UN NETWORKS
ದೇರಳಕಟ್ಟೆ : ದೇರಳಕಟ್ಟೆಯ ಯೇನೆಪೊಯ ದಂತ ವಿದ್ಯಾಲಯದ ಓರಲ್ ಮೆಡಿಸಿನ್ ಮತ್ತು ರೇಡಿಯೋಲೋಜಿ ವಿಭಾಗದಲ್ಲಿ ಜಿಲ್ಲೆಯ ಮೊದಲ ತಂಬಾಕು ಸೇವನೆ ನಿಲುಗಡೆ ಕೇಂದ್ರವನ್ನು ಶುಕ್ರವಾರ ಯೇನೆಪೊಯ ದಂತ ವಿದ್ಯಾಲಯದಲ್ಲಿ ಉದ್ಘಾಟಿಸಲಾಯಿತು.

ಕೇಂದ್ರವನ್ನು ಯೇನೆಪೊಯ ದಂತ ವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಎಚ್. ಶ್ರೀಪತಿ ರಾವ್ ತಂಬಾಕು ಸೇವನೆಯ ಅಭ್ಯಾಸವನ್ನು ತಡೆಗಟ್ಟುವ ಪ್ರಯತ್ನವನ್ನು ಮಾಡಲು ಈ ವಿಭಾಗವು ವಿಧ್ಯಾರ್ಥಿಗಳಿಗೆ, ರೋಗಿಗಳಿಗೆ ಹಾಗೂ ಸಾಮಾನ್ಯ ಜನರಿಗೆ ಸಹಾಯ ಮಾಡುತ್ತದೆ ಎಂದು ನುಡಿದರು.


