UN NETWORKS
ಉಳ್ಳಾಲ : ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಮಂಗಳೂರು ದ.ಕ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ , ಮಂಗಳೂರು ದಕ್ಷಿಣ ವಲಯ ಹಾಗೂ ಉಚ್ಚಿಲ ಬೋವಿ ವಿದ್ಯಾ ಸಂಸ್ಥೆಗಳ ಶತಮಾನೋತ್ಸವ ಆಚರಣಾ ಸಮಿತಿ ಇದರ ಸಹಯೋಗದೊಂದಿಗೆ ಪಿಲಾರ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2019 ಉಚ್ಚಿಲ ಬೋವಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಮೂರೂರ ಬೋವಿ ಮಹಾ ಸಭಾ ಅಧ್ಯಕ್ಷ ಚಿದಾನಂದ.ಆರ್ ಉಚ್ಚಿಲ್ ಉದ್ಘಾಟಿಸಿದರು.
ಉಚ್ಚಿಲ ಬೋವಿ ವಿದ್ಯಾಸಂಸ್ಥೆಯ ಸಂಚಾಲಕ ದೇವದಾಸ್ ಟಿ. ಉಚ್ಚಿಲ್, ಉಚ್ಚಿಲ ಬೋವಿ ವಿದ್ಯಾಸಂಸ್ಥೆಗಳ ಶತಮಾನೋತ್ಸವ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ರೋಹಿತಾಶ್ವ .ಯು, ಕಾರ್ಯದರ್ಶಿ ನಾರಾಯಣ ಉಚ್ಚಿಲ್, ಗೌರವ ಅಧ್ಯಕ್ಷೆ ಲಕ್ಷ್ಮಿ ಡಿ. ಉಚ್ಚಿಲ್, ಪಿಲಾರ್ ಕ್ಲಸ್ಟರ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವೀಣಾ ಡೇಸಾ, ಬದ್ರಿಯಾ ನಗರ ಕ್ಲಸ್ಟರ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಫ್ಲೇವಿ ಡಿ’ಸೋಜ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಉಚ್ಚಿಲ ಬೋವಿ ವಿದ್ಯಾ ಸಂಸ್ಥೆಗಳ ಶತಮಾನೋತ್ಸವ ಆಚರಣಾ ಸಮಿತಿ ವತಿಯಿಂದ ಸಹಿ ಸಂಗ್ರಹದ ಚಾಲನೆಯನ್ನು ಮೂರೂರ ಬೋವಿ ಮಹಾ ಸಭಾ ಅಧ್ಯಕ್ಷ ಚಿದಾನಂದ ಆರ್ ಉಚ್ಚಿಲ್ ಸಹಿ ಹಾಕುವ ಮೂಲಕ ಉದ್ಘಾಟಿಸಿದರು.
ಶಿಕ್ಷಕಿ ರಮಿತಾ ಕಾರ್ಯಕ್ರಮ ನಿರೂಪಿಸಿದರು. ಪಿಲಾರ್ ಕ್ಲಸ್ಟರ್ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವೀಣಾ ಡೇಸಾ ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ ಮೋಹನ್ದಾಸ್ ರೈ ವಂದಿಸಿದರು.


