UN NETWORKS
ಉಳ್ಳಾಲ : ಉಳ್ಳಾಲ ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನ ದಲ್ಲಿ ಶ್ರೀ ಗುಳಿಗ ಕೋಲದ ಪ್ರಯುಕ್ತ ಮೊಗವೀರ ಪಟ್ಣದ ರಾಣಿ ಅಬ್ಬಕ್ಕ ಯುವಕ ಮಂಡಲ ವತಿಯಿಂದ ಧಾರ್ಮಿಕ ಸಭೆ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅತ್ತಾವರ ಶ್ರೀ ಉಮಾ ಮಹೇಶ್ವರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮತಿ ಅಧ್ಯಕ್ಷ ಹರೀಶ್ ಕುತ್ತಾರು ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಬೇಕಾದರೆ ಆಧ್ಯಾತ್ಮ ಚಿಂತನೆ ಅಗತ್ಯ. ಆ ಬಗ್ಗೆ ಜನರು ಹೆಚ್ಚೆಚ್ಚು ತೊಡಗಿಸಿಕೊಂಡರೆ ದೇಶದಲ್ಲಿ ಶಾಂತಿ ನೆಲೆಸಿ ದೇಶ ಸುಭೀಕ್ಷವಾಗುತ್ತದೆ ಎಂದು ಹೇಳಿದರು. ಉಳ್ಳಾಲ ಭಗವತೀ ತೀಯಾ ಸಮಾಜದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್ ಮಾತನಾಡಿ ಮೊಗವೀರರು ಒಗ್ಗಟ್ಟಿಗೆ ಮೊದಲ ಸ್ಥಾನವನ್ನು ನೀಡುವುದರೊಂದಿಗೆ ದೇವರ ಮೇಲೆ ಅವರಿಟ್ಟ ವಿಶ್ವಾಸ ಅವರ್ಣನೀಯ. ಆ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ತೊಡಗುವುದಲ್ಲದೇ ಅತೀವ ದೈರ್ಯದಿಂದ ದೇಶ ಕಟ್ಟುವ ಮನೋಭಾವ ಅವರಿಗೆ ರಕ್ತಗತವಾಗಿದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಭರತ್ ಕುಮಾರ್ ಯುವ ಶಕ್ತಿ ದುರ್ವ್ಯಸಗಳಿಂದ ದೂರವಿದ್ದು ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೆ ನಮ್ಮ ದೇಶ ಸೂಪರ್ ಪವರ್ ಆಗೋದರಲ್ಲಿ ಸಂಶಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ವಸಂತ ಅಮೀನ್ ಗುರಿಕಾರ, ಮಾರುತಿ ಯುವಕ ಮಂಡಲದ ಅಧ್ಯಕ್ಷ ಅಶ್ವಿನ್ ಕೋಟ್ಯಾನ್, ಬ್ರದರ್ಸ್ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಪುತ್ರನ್, ಶಿವಾಜಿ ಜೀವರಕ್ಷಕ ಸಂಘದ ಕಿರಣ್ ಪುತ್ರನ್, ಜೀವ ರಕ್ಷಕ ಈಜುಗಾರ ಸಂಘದ ಮೋಹನ್ ಪುತ್ರನ್ ಹಾಗೂ ರಾಣಿ ಅಬ್ಬಕ್ಕ ಯುವಕ ಮಂಡಲದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಉಪಸ್ಥಿತರಿದ್ದರು.ರಾಜೇಶ್ ಕೋಟ್ಯಾನ್ ಸ್ವಾಗತಿಸಿದರು. ಪ್ರಶಾಂತ್ ಬಂಗೇರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗುರುಪ್ರಸಾದ್ ಬಂಗೇರ ವಂದಿಸಿದರು. ವಿಶ್ವನಾಥ್ ಬಂಗೇರ, ಶಂಕರ್ ಬಂಗೇರ, ಶರ್ಮಿಳಾ ಬಂಗೇರ ಕಾರ್ಯಕ್ರಮ ನಿರೂಪಿಸಿದರು.
ಸ್ಥಳೀಯ ಪ್ರತಿಭೆಗಳು ಹಾಗೂ ನಾಟ್ಯ ವೈವಿದ್ಯ ಹಾಗೂ ಶ್ರೀ ವಿಠಲ ನಾಯಕ್ ಬಳಗ ಕಲ್ಲಡ್ಕ ತಂಡದಿಂದ ಗೀತ ಸಾಹಿತ್ಯ ಸಂಭ್ರಮ ಪ್ರದರ್ಶನ ನಡೆಯಿತು.


