ್ಜಿ ದಾಖಲು

ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು ...
Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
||PRAJASEVA|| ಅ.17ರಂದು ಉಳ್ಳಾಲ ತಾಲೂಕಿನಲ್ಲಿ ಪ್ರಜಾಸೇವಾ ಆಂದೋಲನ ಆಯೋಜನೆ
Now Playing
||PRAJASEVA|| ಅ.17ರಂದು ಉಳ್ಳಾಲ ತಾಲೂಕಿನಲ್ಲಿ ಪ್ರಜಾಸೇವಾ ಆಂದೋಲನ ಆಯೋಜನೆ
ಉಳ್ಳಾಲ ತಾಲೂಕಿನಲ್ಲಿ ಅ.17ರಂದು ಪ್ರಜಾಸೇವಾ ಆಂದೋಲನ ಆಯೋಜನೆ;ಐಪಿಜಿಆರ್‌ಎಸ್ ...
ಉಳ್ಳಾಲ ತಾಲೂಕಿನಲ್ಲಿ ಅ.17ರಂದು ಪ್ರಜಾಸೇವಾ ಆಂದೋಲನ ಆಯೋಜನೆ;ಐಪಿಜಿಆರ್‌ಎಸ್ ಪೋರ್ಟಲ್‌ನಲ್ಲಿ ಅರ್ಜಿ ದಾಖಲು

ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು ...
Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
|| NAVADURGA|| ತೊಕ್ಕೊಟ್ಟುವಿನ ಸಾಧನಾ ತಂಡದ `ಆದಿಶಕ್ತಿಯ ದಿವ್ಯ ವೈಭವ' ಅದ್ಭುತ ನೃತ್ಯ ರೂಪಕ SADHANA TEAM
Now Playing
|| NAVADURGA|| ತೊಕ್ಕೊಟ್ಟುವಿನ ಸಾಧನಾ ತಂಡದ `ಆದಿಶಕ್ತಿಯ ದಿವ್ಯ ವೈಭವ' ಅದ್ಭುತ ನೃತ್ಯ ರೂಪಕ SADHANA TEAM
"ಶಕ್ತಿ ಸ್ವರೂಪಿಣಿಯಾದ, ಆದಿಶಕ್ತಿಯ ಒಂಬತ್ತು ರೂಪಗಳೇ ನವದುರ್ಗೆಯರು. ಸಮಸ್ತ ...
"ಶಕ್ತಿ ಸ್ವರೂಪಿಣಿಯಾದ, ಆದಿಶಕ್ತಿಯ ಒಂಬತ್ತು ರೂಪಗಳೇ ನವದುರ್ಗೆಯರು. ಸಮಸ್ತ ಲೋಕವನ್ನು ಕಾಪಾಡುವ, ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸುವ ಆ ತಾಯಂದಿರ ದಿವ್ಯ ಚೈತನ್ಯವನ್ನು ಸ್ಮರಿಸುತ್ತಾ. ಭಾವದೊಂದಿಗೆ ಹೆಜ್ಜೆ ಹಾಕಿದ ತೊಕ್ಕೊಟ್ಟುವಿನ ಸಾಧನಾ ತಂಡದ ಆದಿಶಕ್ತಿಯ ದಿವ್ಯ ವೈಭವ' ಅದ್ಭುತ ನೃತ್ಯ ರೂಪಕ ...ನಿಮ್ಮ ಮುಂದೆ.....

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version