UN NETWORKS
ಮೇರಿಹಿಲ್ : ಕಾರ್ಗಿಲ್ ವಿಜಯದ ಅಂಗವಾಗಿ ಕಾರ್ಗಿಲ್ನಲ್ಲಿ ಹುತಾತ್ಮರಾದವರಿಗೆ ಗೌರವ ನಮನ ಸಲ್ಲಿಸುವ ಹಾಗೂ ಕಾರ್ಗಿಲ್ ವಿಜಯ ದಿನಾಚರಣೆ ಮೇರಿಹಿಲ್ ನ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಶುಕ್ರವಾರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರಿಗೆ ಮುಂಬತ್ತಿ ಹಚ್ಚಿ ಪುಷ್ಪ ನಮನ ಸಲ್ಲಿಸಲಾಯಿತು. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠ ಡಾ. ಮುರಲೀ ಮೋಹನ್ ಚೂಂತಾರು ಮಾತನಾಡಿ ಕಾರ್ಗಿಲ್ ಯುದ್ದವು 1999ರ ಮೇ ತಿಂಗಳಿನಿಂದ ಜುಲೈ ತನಕ ನಡೆಯಿತು. ಜುಲೈ 26ಕ್ಕೆ ಭಾರತಕ್ಕೆ ವಿಜಯ ಪ್ರಾಪ್ತವಾದ ನೆಲೆಯಲ್ಲಿ ಈ ದಿನವನ್ನು ಕಾರ್ಗಿಲ್ ವಿಜಯ ದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಕಾರ್ಗಿಲ್ ಯುದ್ಧದಲ್ಲಿ 527ವೀರ ಯೋಧರು ಹತರಾಗಿದ್ದು, ಅದರಲ್ಲಿ ಮೂರು ವೀರ ಯೋಧರಿಗೆ ಪರಮವೀರ ಚಕ್ರ ಮರಣೋತ್ತರ ಪ್ರಶಸ್ತಿ ನೀಡಲಾಗಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟ ರಮೇಶ್, ಕಚೇರಿ ಅಧೀಕ್ಷಕ ರತ್ನಾಕರ, ಅನಿತಾ, ಮಿನಾಕ್ಷಿ , ರಮೇಶ್ ಭಂಡಾರಿ, ಸನತ್ ಕುಮಾರ್ ಆಳ್ವ, ದಿವಾಕರ, ಸತೀಶ್ ಆಚಾರ್ಯ, ಬಶೀರ್ ಹಾಗೂ ಸುಖಿತಾ ಎ. ಶೆಟ್ಟಿ ಉಪಸ್ಥಿತರಿದ್ದರು.


