UN NETWORKS
ಉಳ್ಳಾಲ : ಎಸ್.ಎಸ್.ಎಫ್ ಉಳ್ಳಾಲ ಡಿವಿಸನ್, ಎಸ್.ಎಸ್.ಎಫ್ ದ.ಕ. ಜಿಲ್ಲಾ ಬ್ಲಡ್ ಸೈಬೋ, ಎಸ್.ಎಸ್.ಎಫ್ ಉಳ್ಳಾಲ ಸೆಕ್ಟರ್, ಎಸ್.ಎಸ್.ಎಫ್ ಮುಕ್ಕಚ್ಚೇರಿ ಯುನಿಟ್ ಇದರ ಆಶ್ರಯದಲ್ಲಿ ಕೆ.ಎಮ್.ಸಿ. ಆಸ್ಪತ್ರೆ ಇದರ ಸಹಬಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಮುಕ್ಕಚ್ಚೇರಿ ಜಂಕ್ಷನ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದ.ಕ.ಜಿಲ್ಲಾ ಎಸ್.ಎಸ್.ಎಫ್ ಉಪಾಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಎಸ್.ಎಸ್.ಎಫ್ ಕಾರ್ಯಕರ್ತರು ಹಮ್ಮಿ ಕೊಳ್ಳುತ್ತಿರುವ ಕಾರ್ಯಕ್ರಮವು ಜಾತಿ ಮತ ಬೇದವಿಲ್ಲದೆ ಎಲ್ಲಾ ರೋಗಿಗಳಿಗೂ ಅವಶ್ಯಕತೆ ಇರುವ ರಕ್ತವನ್ನು ನೀಡಿ ಮಾನವೀಯತೆಯ ಸಂದೇಶವನ್ನು ಇಡೀ ಕರ್ನಾಕ ದಾಂದ್ಯಂತ ಹಬ್ಬುತ್ತಿರುವ ಕಾರ್ಯವು ಶ್ಲಾಘನೀಯ ಕಾರ್ಯಕ್ರಮವಾಗಿದೆ. ಜಿಲ್ಲೆಯ 11 ಡಿವಿಸನ್ ಮತ್ತು ಸೆಕ್ಟರ್ ಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ 4,500 ಯುನಿಟ್ ಗಿಂತಲೂ ಅಧಿಕ ರಕ್ತ ಶೇಖರಣೆ ಮಾಡಲು ಬ್ಲಡ್ ಸೈಬೋ ದಿಂದ ಸಾದ್ಯವಾಗಿದೆ ಎಂದರು.
ಉಳ್ಳಾಲ ಸೆಕ್ಟರ್ ಅಧ್ಯಕ್ಷ ಶಬೀರ್ ಪೇಟೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು, ಮುಕ್ಕಚ್ಚೇರಿ ಜುಮಾ ಮಸೀದಿ ಖತೀಬರಾದ ಝೈದ್-ಬಾ-ಅಹ್ಸನ್ ದುಆ ನೆರವೇರಿಸಿದರು.
ದ.ಕ.ಜಿಲ್ಲಾ ಎಸ್.ಎಸ್.ಎಫ್ ಉಪಾಧ್ಯಕ್ಷ ಜಮಾಲುದ್ದೀನ್ ಸಖಾಫಿ, ಉಳ್ಳಾಲ ಡಿವಿಸನ್ ಅಧ್ಯಕ್ಷ ಕುಬೈಬ್ ತಂಗಳ್, ಡಾ| ಪ್ರಜ್ವಲ್ ಕೆ.ಎಮ್.ಸಿ, ಎಸ್.ವೈ.ಎಸ್ ಉಳ್ಳಾಲ ಸೆಂಟರ್ ಕಾರ್ಯದರ್ಶಿ ಬಶೀರ್ ಸಖಾಫಿ, ಡಿವಿಸನ್ ಬ್ಲಡ್ ಸೈಬೋ ನಿರ್ದೇಶಕ ಹಕೀಮ್ ಪೂ ಮಣ್ಣು, ಉಳ್ಳಾಲ ಸೆಕ್ಟರ್ ಉಸ್ತುವಾರಿ ಇಸ್ಮಾಯಿಲ್ ತಲಪಾಡಿ, ಉಳ್ಳಾಲ ಸೆಕ್ಟರ್ ಬ್ಲಡ್ ಸೈಬೋ ನಿದೇಶಕ ಮೊಹಮ್ಮದ್ ಕೈಕೋ, ಎಸ್.ಎಸ್.ಎಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಜಾಬೀರ್ ಫಾಲಿಳಿ, ಉಳ್ಳಾಲ ಸೆಕ್ಟರ್ ಖಲೀಫ ಹಾಫೀಲ್ ಮುಹೀನ್, ಮುಕ್ಕಚ್ಚೇರಿ ಯುನಿಟ್ ಕಾರ್ಯಕರ್ತರಾದ ಅಝೀಮ್, ಶಿಹಾನ್, ಬಾಶೀತ್, ಫಾಝೀಲ್ ಮೊದಲಾದವರು ಉಪಸ್ಥಿತರಿದ್ದರು.
ಮುಝಮ್ಮಿಲ್ ಮದನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಅಝೀಮ್ ಮುಕ್ಕಚ್ಚೇರಿ ವಂದಿಸಿದರು.


