UN NETWORKS
ಕೋಟೆಕಾರ್ : ಮನೆ ಕಾಯುವ ಮಹಿಳೆ ದೇಶ ಕಾಯ ಬಲ್ಲಳು ಎಂದು ತೋರಿಸಿದ ಪ್ರಧಾನಿ ನರೇಂದ್ರ ಮೋದಿಯವರು ರಕ್ಷಣಾ ಇಲಾಖೆಯಂತಹ ಮಹತ್ವದ ,ಸವಾಲಿನ ಸಚಿವ ಸ್ಥಾನವನ್ನು ಮಹಿಳೆಗೆ ನೀಡಿ ಸ್ತ್ರೀ ಶಕ್ತಿಗೆ ಗೌರವ ನೀಡಿದವರು. ಎಂದು ರಾಜ್ಯ ಬಿ.ಜೆ.ಪಿ. ಸಹ ವಕ್ತಾರೆ ಸುಲೋಚನ ಜಿ.ಕೆ.ಭಟ್ ರವರು ತಿಳಿಸಿದರು.

ಅವರು ಮಂಗಳೂರು ವಿಧಾನ ಸಭಾ ಕ್ಷೇತ್ರದ ಕೋಟೆಕಾರ್ ಶಕ್ತಿ ಕೇಂದ್ರದ ಮಹಿಳಾ ಮೋರ್ಚಾದ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ನರೇಂದ್ರ ಮೋದಿಯವರು ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ಮಹಿಳಾ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮ ಮುಖೇನ ಸಬಲೀಕರಣಕ್ಕೆ ಆದ್ಯತೆ ನೀಡಿದ್ದಾರೆ. ಮುದ್ರಾ ಯೋಜನೆ ಮೂಲಕ ಸ್ವ ಉದ್ಯೋಗ, ಉಜ್ವಲಾ ಯೋಜನೆ ಮೂಲಕ ಗ್ಯಾಸ್ ಸ್ಟವ್ ವಿತರಣೆ, ಗರ್ಭಿಣಿ ಮಹಿಳೆಯರಿಗೆ 6000 ರೂ , ಉದ್ಯೋಗಸ್ಥ ಗರ್ಭಿಣಿ ಮಹಳೆಯರ ಬಾಣಂತಿ ರಜೆ ಆರು ತಿಂಗಳಿಗೆ ವಿಸ್ತರಣೆ ಇಂತ ಹತ್ತು ಹಲವು ಯೋಜನೆ ನೀಡಿರುತ್ತಾರೆ ಎಂದರು.
ಕ್ಷೇತ್ರಧ್ಯಕ್ಷರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ರವರು ಮಹಿಳಾ ಮೋರ್ಚಾದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಮನೆ ಮನೆಗೆ ಬೇಟಿ ನೀಡಿ ನಮ್ಮ ಸರಕಾರದ ಯೋಜನೆಯ ಬಗ್ಗೆ ವಿಚಾರ ತಿಳಿಸಬೇಕೆಂದರು.ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂಜಾ ಪೈ, ನಗರ ಪಾಲಿಕೆ ಸದಸ್ಯೆ ರೂಪಾ ಬಂಗೇರ, ಜಿಲ್ಲಾ ಕಾರ್ಯದರ್ಶಿ ನಮಿತಾ ಶ್ಯಾಮ್, ಜಿಲ್ಲಾ ಮಹಿಳಾ ಮೋರ್ಚ ಪ್ರ.ಕಾರ್ಯದರ್ಶಿ ರಾಜೀವಿ ಕೆಂಪುಮಣ್ಣು, ಕ್ಷೇತ್ರ ಪ್ರ.ಕಾರ್ಯದರ್ಶಿ ಮೋಹನ್ ರಾಜ್ ಕೆ.ಆರ್., ಜಿ.ಪಂ.ಸದಸ್ಯೆ ಧನಲಕ್ಷೀ ಗಟ್ಟಿ, ಕೋಟೆಕಾರ್ ಪಟ್ಟಣ ಪಂ.ಉಪಾಧ್ಯಕ್ಷೆ ಭಾರತಿ ಗಟ್ಟಿ, ಸೋಮೇಶ್ವರ ಗ್ರಾಮ ಪಂ. ಉಪಾಧ್ಯಕ್ಷೆ ಸುಶೀಲಾ ನಾಯಕ್, ತಲಪಾಡಿ ಗ್ರಾಮ ಪಂ. ಉಪಾಧ್ಯಕ್ಷೆ ಜಯಲಕ್ಷ್ಮಿ, ಮಾಜಿ ತಾಲ್ಲೂಕು ಪಂ.ಸದಸ್ಯೆ ಪುಷ್ಪಾಲತ ಶೆಟ್ಟಿ, ಉಪಸ್ಥಿತರಿದ್ದರು.
ಮಹಿಳಾ ಮೋರ್ಚ ಕ್ಷೇತ್ರದ ಅಧ್ಯಕ್ಷೆ ರಮಣಿ ಸೋಮೇಶ್ವರ ಸ್ವಾಗತಿಸಿದರು, ಮಮತಾ ಮೋಹನ್ ರಾಜ್ ಕನೀರ್ ತೋಟ ವಂದಿಸಿದರು. ಕ್ಷೇತ್ರ ಉಪಾಧ್ಯಕ್ಷೆ ಜಯಶ್ರೀ ಕರ್ಕೇರ ನಿರೂಪಿಸಿದರು.


