UN NETWORKS
ಕೊಣಾಜೆ : ಮಂಗಳೂರು ವಿಶ್ವವಿದ್ಯಾಲಯ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಆಶಾ ಕಿರಣವಾಗಿದ್ದು, ಆ ಹಿನ್ನೆಲೆಯಲ್ಲಿ ಅಭಿವೃದ್ಧಿಯ ವಿಚಾರದಲ್ಲಿ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ವಿಶ್ವವಿದ್ಯಾಲಯದ ನೂತನ ಕಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಹೇಳಿದರು.

ವಿವಿಗೆ ಪ್ರಥಮ ಬಾರಿಗೆ ಜಿಲ್ಲೆಯವರು ಕುಲಪತಿಯಾದ ಹಿನ್ನೆಲೆಯಲ್ಲಿ ಶನಿವಾರ ಕೊಣಾಜೆ ಗ್ರಾಮದ ಮುಖಂಡರ ಅಭಿನಂದನೆಗೆ ಪ್ರತಿಯಾಗಿ ಅವರು ಮಾತನಾಡಿದರು. ಕೊಣಾಜೆ ಗ್ರಾಮದ ಸಮಗ್ರ ಮಾಹಿತಿ ತನ್ನಲ್ಲಿದ್ದು ವಿವಿ ಜೊತೆ ಗ್ರಾಮವೂ ಅಭಿವೃದ್ಧಿ ಕಾಣಬೇಕಾದರೆ ಗ್ರಾಮಸ್ಥರ ಸಹಕಾರ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ಸರ್ವರ ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಅಬ್ದುಲ್ ರಹ್ಮಾನ್ ಕೋಡಿಜಾಲ್, ದೇವಣ್ಣ ಶೆಟ್ಟಿ, ಸಲೀಂ ಮೇಗಾ ಅಸೈಗೋಳಿ, ಪದ್ಮನಾಭ ಗಟ್ಟಿ, ಶ್ರೀಧರ್, ಅಝರ್ ಕೋಡಿಜಾಲ್, ಉಮ್ಮರ್ ಪಜೀರ್ ಹಾಗೂ ನೌಷಾದ್ ಕೊಣಾಜೆ ಉಪಸ್ಥಿತರಿದ್ದರು.


