UN NETWORKS
ಮುಡಿಪು : ದೇಶದಲ್ಲಿ ಅಪ್ರಾಪ್ತ ಬಾಲಕಿಯರಿಗೆ, ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುವ ಆರೋಪಿಗಳನ್ನು ಮಾನಸಿಕ ಅಸಸ್ವಸ್ಥ , ಹುಚ್ಚ ಎಂದು ನಿರೂಪಿಸಿ ಕಾನೂನಿನ ಕಟಕಟೆಗೆ ಹತ್ತಿಸುವ ಮೊದಲು ನಿರಪರಾಧಿ ಮಾಡುವ ಕಾರ್ಯ ನಡೆಯುತ್ತಿದ್ದು, ಮುಡಿಪುವಿನಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯ ವಿರುದ್ಧ ಕಾನೂನಿನಡಿಯಲ್ಲಿ ಕಠಿಣ ಕ್ರಮವನ್ನು ತೆಗೆದುಕೊಂಡು ಆತನಿಗೆ ಕಠಿಣ ಶಿಕ್ಷೆಯನ್ನು ನೀಡುವ ನಿಟ್ಟಿನಲ್ಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಬೇಕು ಎಂದು ಹಿಂದೂ ಜಾಗರಣಾ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಅಭಿಪ್ರಾಯಪಟ್ಟರು.




ಮುಡಿಪುವಿನಲ್ಲಿ ಫ್ಯಾನ್ಸಿ ಮಾಲಕನಿಂದ ವಿದ್ಯಾರ್ಥಿನಿಯ ಅತ್ಯಾಚಾರ ಯತ್ನಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಫ್ಯಾನ್ಸಿ ಮಾಲಕ ವ್ಯಾಪಾರ ಮಾಡುವುದನ್ನು ಬಿಟ್ಟು ಲೈಂಗಿಕ ಕಿರುಕುಳ ನೀಡುವ ಮೂಲಕ ಸಮಾಜ ತಲೆತಗ್ಗಿಸುವ ಕೆಲಸ ಮಾಡಿದ್ದಾನೆ ಇದು ಪ್ರತಿಭಟನೆಯಲ್ಲ ಜನಜಾಗೃತಿ ಕಾರ್ಯಕ್ರಮವಾಗಬೇಕು ಇಂತಹ ಘಟನೆಯನ್ನು ವಿದ್ಯಾರ್ಥಿ , ಸಂಘಟನೆಗಳು, ಒಂದು ಸಮುದಾಯದ ಜನರು ಮಾತ್ರವಲ್ಲದೆ ಇಡೀ ಸಮಾಜವೇ ಇದನ್ನು ಖಂಡಿಸಬೇಕು ಎಂದ ಅವರು ಘಟನೆ ನಡೆದ ತಕ್ಷಣ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತರಾಗಿ ಬಂಧಿಸುವ ಕಾರ್ಯ ನಡೆಸಿರುವುದು ಶ್ಲಾಘನೀಯವಾಗಿದ್ದು, ಈತನಿಗೆ ಕಠಿಣ ಶಿಕ್ಷೆ ನಿಇಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪ್ರಯತ್ನಿಸಬೇಕು ಎಂದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿ ಬಸವೇಶ್ ಮಾತನಾಡಿ ಯಾವುದೇ ಘಟನೆಗಳು ನಡೆದರೂ ನಮ್ಮ ಕಾನೂನಿನಲ್ಲಿ ದುಷ್ಕರ್ಮಿಗಳನ್ನು ಅರ್ಧ ಗಂಟೆಯಲ್ಲಿ ಹೊರ ಬರುವ ಅವಾಕಶವಿದೆ. ಈ ನಿಟ್ಟಿನಲ್ಲಿ ಕಠಿಣ ಕಾನೂನನ್ನು ನಡೆಸಿ ದುಷ್ಕರ್ಮಿಗಳು ಕಠಿಣ ಶಿಕ್ಷಯಾದಾಗ ಮಾತ್ರ ಮುಂದೆ ಇಂತಹ ದುಷ್ಕೃತ್ಯದಲ್ಲಿ ಭಾಗವಹಿಸುವವರಿಗೆ ಪಾಠವಾಗಬೇಕು. ಇಲ್ಲದಿದ್ದರೆ ಭಯದ ವಾತಾವರಣ ನಿರ್ಮಾಣವಾಗುವುದಿಲ್ಲ ಎಲ್ಲಿಯವರೆಗೆ ಕಠಿಣ ಶಿಕ್ಷೆಯಾಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಘಟನೆಗಳು ನಡೆಯುತ್ತಾ ಇರುತ್ತದೆ .ಈ ಘಟನೆ ಇನ್ನೊಂದು ಕೋಮಿನವರಿಗೆ ಆಗುತ್ತಿದ್ದರೆ ದೇಶದಲ್ಲಿ ಅಸಹಿಷ್ಣುತೆ ಇದೆ ಹೇಳುತ್ತಿದ್ದರು ಇಂತಹ ಘಟನೆಗಳಿಗೆ ಬುದ್ಧಿ ಜೀವಿಗಳು ಮಾತು ಎತ್ತುವುದಿಲ್ಲ. ಇಂತಹ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ಕಾರ್ಯ ಆಗಬೇಕು ಎಂದರು.
ಪ್ರತಿಭಟನೆಯಲ್ಲಿ ಹಿಂದೂ ಸಂಘಟನೆಯ ಮುಖಂಡ ಟಿ.ಜಿ.ರಾಜಾರಾಮ ಭಟ್, ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ ಆಶೀಶ್ ಉಪಸ್ಥಿತರಿದ್ದರು. ಕೊಣಾಜೆ ಸೇರಿದಂತೆ ಮಂಗಳೂರು ಕಮಿಷನರೇಟ್ ವಿಭಾಗದ ಪೊಲೀಸರು ಈ ಸಂದರ್ಭದಲ್ಲಿ ಬಂದೋಬಸ್ತ್ ಏರ್ಪಡಿಸಿದ್ದರು.


