UN NETWORKS
ದೇರಳಕಟ್ಟೆ : ಪವಿತ್ರ ಹಜ್ ಯಾತ್ರೆಗೈಯುತ್ತಿರುವ ದೇರಳಕಟ್ಟೆಯ ಬದ್ರಿಯ ಜುಮಾ ಮಸೀದಿ ಅಧೀನದ ಸಂಘಟನೆಯಾದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ನ ಅಧ್ಯಕ್ಷ ಇಲ್ಯಾಸ್ ಹಾಜಿ ಡಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯ ಮುಹಮ್ಮದ್ ಪುತ್ತುಬಾವ ರವರಿಗೆ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ವತಿಯಿಂದ ಬೀಳ್ಕೊಡಿಗೆ ಸಮಾರಂಭ ದೇರಳಕಟ್ಟೆಯ ಅಸೋಸಿಯೇಶನ್ ಕಚೇರಿಯಲ್ಲಿ ನಡೆಯಿತು.

ಹಯಾತುಲ್ ಇಸ್ಲಾಂ ಮದರಸ ಸದರ್ ಮುಹಲ್ಲೀಂ ಅಬ್ದುಲ್ಲಾ ಫೈಝಿ ದುಅ ನೆರವೇರಿಸಿದರು. ಹಯಾತುಲ್ ಇಸ್ಲಾಂ ಮದರಸದ ಮುಅಲ್ಲೀಂ ಹಾರೀಸ್ ಬದ್ರಿ, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಡಿ,ಉಪಾಧ್ಯಕ್ಷ ಅಬ್ದುಲ್ ಅಝೀಝ್ ಎನ್, ಕಾರ್ಯದರ್ಶಿ ಅಬ್ದುಲ್ಲ ಆರ್ ಅಹ್ಮದ್, ಜೊತೆ ಕಾರ್ಯದರ್ಶಿಗಳಾದ ಅಬ್ದುಲ‌್ ರಶೀದ್ ಡಿ.ಎಂ, ಅಬ್ದುಲ್ ಮುತ್ತಲೀಬ್, ಮದರಸ ಮ್ಯಾನೇಜ್ ಮೆಂಟ್ ದೇರಳಕಟ್ಟೆ ರೇಂಜ್ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಕೊಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಮುಹಮ್ಮದ್ ಡಿ.ಎಂ, ಅನ್ಸಾರುಲ್ ಮುಸ್ಲಿಮಿನ್ ಕಾರ್ಯದರ್ಶಿ ಅಮೀರ್ ಹುಸೈನ್, ಕಾರ್ಯ ಕಾರಿ ಸಮಿತಿ ಸದಸ್ಯರಾದ ಅಬೂಬಕ್ಕರ್ ಪಿ, ಇಸ್ಮಾಯಲ್ ರಹ್ಮತುಲ್ಲಾ, ಹನೀಫ್.ಜೆ, ಹನೀಫ್ ಡಿ ಉಪಸ್ಥಿತರಿದರು.


