UN NETWORKS
ಮಂಗಳೂರು : ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಚೂಂತಾರು ಸರೋಜಿನಿ ಭಟ್ ಪ್ರತಿಪ್ಠಾನ ಆಶ್ರಯದಲ್ಲಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಸಹಕಾರದೊಂದಿಗೆ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಶುಕ್ರವಾರ ನಡೆಯಿತು.

ಶಿಬಿರವನ್ನು ಉದ್ಘಾಟಿಸಿದ ಸಾಮಾಜಿಕ ಮುಂದಾಳು ಗೊಪಾಲ ಶೆಟ್ಟಿ ಅರಿಬೈಲು ಮಾತನಾಡಿ ರಕ್ತದಾನ ಬಹಳ ಪವಿತ್ರವಾದ ದಾನವಾಗಿದ್ದು, ರಕ್ತದಾನದಿಂದ ಮಾತ್ರ ಹೃದಯಗಳನ್ನು ಬೆಸೆಯಲು ಸಾಧ್ಯ ಎಂದರು. ಡಾ. ಮುರಲೀ ಮೋಹನ್ ಹಾಗೂ ಡಾ. ರಾಜಶ್ರೀ ಬಿಡುವಿಲ್ಲದ ವೃತ್ತಿಯ ನಡುವೆಯೂ ಸಾಮಾಜಿಕ ಕಳಕಳಿಯಿಂದ ರಕ್ತದಾನ ಶಿಬಿರವನ್ನು ದಂತ ಚಿಕಿತ್ಸಾಲಯದಲ್ಲಿ ಆಯೋಜಿಸಿರುವುದು ದಂಪತಿಗಳ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ ಎಂದರು. ಕಾಸರಗೋಡು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ ಹರ್ಷದ್ ವರ್ಕಾಡಿ ಮಾತನಾಡಿ ಕಳೆದ 22ವರ್ಷಗಳಿಂದ ಡಾ. ಮುರಲೀ ದಂತ ಚಿಕಿತ್ಸಾಲಯ ನಡೆಸುವುದರ ಜೊತೆಗೆ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ವನಮಹೋತ್ಸವ, ಬಾಯಿ ಕ್ಯಾನ್ಸರ್ ತಪಾಸಣೆ ಶಿಬಿರ ನಡೆಸಿ ವೈದ್ಯಕೀಯ ವೃತ್ತಿಯ ಸಾಮಾಜಿಕ ಕಳಕಳಿಯನ್ನು ತೋರ್ಪಡಿಸಿದ್ದಾರೆ. ವೃತ್ತಿಯ ರಾಜಧರ್ಮವನ್ನು ಪಾಲಿಸುತ್ತಾ ಸಮಾಜಮುಖಿ ಕೆಲಸ ಮಾಡಿ ಮಂಜೇಶ್ವರದ ಜನರ ಮುಖದಲ್ಲಿ ನಗುವನ್ನು ಸೃಷ್ಟಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಶ್ರೀ ಬ್ರಾಹ್ಮರಿ ಸಮಾಜ ಸೇವಾ ಸಂಸ್ಥೆಯ ಸಂಸ್ಥಾಪಕ ಸುಖೇಶ್ ಬೆಜ್ಜ, ಕಲ್ಲೂರು ಎಜುಕೇಶನ್ ಟ್ರಸ್ಟ್ನ ಅಬ್ದುಲ್, ಮಂಜೇಶ್ವರ ಯೂತ್ ಮುಸ್ಲಿಂ ಲೀಗ್ನ ಉಪಾಧ್ಯಕ್ಷ ರಫೀಕ್ ಯು.ಎಮ್, ವೆನ್ಲಾಕ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಶರತ್ ರಾವ್, ಹಿರಿಯ ತಾಂತ್ರಿಕ ತಜ್ಞ ಆಂಟೋನಿ, ಅಶೋಕ್ ಹಾಗೂ ಲತಾ ಉಪಸ್ಥಿತರಿದ್ದರು. ಚೂಂತಾರು ಸರೋಜಿನಿ ಪ್ರತಿಷ್ಠಾನ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ಪ್ರಾಸ್ತ್ತಾವಿಕವಾಗಿ ಮಾತಾನಾಡಿದರು. ವೆನ್ಲಾಕ್ ಆಸ್ಪತ್ರೆಯ ವೈದ್ಯರು ಮತ್ತು ತಂತ್ರಜ್ಞರು ಶಿಬಿರವನ್ನು ನಡೆಸಿಕೊಟ್ಟರು.
ಶಿಬಿರದಲ್ಲಿ ಸುಮಾರು 22 ಮಂದಿ ರಕ್ತದಾನ ಮಾಡಿದರು. ಸುರಕ್ಷಾ ದಂತ ಚಿಕಿತ್ಸಾಲಯದ ರಮ್ಯ, ರಶ್ಮಿ, ರೋಹಿಣಿ, ಯಶಸ್ವಿನಿ ಮತ್ತು ವಾಣಿ ಉಪಸ್ಥಿತರಿದ್ದರು. ರಕ್ತದಾನ ಮಾಡಿದ ಎಲ್ಲಾ ರಕ್ತದಾನಿಗಳಿಗೆ “ರಕ್ತದಾನ ಜೀವದಾನ” ಎಂಬ ಪುಸ್ತಕವನ್ನು ಉಚಿತವಾಗಿ ಹಂಚಿ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.


