UN NETWORKS
ಉಳ್ಳಾಲ : ಭೂಲೋಕ ಎಂದರೆ ಸುಖದಲ್ಲಿ ಜೀವಿಸುವಂತಹದ್ದಲ್ಲ, ಇಲ್ಲಿ ನಮಗೆ ಜೀವನಕ್ಕೆ ಸಿಗುವ ಸಮಯದಲ್ಲಿ ಪರಲೋಕದಲ್ಲೂ ವಿಜಯ ಸಾಧಿಸುವ ನಿಟ್ಟಿನಲ್ಲಿ ನೊಂದವರ ಕಣ್ಣೀರು ಒರೆಸುವ ಕಾರ್ಯಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಉಳ್ಳಾಲದ ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ಅಭಿಪ್ರಾಯಪಟ್ಟರು.


















ಅಲೇಕಳದ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಮುಕ್ಕಚ್ಚೇರಿ ರಾಯಲ್ ಗಾರ್ಡನ್ನಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮಾತನಾಡಿದರು.ದೇವ ಭಯವುಳ್ಳವರಿಗೆ ಶಾಶ್ವತ ಜೀವನ ಸಾಗಿಸುವ ಅವಕಾಶ ಪರಲೋಕದಲ್ಲಿ ಸಿಗಲಿದೆ, ಪರಲೋಕದಲ್ಲಿ ವಿಜಯ ಸಾಧಿಸಬೇಕಾದರೆ, ಇಹಲೋಕದಲ್ಲಿ ಕಷ್ಟ, ನಷ್ಟ ಎಲ್ಲವನ್ನೂ ಸಮಾನವಾಗಿ ಎದುರಿಸಬೇಕಿದೆ. ಇಹಲೋಕದಲ್ಲಿ ಸರಿಯಾದ ದಾರಿ ತೋರಿಸುವ ಕಾರ್ಯ ಧಾರ್ಮಿಕ ಗುರುಗಳು ಮಾಡುತ್ತಿದ್ದಾರೆ. ಇಂದು ಸಂಘಟನೆ ಮಾಡುತ್ತಿರುವ ಉತ್ತಮ ಕೆಲಸ ಶಾಶ್ವತವಾಗಿರಲಿ ಎಂದು ಆಶಿಸಿದರು.
ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ತ್ವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬ್ದುಲ್ ಅಜೀಝ್ ಬಾಖವಿ, ಮಾಜಿ ಮೇಯರ್ ಕೆ.ಅಶ್ರಫ್, ಪತ್ರಕರ್ತ ವಿದ್ಯಾಧರ್ ಶೆಟ್ಟಿ, ಉಳ್ಳಾಲ ನಗರಸಭೆ ಸದಸ್ಯರಾದ ಯು.ಎ.ಇಸ್ಮಾಯಿಲ್, ಅಝ್ಗರ್ ಅಲಿ, ಜಬ್ಬಾರ್, ಯು.ಪಿ.ಐಯೂಬ್ ಮಂಚಿಲ, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಆಸೀಫ್ ಅಬ್ದುಲ್ಲಾ, ಸಯ್ಯದ್ ಮದನಿ ದುವಾ ಕಾಲೇಜಿನ ಪ್ರಾಂಶುಪಾಲ ಝೈನ್ ಸಖಾಫಿ ಉಸ್ತಾದ್, ದರ್ಗಾ ಸಮಿತಿ ಉಪಾಧ್ಯಕ್ಷ ಯು.ಯಸ್.ಹನೀಫ್, ಎನ್.ಎ.ಮಹಮೂದ್, ಯು.ಪಿ.ಹಮೀದ್, ಯು.ಎಂ.ಜಬ್ಬಾರ್, ಎಚ್.ಸಿದ್ದೀಖ್, ಯು.ಬಿ.ಇಬ್ರಾಹಿಂ ಮುಂತಾದವರು ಉಪಸ್ಥಿತರಿದ್ದರು.
ಸಯ್ಯಿದ್ ಮದನಿ ಅರೆಬಿಕ್ ಕಾಲೇಜಿನ ಪ್ರಾಂಶುಪಾಲ ಉಸ್ಮಾನ್ ಫೈಝಿ ತೋಡಾರ್ ದುಆ ನೆರವೇರಿಸಿದರು. ಕೆಎಂಕೆ ಮಂಜನಾಡಿ ಸ್ವಾಗತಿಸಿದರು. ಎ.ಎಂ.ಮಹಮ್ಮದ್ ವರದಿ ವಾಚಿಸಿದರು.

`ಟ್ರಸ್ಟ್ ಸಾಮಾಜಿಕ ಮತ್ತು ಧಾರ್ಮಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಏಳು ವರ್ಷಗಳಲ್ಲಿ ಆರ್ಥಿಕವಾಗಿ ಹಿಂದುಳಿದ 47 ಹೆಣ್ಮಕ್ಕಳಿಗೆ ಉಚಿತವಾಗಿ ವಿವಾಹ ನಡೆಸಿದ ಕೀರ್ತಿ ಹೊಂದಿದೆ, ರಂಝಾನ್ ಕಳೆದ ನಂತರ ಎರಡು ಜೋಡಿ ವಿವಾಹ ಕಾರ್ಯಕ್ರಮ ಅವರ ಮನೆಯಲ್ಲೇ ನಡೆಯಲಿದ್ದು, ನಿರಾಶ್ರಿತರಿಗೆ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಲಿದೆ’
ಮಹಮ್ಮದ್ ತ್ವಾಹ, ಟ್ರಸ್ಟ್ ಅಧ್ಯಕ್ಷ


