UN NETWORKS
ಕಾಪಿಕಾಡ್ : ಭಾರತಕ್ಕೆ ಅದ್ಭುತ ನಾಯಕ ಸಿಕ್ಕಿದ್ದಾರೆ. ಪಾಕಿಸ್ತಾನದ ಕುಕೃತ್ಯಕ್ಕೆ ಅವರದೇ ಭಾಷೆಯಲ್ಲಿ ಉತ್ತರ ನೀಡಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ತಮ್ಮ ಸರಕಾರದ ಅವಧಿಯಲ್ಲಿ ಆರು ಬಾರಿ ದಾಳಿ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ 2008ರಲ್ಲಿ ಮುಂಬಯಿ ಮೇಲೆ ಉಗ್ರ ದಾಳಿಯಾಗಿ 165 ಕ್ಕೂ ಹೆಚ್ಚು ನಾಗರಿಕರ ಹತ್ಯೆಯಾಯಿತು. ಆ ಸಂಧರ್ಭದಲ್ಲಿಯೂ ಇದೇ ವಾಯುಸೇನೆ, ಭೂಸೇನೆ, ಇತ್ತು ಆದರೆ ಪಾಕ್ ಮೇಲೆ ಯಾಕೆ ದಾಳಿ ಮಾಡಿಲ್ಲ ಖರ್ಗೆಯವರೇ ಎಂದು ಬಿ.ಜೆ.ಪಿ. ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ ಪ್ರಶ್ನಿಸಿದರು.ಬಿ.ಜೆ.ಪಿ. ಮಂಗಳೂರು ಕ್ಷೇತ್ರ ವತಿಯಿಂದ ಕಾಪಿಕಾಡ್ ಕುದ್ಮಲ್ ರಂಗರಾವ್ ಭವನದಲ್ಲಿ ನಡೆದ ಮೇರಾ ಬೂತ್ ಸಬ್ಸೆ ಮಜ್ಬೂತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾರ್ಯಕರ್ತರು ತಮ್ಮ ಬೂತನ್ನು ಶಕ್ತಿಶಾಲಿಗೊಳಿಸಿ ಮತ್ತೊಮ್ಮೆ ಮೋದಿಜೀಯವರನ್ನು ಪ್ರಧಾನಿಯಾಗಿಸಲು ಕಾರ್ಯಪ್ರವೃತಗೊಳಿಸಬೇಕು. ಯಾಕೆಂದರೆ ನಮಗೆ ಸುಭದ್ರ ಬಲಿಷ್ಠ ಅಭಿವೃದ್ಧಿಯ ದೇಶ ಬೇಕೆಂದರೆ ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ, ಕಾರ್ಯದರ್ಶಿ ಸತೀಶ್ ಕುಂಪಲ, ಚುನಾವಣೆ ಕ್ಷೇತ್ರ ಸಂಚಾಲಕ ಚಂದ್ರಶೇಖರ ಉಚ್ಚಿಲ್, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್ ಹಾಗೂ ಮನೋಜ್ ಆಚಾರ್ಯ ಉಪಸ್ಥಿತರಿದ್ದರು. ಬಳಿಕ ಕಾರ್ಯಕರ್ತರ ಜತೆ ಪ್ರಧಾನಿ ನರೇಂದ್ರ ಮೋದಿಯವರ ಜತೆ ಸಂವಾದ ಕಾರ್ಯಕ್ರಮವನ್ನು ಪ್ರೊಜೆಕ್ಟರ್ ಮೂಲಕ ವೀಕ್ಷಿಸಲಾಯಿತು.


