UN NETWORKS
ಉಳ್ಳಾಲ : ಟಿ.ಐ.ಎಮ್ ಎಸ್ ವೈಎಸ್ ಹಾಗೂ ಎಸ್ಸೆಸ್ಸೆಫ್ ಕಾನೆಕೆರೆ ಶಾಖೆ ಮತ್ತು ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ದೇರಳಕಟ್ಟೆ ಕಾನೆಕೆರೆಯಲ್ಲಿ ನಿರ್ಮಿಸಿದ ತಾಜುಲ್ ಉಲಮಾ ಮಸ್ಜಿದ್ ಉದ್ಘಾಟನೆ ಸಮಾರಂಭ ಹಾಗೂ ಜುಮುಅ ಸಂಸ್ಥಾಪನೆ ಕಾರ್ಯಕ್ರಮ ಎ,26ಶುಕ್ರವಾರ ನಡೆಯಲಿದೆ.

ಖುರ್ರತುಸ್ಸಾದಾತ್ ಸಯ್ಯದ್ ಫಯಲ್ ಕೋಯಮ್ಮ ತಂಙಳ್ ಅಲ್-ಬುಖಾರಿ ಕೂರತ್ ತಾಜುಲ್ ಉಲಮಾ ಮಸ್ಜಿದ್ ಉದ್ಘಾಟಿಸಲಿದ್ದಾರೆ. ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಅಲ್-ಮಶ್ ಹೂರು ತಲಕ್ಕಿ, ಮಂಜನಾಡಿ ಶರಫುಲ್ ಉಲಮಾ ಅಬ್ಬಾಸ್ ಉಸ್ತಾದ್ ಹಾಗೂ ಅಬೂ ಸ್ವಾದಿಕ್ ಬಿ.ಮುಹಮ್ಮದ್ ಫೈಝಿ ಚೆರ್ವತ್ತೂರು ಜುಮುಅ ನೇತೃತ್ವ ವಹಿಸಲಿದ್ದಾರೆ. ಮಗ್ರಿಬ್ ನಮಾಝಿನ ಬಳಿಕ ಬೆಳ್ತಂಗಡಿ ತಾಲೂಕು ಸಂಯುಕ್ತ ಜಮಾಅತ್ ಉಪ ಖಾಝಿ ಸಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಬಾಅಲವಿ ನೇತೃತ್ವದಲ್ಲಿ ಜಾಮಿಅ ಸ ಅದಿಯ್ಯಾ ಹುಸೈನ್ ಸ ಅದಿ ಕೆ.ಸಿ ರೋಡ್ ಮುಖ್ಯ ಪ್ರಭಾಷಣಗೈಯಲಿದ್ದಾರೆ ಎಂದು ತಾಜುಲ್ ಉಲಮಾ ಚಾರಿಟೇಬಲ್ ಟ್ರಸ್ಟ್ ನ ಪ್ರ.ಕಾರ್ಯದರ್ಶಿ ವಿ.ಯು ಇಸ್ಹಾಕ್ ಝುಹ್ ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


