Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಉಳ್ಳಾಲ

ಉಳ್ಳಾಲ ದರ್ಗಾದಲ್ಲಿ ಸಂಭ್ರಮದ ಈದ್ ಉಲ್ ಫಿತ್ರ್ ಆಚರಣೆ

UllalaVaniBy UllalaVaniJune 7, 2019No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ : ತಾಳ್ಮೆ , ಪ್ರೀತಿ, ವಿಶ್ವಾಸ, ಸಹಕಾರ ಈದ್ ಹಬ್ಬದ ಸಂದೇಶವಾಗಿದೆ. ಒಂದು ತಿಂಗಳ ಉಪವಾಸ ಆಚರಿಸಿ ಈದ್ ಹಬ್ಬವನ್ನು ಸಂತೋಷದಿಂದ ಆಚರಿಸಲಾಗುತ್ತಿದೆ. ಸಹೋದರತೆ, ಏಕತೆ, ಸಹಕಾರ, ತಾಳ್ಮೆ ಕಾಪಾಡುವ ಮೂಲಕ ಪ್ರೀತಿಯ ಸಮಾಜ ನಿರ್ಮಿಸುವ ಮುಖೇನ ಸರ್ವರನ್ನೂ ಪ್ರೀತಿಸಿಕೊಂಡು ಅಲ್ಲಾಹುನ ಕೃಪೆಗೆ ಪಾತ್ರರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.

ಈದ್ ಉಲ್ ಫಿತ್ರ್ ಪ್ರಯುಕ್ತ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ, ಸರ್ವರಿಗೂ ಸರಕಾರದ ಪ್ರಯುಕ್ತ ಈದ್ ಹಬ್ಬದ ಶುಭಾಷಯಗಳನ್ನು ಜನತೆಗೆ ಸಲ್ಲಿಸಿ ಮಾತನಾಡಿದರು.
ಈದ್ ಹಬ್ಬದ ಸಂದೇಶಗಳನ್ನು ಪರಸ್ಪರ ಹಂಚುವುದು, ಸಂಸ್ಕೃತಿಯನ್ನು ಬಿಂಬಿಸುವ ಜತೆಗೆ, ಎಲ್ಲಾ ಧರ್ಮದವರ ಜತೆಗೆ ವಿಶ್ವಾಸ ಗಳಿಸಿಕೊಂಡು ಅಭಿವೃದ್ಧಿಯ ಕರ್ನಾಟಕ, ವಿಶ್ವಾಸಯುತ ಸಮಾಜ, ಬಲಿಷ್ಠ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು. ವಿಶ್ವ ಶಾಂತಿಗೆ ಎಲ್ಲರೂ ಪ್ರಾರ್ಥಿಸಬೇಕು. ಎಲ್ಲಾ ಧರ್ಮೀಯರ ಹಬ್ಬಗಳನ್ನು ಪರಸ್ಪರ ಬೆರೆತುಕೊಂಡು ಆಚರಿಸುವುದೇ ಧರ್ಮ ಎಂದರು. ಜಿಲ್ಲೆಯಲ್ಲಿ ಹಾಹಾಕಾರವಿಲ್ಲ: ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಇಲ್ಲ. ತಿಂಗಳಿನಿಂದ ನೀರಿನ ತೊಂದರೆಯನ್ನು ಮನಗಂಡು ಯೋಜನೆ ರೂಪಿಸುತ್ತಾ ಬಂದಿರುವುದರಿಂದ ಸಮಸ್ಯೆ ನಿವಾರಿಸಲು ಸಾಧ್ಯವಾಗಿದೆ. ಮಳೆಗಾಗಿ ತಿಂಗಳಿನಿಂದ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಶೀಘ್ರದಲ್ಲೇ ಮಳೆಯಾಗುವ ವಿಶ್ವಾಸವಿದೆ ಎಂದರು.

ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಉಪವಾಸದ ಸಂದರ್ಭ ನಡೆಯುವ ತಪ್ಪುಗಳ ತಿದ್ದುಪಡಿಕೆಗೆ ಫಿತ್ರ್ ಝಕಾತ್ ಆಚರಿಸಲಾಗುತ್ತದೆ. ಸಂತೋಷದಿಂದಲೇ ಬಡವರಿಗೆ, ಅಸಹಾಯಕರಿಗೆ ಸಹಕರಿಸುವುದೇ ಹಬ್ಬದ ವಿಶೇಷತೆ. ಮುಸ್ಲಿಂ ಸಹೋದರರು ತಿಂಗಳ ಕಾಲ ಉಪವಾಸ ವ್ರತ ಆಚರಿಸಿ ಅಲ್ಲಾಹುವಿನ ಅನುಗ್ರಹ ಪಡೆದು ಮಾಡುವಂತಹ ದಾನ ಇತರೆ ಧರ್ಮದವರು ಮೆಚ್ಚುವಂತೆ ಆಗಲಿ. ಸರ್ವರೂ ಮಾನವೀಯರು ಅನ್ನುವ ವಿಶ್ವಾಸ ಜನರಲ್ಲಿ ಮೂಡಲಿ.ಈ ಮೂಲಕ ಶಾಂತಿ ಸೌಹಾರ್ದದ ನಾಡಾಗಿ ಬೆಳಗಲಿ ಎಂದರು. ಖತೀಬರಾದ ಅಬ್ದುಲ್‍ಅಝೀಝ್ ಬಾಖವಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಸಿದರು.

ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ಝಿಯಾರತ್ ನೆರವೇರಿಸಿದರು. ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ದರ್ಗಾ ಭೇಟಿ ನೀಡಿ ಶುಭಹಾರೈಸಿದರು. ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹ ಮುಹಮ್ಮದ್, ಉಪಾಧ್ಯಕ್ಷರಾದ ಬಾವ ಮುಹಮ್ಮದ್, ಜತೆಕಾರ್ಯದರ್ಶಿ ಆಝಾದ್ ಇಸ್ಮಾಯೀಲ್, ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ್, ಯು.ಕೆ ಮುಹಮ್ಮದ್ ಮುಸ್ತಫ ಮಂಚಿಲ, ಅಲಿಮೋನು, ಮಹ್ಮೂದ್ ಅಳೇಕಲ, ಅಬೂಬಕ್ಕರ್ ಅಲಿನಗರ, ಹಮೀದ್ ಅಳೇಕಲ, ಇಬ್ರಾಹೀಮ್ ಹಾಜಿ ಉಳ್ಳಾಲ ಬೈಲು, ಹಮೀದ್‍ಕೋಡಿ, ಮೊಯ್ದಿನಬ್ಬಆಝಾದ್ ನಗರ, ಮಾಜಿ ಸದಸ್ಯರಾದಕಬೀರ್‍ಚಾಯಬ್ಬ, ಆದಮ್ ಹಾಜಿ, ಮಾಜಿ ಉಳ್ಳಾಲ ನಗರಸಭಾಧ್ಯಕ್ಷ ಬಾಝಿಲ್‍ಡಿಸೋಜ, ಉಳ್ಳಾಲ ನಗರಸಭಾ ಸದಸ್ಯರಾದ ಅಶ್ರಫ್, ಮುಹಮ್ಮದ್ ಮೋನು ಮುಕ್ಕಚ್ಚೇರಿ, ಮತ್ತಿತ್ತರರು ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಬಿಜೆಪಿಯ ಹಿರಿಯ ಕಾರ್ಯಕರ್ತ ವಿಠ್ಠಲ್ ಕೊಟ್ಟಾರಿ ಹೃದಯಾಘಾತದಿಂದ ನಿಧನ…!!

June 12, 2026

ಅರ್ಧಕ್ಕೆ ನಿಂತಿದ್ದ 11ನೇ ವಾರ್ಡಿನ ಕಾಂಕ್ರೀಟಿಕರಣ ಪೂರ್ಣ; ಛಲಬಿಡದ ಕೌನ್ಸಿಲರ್ ಹರೀಶ್‌ರಾವ್ ಮಡ್ಯಾರ್

June 11, 2026

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಅಜ್ಜಿನಡ್ಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ

June 11, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಬಿಜೆಪಿಯ ಹಿರಿಯ ಕಾರ್ಯಕರ್ತ ವಿಠ್ಠಲ್ ಕೊಟ್ಟಾರಿ ಹೃದಯಾಘಾತದಿಂದ ನಿಧನ…!!

By UllalaVaniJune 12, 20260

ಉಳ್ಳಾಲ; ಭಾರತೀಯ ಜನತಾ ಪಕ್ಷದ ಹಿರಿಯ ಕಾರ್ಯಕರ್ತರು ಹಾಗೂ ಹಲವರ ರಾಜಕೀಯ ಮಾರ್ಗದರ್ಶಕರಾಗಿದ್ದ ವಿಠ್ಠಲ್ ಕೊಟ್ಟಾರಿ ಅವರು ಶುಕ್ರವಾರ ಬೆಳಿಗ್ಗೆ…

ಅರ್ಧಕ್ಕೆ ನಿಂತಿದ್ದ 11ನೇ ವಾರ್ಡಿನ ಕಾಂಕ್ರೀಟಿಕರಣ ಪೂರ್ಣ; ಛಲಬಿಡದ ಕೌನ್ಸಿಲರ್ ಹರೀಶ್‌ರಾವ್ ಮಡ್ಯಾರ್

June 11, 2026

ಮಂಗಳೂರು ನಗರ ವ್ಯಾಪ್ತಿಯ ಭೂ ದಾಖಲೆಗಳ ಸುಧಾರಣೆ: ಜನರಿಗೆ ಸಹಕಾರಿಯಾಗಲಿದೆ ಸರ್ಕಾರದ ಕ್ರಮಗಳು

June 11, 2026

ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ಅಜ್ಜಿನಡ್ಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ

June 11, 2026
1 2 3 … 1,961 Next
Automatic YouTube Gallery

ಮನೆದೇವ್ರು, ಗಿಣಿರಾಮ, ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ರಾಮ್‌ಪವನ್ ವಿಶೇಷ ಸಂದರ್ಶನ"

"ತೆರೆಯ ಮೇಲಿನ ಖಳನಾಯಕ, ಬದುಕಿನಲ್ಲಿ ಸರಳ ವ್ಯಕ್ತಿ-
"ತೆರೆಯ ಮೇಲೆ ಭಯಂಕರ ಖಳನಾಯಕ!

ನಿಜ ಜೀವನದಲ್ಲಿ ಹೇಗಿದ್ದಾರೆ ರಾಮ್‌ಪವನ್?| Exclusive Interview"

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮನೆದೇವ್ರು, ಗಿಣಿರಾಮ, ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ರಾಮ್‌ಪವನ್ ವಿಶೇಷ ಸಂದರ್ಶನ"
Now Playing
ಮನೆದೇವ್ರು, ಗಿಣಿರಾಮ, ಹಿಟ್ಲರ್ ಕಲ್ಯಾಣ ಧಾರವಾಹಿ ಖ್ಯಾತಿಯ ನಟ ರಾಮ್‌ಪವನ್ ವಿಶೇಷ ಸಂದರ್ಶನ"
"ತೆರೆಯ ಮೇಲಿನ ಖಳನಾಯಕ, ಬದುಕಿನಲ್ಲಿ ಸರಳ ವ್ಯಕ್ತಿ- "ತೆರೆಯ ಮೇಲೆ ಭಯಂಕರ ಖಳನಾಯಕ! ...
"ತೆರೆಯ ಮೇಲಿನ ಖಳನಾಯಕ, ಬದುಕಿನಲ್ಲಿ ಸರಳ ವ್ಯಕ್ತಿ-
"ತೆರೆಯ ಮೇಲೆ ಭಯಂಕರ ಖಳನಾಯಕ!

ನಿಜ ಜೀವನದಲ್ಲಿ ಹೇಗಿದ್ದಾರೆ ರಾಮ್‌ಪವನ್?| Exclusive Interview"

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಪ್ರಧಾನಿ ಮೋದಿ ಆಡಳಿತದ 12 ವರ್ಷ; ಉಳ್ಳಾಲದಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ
Now Playing
ಪ್ರಧಾನಿ ಮೋದಿ ಆಡಳಿತದ 12 ವರ್ಷ; ಉಳ್ಳಾಲದಲ್ಲಿ ಬಿಜೆಪಿ ವತಿಯಿಂದ ವಿಶೇಷ ಪೂಜೆ
📍 Ullal | Dakshina Kannada | Coastal Karnataka News Update ಉಳ್ಳಾಲ, ...
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news ...
from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version