Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಉಳ್ಳಾಲ

ಯೆನೆಪೋಯದಲ್ಲಿ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ್ಸ್ ಪ್ರಧಾನ

UllalaVaniBy UllalaVaniMay 4, 2019No Comments2 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ಯೆನೆಪೋಯ ವಿಶ್ವವಿದ್ಯಾಲಯ ಉನ್ನತ ವ್ಯಾಸಾಂಗಕ್ಕಾಗಿ ವಿದ್ಯಾರ್ಥಿಗಳನ್ನು ಉತ್ತಮ ನಿರ್ದೇಶನದೊಂದಿಗೆ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ ಎಂದು ಮಂಗಳೂರು ಪೊಲೀಸ್ ಕಮೀಷನರ್ ಸಂದೀಪ್ ಪಾಟೀಲ್ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆ ಯೆನೆಪೋಯ ಯೆಂಡ್ಯುರೆನ್ಸ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಯೆನೆಪೋಯ ಮೊಯ್ದೀನ್ ಕುಂಞ ಮೆಮೋರಿಯಲ್ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ , ಯೆನೆಪೋಯ ಫೌಂಡೇಶನ್ ಹಾಗೂ ಯೆನೆಪೋಯ ವಿ.ವಿ ಸಹಯೋಗದೊಂದಿಗೆ ಎಸ್ ಎಸ್ ಎಲ್ ಸಿ, ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಮತ್ತು ಶೇ.100 ಫಲಿತಾಂಶ ದಾಖಲಿಸಿದ ಶಿಕ್ಷಣ ಸಂಸ್ಥೆಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಜ್ಞಾನ ಸಂಪಾದನೆ ಜೀವನದ ಪ್ರಮುಖ ಆಸ್ತಿಯಾಗಿದೆ. ಜ್ಞಾನದಿಂದ ಪ್ರತಿ ಕ್ಷೇತ್ರಗಳಲ್ಲೂ ಸಾಧಿಸಲು ಸಾಧ್ಯ. ಶಿಕ್ಷಣ ಪಡೆಯುವ ಸಮಯ ಎಲ್ಲವನ್ನೂ ಅರಿಯಲು ಅಸಾಧ್ಯ. ಆದರೆ ವೃತ್ತಿಪರ ಬದುಕಿನಲ್ಲಿ ಹಿರಿಯರ ಮಾರ್ಗದರ್ಶನದಂತೆ ಯಶಸ್ಸಿನ ಹಾದಿಯನ್ನು ಅರಿತು ಮುನ್ನಡೆಯಬೇಕಾಗಿರುವುದು ಜವಾಬ್ದಾರಿ. ಪೊಲೀಸರ ಕುರಿತು ಜನರಲ್ಲಿ ಇರುವಂತಹ ದೃಷ್ಟಿಕೋನ ಬದಲಾಗಬೇಕಿದೆ. ಟಿ.ವಿ ಷೋಗಳು ಹಾಗೂ ಚಲನಚಿತ್ರಗಳಲ್ಲಿ ಬಿತ್ತರಿಸುವಂತೆ ಪೊಲೀಸರು ಇರುವುದಿಲ್ಲ. ಮನಸ್ಥಿತಿಯನ್ನು ಬದಲಾಯಿಸಿಕೊಂಡು ಅವರೊಂದಿಗೆ ಬೆರೆಯುವ ಕೆಲಸವಾಗಬೇಕಿದೆ. ಪೊಲೀಸರು ಜನಸ್ನೇಹಿಯಾಗಿ ಹೊರಹೊಮ್ಮಲು ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇದೀಗ ಸಾಮಾಜಿಕ ಜಾಲತಾಣಗಳ ಯುಗವಾಗಿದೆ. ಫೇಸ್ ಬುಕ್, ವಾಟ್ಸ್ಯಾಪ್, ಟ್ವಿಟ್ಟರ್ ಮೂಲಕ ಪೊಲೀಸ್ ಇಲಾಖೆ ಜನತೆಯ ಸಮಸ್ಯೆಗಳನ್ನು ಬಗೆಹರಿಸಲು ವೇದಿಕೆ ರೂಪಿಸಿದೆ. ಮುಂದಿನ ದಿನಗಳಲ್ಲಿ ಇದೇ ಪರಿಣಾಮಕಾರಿ ಸಾಧನ ಅನ್ನುವ ದೃಷ್ಟಿಯಲ್ಲಿ ಯೋಜನೆಯನ್ನು ರೂಪಿಸಲಾಗಿದೆ. ಈ ಕುರಿತು ಹೆಚ್ಚಿನ ಜ್ಞಾನವನ್ನು ಸಂಪಾದಿಸುವುದರ ಜತೆಗೆ ಇಲಾಖೆ ಕಲ್ಪಿಸಿರುವ ವೇದಿಕೆಯನ್ನು ಸದುಪಯೋಗ ಪಡಿಸಿವುದರೊಂದಿಗೆ ಸುರಕ್ಷಿತವಾಗಿ ಬಾಳಬಹುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾಲಯದ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞ್ ಮಾತನಾಡಿ ,ವಿದ್ಯಾರ್ಥಿಗಳಿಗೆ ಸ್ಪೂರ್ತಿ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿವರ್ಷವೂ ತಂದೆಯವರ ಸ್ಮರಣಾರ್ಥ ಯೆನೆಪೋಯ ಮೊಯ್ದೀನ್ ಕುಂಞ ಮೆಮೋರಿಯಲ್ ಎಜ್ಯುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಶೈಕ್ಷಣಿಕ ಪುರಸ್ಕಾರ ವಿತರಿಸಲಾಗುತ್ತಿದೆ. ಇದರ ಉಪಯೋಗವನ್ನು ಪಡೆದುಕೊಂಡ ವಿದ್ಯಾರ್ಥಿಗಳು ವೃತ್ತಿಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಹಾರೈಸಿದರು.

ಯೆನೆಪೋಯ ಸಮೂಹ ಸಂಸ್ಥೆಗಳ ಚೇರ್‍ಮೆನ್ ಯೇನೆಪೋಯ ಮಹಮ್ಮದ್ ಕುಂಞÂ ಮುಖ್ಯ ಅತಿಥಿಯಾಗಿದ್ದರು. ಯೆನೆಪೋಯ ವಿ.ವಿ ಕುಲಪತಿ ಡಾ.ಎಂ ವಿಜಯ ಕುಮಾರ್ ಸ್ವಾಗತಿಸಿದರು. ಡಾ.ಗಂಗಾಧರ ಸೋಮಯಾಜಿ ವಂದಿಸಿದರು.

ದ.ಕ , ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಶೈಕ್ಷಣಿಕ ವ್ಯಾಸಾಂಗದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ಯೆನೆಪೋಯ ಸಂಸ್ಥೆ ನೀಡುತ್ತಾ ಬಂದಿದೆ. ಪ್ರಶಸ್ತಿಯು ರೂ. 3,000 ದಿಂದ 10,000 ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. 300 ವಿದ್ಯಾರ್ಥಿಗಳಿಗೆ ಪುರಸ್ಕಾರವನ್ನು ನೀಡಲಾಗಿದೆ. ರೂ.15 ಲಕ್ಷ ವೆಚ್ಚ ಮಾಡಲಾಗಿದೆ. ಜೊತೆಗೆ ಯೆನೆಪೋಯ ಫೌಮಡೇಶನ್ , ಯೆನೆಪೋಯ ಸಮೂಹ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರ ಪ್ರತಿಭಾವಂತ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ. ಯೆನೆಪೋಯ ವಿ.ವಿ ಸಾಮಾಜಿಕ ಕಾಳಜಿಗಾಗಿ ಬಿ.ಡಿ.ಎಸ್, ಬಿ.ಎಸ್ಸಿ(ನರ್ಸಿಂಗ್), ಬಿ.ಪಿ.ಟಿ, ಎಂ.ಪಿ.ಟಿ, ಬಿ.ಫಾಮ್ ್ ಹಾಗೂ ಇತರೆ ಕೋರ್ಸುಗಳಲ್ಲಿ ಕಲಿಯುತ್ತಿರುವ ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಶಯಕ್ಷಣಿಕ ವ್ಯಾಸಾಂಗದಲ್ಲಿ ಪ್ರತಿಭಾನ್ವಿತರಾದ 32 ವಿದ್ಯಾರ್ಥಿಗಳ ಶಿಕ್ಷಣವನ್ನು ಪ್ರಾಯೋಜಿಸುತ್ತಿದೆ. ಇದರ ಅಂದಾಜು ವೆಚ್ಚ ರೂ.1,52,36,580 ಆಗಿದೆ. ಮತ್ತು 73 ವಿದ್ಯಾರ್ಥಿಗಳಿಗೆ ರೂ.2,65,50,750 ಮೊತ್ತದ ಸ್ಕಾಲರ್ ಶಿಪ್ ಅನ್ನೂ ನೀಡಲಾಗಿದೆ.

ಜಾಹೀರಾತು

ಈ ಬಾರಿಯ ಪ್ರತಿಭಾ ಪುರಸ್ಕಾರಕ್ಕೆ 1043 ವಿದ್ಯಾರ್ಥಿಗಳು ಮತ್ತು 15 ಶಿಕ್ಷಣ ಸಂಸ್ಥೆಗಳ ಅರ್ಜಿ ಸ್ವೀಕರಿಸಲಾಗಿದೆ ಎಂದು ಯೆನೆಪೋಯ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಕಿನ್ಯದಲ್ಲಿ ಮಾ 30ರಿಂದ ಎ.9ವರೆಗೆ ಕೂಟು ಝಿಯಾರತ್ ಕಾರ್ಯಕ್ರಮ

March 28, 2026

ರಾಮನವಮಿ ಉತ್ಸವ; ದಕ್ಷ ಯುವ ಬಳಗ ವತಿಯಿಂದ ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

March 28, 2026

ತೊಕ್ಕೊಟ್ಟುವಿನಲ್ಲಿ ಹತ್ಯೆ ನಡೆಸಿ ಬೆಂಗಳೂರಿಗೆ ತೆರಳಿದ್ರಾ ಹಂತಕರು…?!

March 27, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
suddi

ಈಶ್ವರನ ಹೂದೋಟವೆನಿಸಿದ ಪದ್ಯಾಣದಲ್ಲಿ ಬ್ರಹ್ಮಕಲಶೋತ್ಸವ, ಮಾರ್ಚ್30ರಿಂದ ಏ.7ರವರೆಗೆ ಕಾರ್ಯಕ್ರಮ

By UllalaVaniMarch 28, 20260

ಮಂಗಳೂರು: ಈಶ್ವರನ ಹೂದೋಟ ಎಂದೇ ಬಣ್ಣಿಸಲಾಗುವ ಪ್ರಶಾಂತ, ಪ್ರಕೃತಿಯ ಸೊಬಗು, ಹಸಿರು ಸಿರಿಯ ಮಧ್ಯೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಕಿನ್ಯದಲ್ಲಿ ಮಾ 30ರಿಂದ ಎ.9ವರೆಗೆ ಕೂಟು ಝಿಯಾರತ್ ಕಾರ್ಯಕ್ರಮ

March 28, 2026

ರಾಮನವಮಿ ಉತ್ಸವ; ದಕ್ಷ ಯುವ ಬಳಗ ವತಿಯಿಂದ ಅರ್ಹ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

March 28, 2026

ಹಿಟ್ ಅಂಡ್ ರನ್; ಪಾದಚಾರಿಗೆ ಗಂಭೀರ ಗಾಯ, ಕಾರು ವಶಕ್ಕೆ

March 28, 2026
1 2 3 … 1,850 Next
Automatic YouTube Gallery

ಕೌನ್ಸಿಲರ್ ಸುಜಿತ್ ವಿರುದ್ಧ ಸೋಷಿಯಾಲ್ ಮೀಡಿಯಾದಲ್ಲಿ ಬರಹಗಳು ವೈರಲ್

ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ಸುಜಿತ್ ಮಾಡೂರು ಚರ್ಚಿಸಿದ ಕೊರಗಜ್ಜ ಕ್ಷೇತ್ರದ ಶೀಟ್ ವಿಚಾರ; ಸೋಷಿಯಾಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಬರಹಗಳು ವೈರಲ್

ಕೊರಗಜ್ಜ ಸಮಿತಿ ಮಾಜಿ ಅಧ್ಯಕ್ಷರುಗಳ ಪ್ರತಿಕ್ರಿಯೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಕೌನ್ಸಿಲರ್ ಸುಜಿತ್ ವಿರುದ್ಧ ಸೋಷಿಯಾಲ್ ಮೀಡಿಯಾದಲ್ಲಿ ಬರಹಗಳು ವೈರಲ್
Now Playing
ಕೌನ್ಸಿಲರ್ ಸುಜಿತ್ ವಿರುದ್ಧ ಸೋಷಿಯಾಲ್ ಮೀಡಿಯಾದಲ್ಲಿ ಬರಹಗಳು ವೈರಲ್
ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ಸುಜಿತ್ ಮಾಡೂರು ಚರ್ಚಿಸಿದ ಕೊರಗಜ್ಜ ಕ್ಷೇತ್ರದ ...
ಸಾಮಾನ್ಯ ಸಭೆಯಲ್ಲಿ ಕೌನ್ಸಿಲರ್ ಸುಜಿತ್ ಮಾಡೂರು ಚರ್ಚಿಸಿದ ಕೊರಗಜ್ಜ ಕ್ಷೇತ್ರದ ಶೀಟ್ ವಿಚಾರ; ಸೋಷಿಯಾಲ್ ಮೀಡಿಯಾದಲ್ಲಿ ಇಲ್ಲಸಲ್ಲದ ಬರಹಗಳು ವೈರಲ್

ಕೊರಗಜ್ಜ ಸಮಿತಿ ಮಾಜಿ ಅಧ್ಯಕ್ಷರುಗಳ ಪ್ರತಿಕ್ರಿಯೆ
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ...
ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ಮಾ.30ರಿಂದ ಏ.8ರವರೆಗೆ ಕಿನ್ಯದಲ್ಲಿ ಕೂಟು ಝಿಯಾರತ್
Now Playing
ಮಾ.30ರಿಂದ ಏ.8ರವರೆಗೆ ಕಿನ್ಯದಲ್ಲಿ ಕೂಟು ಝಿಯಾರತ್
ಕಿನ್ಯದಲ್ಲಿ ಕೂಟು ಝಿಯಾರತ್ ಕಾರ್ಯಕ್ರಮ; ಮಾ.30ರಿಂದ ಏ.8ರವರೆಗೆ ಧಾರ್ಮಿಕ ಮತ ...
ಕಿನ್ಯದಲ್ಲಿ ಕೂಟು ಝಿಯಾರತ್ ಕಾರ್ಯಕ್ರಮ; ಮಾ.30ರಿಂದ ಏ.8ರವರೆಗೆ ಧಾರ್ಮಿಕ ಮತ ಪಂಡಿತರಿOದ ಉಪನ್ಯಾಸ

ತೊಕ್ಕೊಟ್ಟುವಿನಲ್ಲಿ ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಬೂಸ್ವಾಲಿ ಹಾಜಿ ಮಾಹಿತಿ

📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ...
ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d