UN NETWORKS
ತಲಪಾಡಿ : ಲಾರಿ ಕಂಟೈನರ್ ಒಳಗಡೆ ಹಿಂಸಾತ್ಮಕವಾಗಿ ಸಾಗಾಟ ನಡೆಸುತ್ತಿದ್ದ 22 ಎಮ್ಮೆ ಮತ್ತು ಕೋಣಗಳನ್ನು ಉಳ್ಳಾಲ ಪೊಲೀಸರು ಭಾನುವಾರ ನಸುಕಿನ ಜಾವ ತಲಪಾಡಿ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದ್ದು, ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.


ಹಾಸನ ನಿವಾಸಿ ಚಿಂದೇಗೌಡ, ಕಾಸರಗೋಡು ನಿವಾಸಿ ರವೀಂದ್ರನ್ ಮತ್ತು ಮಹಮ್ಮದ್ ಫಾರೂಕ್ ಬಂಧಿತರು.ಆರೋಪಿಗಳು ಘಟ್ಟದ ಭಾಗದಿಂದ ಜಾನುವಾರುಗಳನ್ನು ಕಳವು ನಡೆಸಿ, ಅಕ್ರಮವಾಗಿ ಲಾರಿ ಕಂಟೈನರ್ ನಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ ಸಾಗಾಟ ನಡೆಸುತ್ತಿದ್ದರು. ಕೇರಳ ಕಡೆಗೆ ಸಾಗಾಟ ನಡೆಸುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಪಡೆದ ಉಳ್ಳಾಲ ಠಾಣಾಧಿಕಾರಿ ನೇತೃತ್ಬದ ಪೊಲೀಸರ ತಂಡ ತಲಪಾಡಿ ಸಮೀಪ ಪರಿಶೀಲನೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಪರಾರಿಯಾದ ಆರೋಪಿಗಳಿಗಾಗಿ ಉಳ್ಳಾಲ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.


