UN NETWORKS
ಉಳ್ಳಾಲ : ಉಳ್ಳಾಲ ಲೋಕೋಪಯೋಗಿ ಇಲಾಖೆಯ ಗುತ್ತಿಗೆದಾರರ ಸಂಘದ ವಾರ್ಷಿಕ ಸಭೆ ಶನಿವಾರ ತೊಕ್ಕೊಟ್ಟಿನಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಯು.ಕೆ.ಯೂಸುಫ್ ಸರ್ವಾನುಮತದಿಂದ ಆಯ್ಕೆಯಾದರು. ಉಪಾಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಅನೀಸ್ ಇಂಜಿನಿಯರ್, ಕಾರ್ಯದರ್ಶಿಯಾಗಿ ಯು.ಎಂ.ಮನ್ಸೂರ್ ಅಹ್ಮದ್, ಜತೆ ಕಾರ್ಯದರ್ಶಿಯಾಗಿ ಸೆಬಾಸ್ಟಿಯನ್ ಡಿಸೋಜ ಹಾಗೂ ಕೋಶಾಧಿಕಾರಿಯಾಗಿ ಯೂಸುಫ್ ಉಳ್ಳಾಲ್ ಆಯ್ಕೆಯಾದರು.


