UN NETWORKS
ತೊಕ್ಕೊಟ್ಟು : ತಾಯಿ ಉತ್ತರಕ್ರಿಯೆಯ ತಯಾರಿಯಲ್ಲಿದ್ದ ಮಗ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಘಟನೆ ತೊಕ್ಕೊಟ್ಟು ಪಂಡಿತ್ ಹೌಸ್ ಸಮೀಪ ಗುರುವಾರ ತಡರಾತ್ರಿ ವೇಳೆ ನಡೆದಿದೆ.ಚೆಂಬುಗುಡ್ಡೆ ಎಸ್.ಸಿ ಕಾಲನಿ ನಿವಾಸಿ ಮುಕೇಶ್ (22) ಗಾಯಗೊಂಡವರು.



ತಾಯಿ ಉತ್ತರಕ್ರಿಯೆಯ ರಾತ್ರಿ ಕಾರ್ಯಕ್ರಮದ ತಯಾರಿಯಲ್ಲಿದ್ದ ಮುಕೇಶ್ ಚೆಂಬುಗುಡ್ಡೆ ಕಡೆಯಿಂದ ಕುತ್ತಾರು ಕಡೆಗೆ ತೆರಳುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ. ಖಾಸಗಿ ಬಸ್ಸೊಂದು ಮುಕೇಶ್ ತೆರಳುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದು ಗಾಯಗೊಂಡಿದ್ದಾರೆ.ಕಾಲಿಗೆ ಗಾಯಗೊಂಡಿರುವ ಮುಕೇಶ್ ಸ್ಥಳೀಯ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


