ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಮುಡಿಪು: ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದರೂ ಅವರು ಮಾಡಿದ ಕಾರ್ಯ ಫಲಪ್ರದವಾಗಿಲ್ಲ. ಪ್ರಸಕ್ತ ಚುನಾವಣೆಯಲ್ಲಿ ಮುಡಿಪು ಭಾಗದಲ್ಲಿ ಬಹಳಷ್ಟು ಗ್ರಾಮಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಗೆದ್ದು ಬಂದಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯ ಉಮ್ಮರ್ ಪಜೀರ್ ಹೇಳಿದರು.
ಅವರು ಮುಡಿಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಹೂಹಾಕುವ ಕಲ್ಲುವಿನಲ್ಲಿರುವ ಅಂಬೇಡ್ಕರ್ ಭವನದಲ್ಲಿ ಭಾನುವಾರ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಗೌರವಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಡಿಪು ಜಿ.ಪಂ. ಸದಸ್ಯ ಸಂತೋಷ್ ಕುಮಾರ್ ಅವರು ಕಾಂಗ್ರೆಸ್ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಲು ತೆರೆಮೆರೆಯ ಪ್ರಯತ್ನ ನಡೆಸಿದರು. ಅವರು ಕೆಲವು ಸವಾಲುಗಳನ್ನು ಕಾಂಗ್ರಸ್ಗರಿಗೆ ಹಾಕಿದ್ದರು. ಅವರ ಸವಾಲಿಗೆ ತಕ್ಕ ಉತ್ತರ ಕಾಂಗ್ರೆಸ್ ನೀಡಿದೆ. ಅವರ ಪ್ರಯತ್ನ ಬಾಳೆಪುಣಿ, ಬೆಳ್ಮ ಮತ್ತು ಇನ್ನಿತರ ಕೆಲವು ಗ್ರಾಮಗಳಲ್ಲಿ ಈ ಪ್ರಯತ್ನ ಪೂರ್ಣಮಟ್ಟದ ಪರಿಣಾಮ ಬೀರಿಲ್ಲ. ನಿರೀಕ್ಷೆಗಿಂತಲೂ ಜಾಸ್ತಿ ಗೆಲುವು ಪಡೆದಿದ್ದೇವೆ. ಪಜೀರ್ ಬಿಜೆಪಿ ಮುಕ್ತ ಗ್ರಾಮವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರಾ ವಹಿಸಿದ್ದರು. ಮುಡಿಪು ಬ್ಲಾಕ್ ಕಾಂಗ್ರೆಸ್ನ ಪ್ರ. ಕಾರ್ಯದರ್ಶಿ ಜಲೀಲ್ ಮೋಂಟುಗೋಳಿ, ಮಮತಾ ಗಟ್ಟಿ, ಪಂ. ಸದಸ್ಯ ಹೈದರ್ ಕೈರಂಗಳ, ಇಸ್ಮಾಯಿಲ್ ಮೀನಂಕೋಡಿ, ಸಂಜೀವಗಟ್ಟಿ, ರಮೇಶ್ ಎಂ, ರಾಜಗೋಪಾಲ ಭಟ್, ಅಂಬುಚ್ಚ, ವಾಮನಶೆಟ್ಟಿ, ಸೂರ್ಯನಾರಾಯಣಭಟ್, ಕೆ.ಎಎಚ್. ಮಹಮ್ಮದ್, ಜಗದೀಶ ಪಲಾಐಇ, ಅಬ್ದುಲ್ ರಹ್ಮಾನ್ ತೋಟಾಲ್, ಆಸೀಫ್ ಹೂಹಾಕುವಕಲ್ಲು, ಅಶ್ರಫ್ ಪಡಿಕ್ಕಲ್, ಹೈದರ್ ಎಚ್.ಕಲ್ಲು ಮೊದಲಾದವರು ಉಪಸ್ಥಿತರಿದ್ದರು,




