UN NETWORKS
ಉಳ್ಳಾಲ : ಉತ್ಸಾಹಿ ಯುವ ಜನಾಂಗ ಹೆಚ್ಚು,ಹೆಚ್ಚು ಗಾಳದ ಕೊಂಕಣಿ ಅಭ್ಯುದಯ ಸಂಘದಲ್ಲಿ ತೊಡಗಿಸಿಕೊಂಡು ಸಂಘವನ್ನು ಬಲಿಷ್ಠಗೊಳಿಸುವಲ್ಲಿ ಶ್ರಮಿಸಬೇಕು ಎಂದು ಉಳ್ಳಾಲ ಉಳಿಯ ಶ್ರೀಧರ್ಮರಸು ಕ್ಷೇತ್ರದ ಅಂತು ಗುರಿಕಾರ್ ಹೇಳಿದ್ದಾರೆ.

ಕುತ್ತಾರ್ ಶ್ರೀ ದುರ್ಗಾವಾಹಿನಿ ಮಹಿಳಾ ಮಂಡಲದ ಸಭಾಭವನದಲ್ಲಿ ಭಾನುವಾರ ನಡೆದ ಗಾಳದ ಕೊಂಕಣಿ ಅಭ್ಯುದಯ ಸಂಘದ ವಾರ್ಷಿಕ ಮಹಾಸಭೆ,ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ಉಚಿತ ಪುಸ್ತಕವಿತರಣಾ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಅಂಕವನ್ನೇ ಪ್ರಮುಖವಾಗಿ ಗುರಿಯಾಗಿಸುವ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯೆಯ ಮೌಲ್ಯ ಕಸಿಯುತ್ತಿರುವುದು ವಿಷಾದನೀಯ,ಪುಸ್ತಕದ ಜ್ಞಾನದ ಜೊತೆಗೆ ಪ್ರಾಕ್ಟಕಲ್ ಜ್ಞಾನವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಹಿರಿಯ ನ್ಯಾಯವಾದಿ ಜೆ.ರವೀಂದ್ರ ನಾಯ್ಕ್ ಹೇಳಿದರು.
2017-18ಹಾಗೂ 2018-19 ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಾದ ಕಾಜಲ್,ಮಾನ್ವಿತ್,ಚಿರಾಗ್ ,ದೀಕ್ಷಿತಾ,ಧನ್ಯಶ್ರೀ,ಕೀರ್ತನಾ ಆದೇರೀತಿ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಾದ ಅಶೀಕಾ,ಶರಣ್ ಆರ್,ಲಿಕಿತಾರವರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಹಾಗೆಯೇ ಸಂಘದ ಕಾರ್ಯಕಾರಿ ಸಮಿತಿಯ ಮಾಜಿ ಸದಸ್ಯ,ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಆಡಳಿತ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.1ರಿಂದ 10 ನೇ ತರಗತಿ ವರೆಗಿನ ಸಮುದಾಯದ ವಿದ್ಯಾರ್ಥಿಗಳಿಗೆ ಬರಹ ಪುಸ್ತಕ ಮತ್ತು ಕ್ರೀಡಾಕೂಟದ ವಿಜೇತರಿಗೆ ಬಹುಮಾನ, ವಿದ್ಯಾನಿಧಿಯಡಿ ಸಂಘ ದತ್ತು ಸ್ವೀಕರಿಸಿದ ವಿದ್ಯಾರ್ಥಿನಿಯರಿಗೆ ಹಾಗೂ ಅಶಕ್ತರಿಗೆ ಸಹಾಯಧನ ವಿತರಿಸಲಾಯಿತು.ಶ್ರೀ ಸೋಮೇಶ್ವರಿ ಮಹಿಳಾ ಮಂಡಲದ ಅಧ್ತಕ್ಷ ಉಮಾನಾಥ ನಾಯ್ಕ್ ಉಳ್ಳಾಲ,ಶ್ರೀ ಸೋಮೇಶ್ವರಿ ಮಹಿಳಾ ಮಂಡಲದ ಅಧ್ಯಕ್ಷೆ ಕಸ್ತೂರಿ ಆರ್ ನಾಯ್ಕ್ ಅತಿಥಿಯಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ನರಸಿಂಹ ನಾಯ್ಕ್ ಹರೇಕಳ ಸಭಾಧ್ಯಕ್ಷತೆ ವಹಿಸಿ ಮಾತನಾಡಿ,ಮುಂದಿನ ದಿನಗಳಲ್ಲಿ ಸಂಘಕ್ಕೆ ಸಮುದಾಯ ಭವನ ನಿರ್ಮಾಣದ ಗುರಿ ಹೊಂದಲಾಗಿದೆ. ಇದಕ್ಕೆ ಎಲ್ಲರ ಸಹಕಾರವನ್ನು ಕೋರಿದರು. ಸಂಘದ ಉಪಾಧ್ಯಕ್ಷರಾದ ರಂಜನ್ ವೈ ನಾಯ್ಕ್ ದೇರೇಬೈಲ್ ,ಧನಲಕ್ಷ್ಮಿ ಎಂ.ಮಣ್ಣಗುಡ್ಡೆ, ಕೋಶಾಧಿಕಾರಿ ಚಂದ್ರಶೇಖರ್ ಬಪ್ಪಾಲ್ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಮುರಳೀಧರ ನಾಯ್ಕ್ ಲೆಕ್ಕ ಪತ್ರ ಮಂಡಿಸಿದರು.ಜತೆ ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ಗತವರ್ಷದ ವರದಿ ವಾಚಿಸಿ,ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


