UN NETWORKS
ಉಳ್ಳಾಲ: ಮಹಿಳೆ ಕುಟುಂಬದ ಆರೋಗ್ಯದ ಕಡೆ ಗಮನ ನೀಡುವುದರ ಜೊತೆಗೆ ತನ್ನ ಆರೋಗ್ಯದ ಕಡೆಗೂ ಹೆಚ್ಚು ಗಮನ ಹರಿಸಬೇಕು, ಮಹಿಳೆ ಆರೋಗ್ಯವಾಗಿದ್ದರೆ ಕುಟುಂಬವೂ ಆರೋಗ್ಯವಾಗಿದ್ದಂತೆ ಎಂದು ಯೆನಪೋಯ ಡೀಮ್ಡ್ ಟು ಬಿ ಯುನಿವರ್ಸಿಟಿಯ ಕೌನ್ಸಿಲರ್ ಮತ್ತು ವಿದ್ಯಾರ್ಥಿಗಳ ಕ್ಷೇಮಪಾಲನಾ ಅಧಿಕಾರಿ ಸುನಿತಾ ಪ್ರಭು ಹೇಳಿದರು.
ಜೈ ಹನುಮಾನ್ ಕ್ರೀಡಾ ಮಂಡಳಿ ಬಟ್ಟೆದಡಿ ಕುತ್ತಾರ್ ಇದರ ಮಹಿಳಾ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಕುತ್ತಾರಿನಲ್ಲಿ ಭಾನುವಾರ ನಡೆದ “ಆರೋಗ್ಯ ಮತ್ತು ಕೌಟುಂಬಿಕ ಸಲಹಾ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುಟುಂಬ ಜೀವನ, ಪ್ರೀತಿ, ಪೋಷಕರ ಪಾತ್ರ, ಮಹಿಳೆಯರ ಆರೋಗ್ಯ ಹಾಗೂ ಮಹಿಳೆಯರ ಜೀವನ ಶೈಲಿಯ ಸಮತೋಲನ ಹಾಗೂ ಉತ್ತಮ ಆರೋಗ್ಯದ ಗುಟ್ಟು ಯಶಸ್ವೀ ಜೀವನವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಸಮಿತಿಯ ಅಧ್ಯಕ್ಷೆ ಪ್ರಮೀಳಾ ಗಾಣದಮನೆ ವಹಿಸಿದ್ದರು. ಭಾಗೀರಥಿ ಪ್ರಾಸ್ತವಿಕವಾಗಿ ಮಾತನಾಡಿದರು. ಕುಮಾರಿ ಲಿಮಿತ ಸ್ವಾಗತಿಸಿದರು. ತೇಜಶ್ರಿ ಕಂಪ ವಂದಿಸಿದರು.


