UN NETWORKS
ತೊಕ್ಕೊಟ್ಟು : ಹಿರಾ ಬಾಲಕಿಯರ ಪ್ರೌಢ ಶಾಲೆ ಬಬ್ಬುಕಟ್ಟೆ, ತೊಕ್ಕೊಟ್ಟು ,ಇಲ್ಲಿ ಶಾಲಾ ಪ್ರಾರಂಬೋತ್ಸವ ಕಾರ್ಯಕ್ರಮವು ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾತ್ ಇಸ್ಲಾಂ ಹಿಂದ್ ಕರ್ನಾಟಕ ಘಟಕದ ಕಾರ್ಯದರ್ಶಿ ಕೆ.ಎಂ ಅಶ್ರಫ್ ರವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಮಕ್ಕಳು ಶಿಕ್ಷಣದಲ್ಲಿ ಯಾವ ರೀತಿ ಮುಂದುವರಿಯಬೇಕು, ಶಿಕ್ಷಣದ ಉದ್ದೇಶ ಮತ್ತು ಪ್ರಾಮುಖ್ಯತೆಯ ಬಗ್ಗೆ ಮಕ್ಕಳಿಗೆ ತಿಳಿ ಹೇಳಿದರು. ಶಾಲಾ ವಿದ್ಯಾರ್ಥಿನಿಯರಾದ ಮುಫಿದರವರು ಸ್ವಾಗತಿಸಿದರು. ಹನೀನ ಶರೀಫ ಕಾರ್ಯಕ್ರಮವನ್ನು ನಿರೂಪಿಸಿದರು. ಫಾತಿಮ ಹನೀನ್ ವಂದಿಸಿದರು.


