UN NETWORKS
ಉಳ್ಳಾಲ : ಉಳ್ಳಾಲ ರಾಣಿ ಅಬ್ಬಕ್ಕ ಉತ್ಸವದ ಇತಿಹಾಸದಲ್ಲಿಭಿನ್ನ ಕಾರ್ಯಕ್ರಮಗಳು ನಡೆಯುತ್ತಿದ್ದು ಇದೇ ಮೊದಲ ಬಾರಿಗೆ ಅಬ್ಬಕ್ಕಳ ಜೀವನಚರಿತ್ರೆಯನ್ನು ಚಿತ್ರದ ಮೂಲಕ ವ್ಯಾಖ್ಯಾನಿಸುವ ದಾಖಲಾರ್ಹ ಕಾರ್ಯ ಚಿತ್ರಕಲಾ ಶಿಕ್ಷಕರಿಂದಾಗಿದೆ. ಅಬ್ಬಕ್ಕಳ ಜೀವನವನ್ನು ಚಿತ್ರಕಲೆಯ ಮೂಲಕ ವ್ಯಾಖ್ಯಾನಿಸಲು ಹೊರಟಿರುವ ಕಾರ್ಯ ಶ್ಲಾಘನೀಯವಾಗಿದ್ದು ಚಿತ್ರಕಲಾ ಶಿಕ್ಷಕರು ಈ ಕಾರ್ಯಗಾರವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆರ್. ಸೆಲ್ವಮಣಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಾ. 2 ಹಾಗೂ 3ರಂದು ಉಳ್ಳಾಲದಲ್ಲಿ ನಡೆಯಲಿರುವ ವೀರರಾಣಿ ಆಬ್ಬಕ್ಕ ಉತ್ಸವ 2018-19ರ ಪ್ರಯುಕ್ತ ಉಳ್ಳಾಲ ಮೊಗವೀರಪಟ್ಣದ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚಿತ್ರಕಲಾ ಶಿಕ್ಷಕರಿಗಾಗಿ ಮೂರು ದಿನಗಳ ಕಾಲ ನಡೆಯಲಿರುವ ಕಲಾಕೃತಿಗಳ ರಚನಾ ಕಾರ್ಯಗಾರ ಅಬ್ಬಕ್ಕ-ಬಣ್ಣದ ವ್ಯಾಖ್ಯಾನಕ್ಕೆ ಅಬ್ಬಕ್ಕನ ಚಿತ್ರವನ್ನು ಕ್ಯಾನ್ವಾಸ್ನಲ್ಲಿ ರಚಿಸುವ ಮೂಲಕ ಅವರು ಕಾರ್ಯಗಾರ ಉದ್ಘಾಟಿಸಿದರು.ಕಾರ್ಯಗಾರದಲ್ಲಿ ಚಿತ್ರಕಲಾ ಶಿಕ್ಷಕರು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವ ಅಬ್ಬಕ್ಕನ ಚಿತ್ರರಚನೆಗಳನ್ನು ಬೇರೆ ಬೇರೆ ಕಚೇರಿಗಳಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶಿಸುವ ಸಲುವಾಗಿ ಕಾಳಜಿ ವಹಿಸಿ ಕಾಪಾಡಿಕೊಳ್ಳಿ. ಮೂರು ದಿನಗಳ ಕಾಲ ಚೆನ್ನಾಗಿ ಚಿತ್ರ ರಚಿಸುವುದರ ಜೊತೆಗೆ ಅಬ್ಬಕ್ಕ ಉತ್ಸವ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ವಿದ್ಯಾಂಗ ಉಪ ನಿರ್ದೇಶಕ ವೈ. ಶಿವರಾಮಯ್ಯ ಮಾತನಾಡಿ ರಾಣಿ ಅಬ್ಬಕ್ಕನ ಜೀವನಕ್ಕೆ ಸಂಬಂಧಿಸಿದ ಚಿತ್ರಕಲಾ ಕೃತಿಗಳನ್ನು ಶಿಕ್ಷಣ ಇಲಾಖೆಯ ಕಚೇರಿಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ಪ್ರೊ. ಅಮೃತ ಸೋಮೇಶ್ವರ ಅವರ ಸಂಗ್ರಹದಲ್ಲಿರುವ ಅಬ್ಬಕ್ಕಳ ಇತಿಹಾಸ ಪುಸ್ತಕವನ್ನು ಸಂಗ್ರಹಿಸುವ ಮೂಲಕ ಚಿತ್ರದ ರಚನೆಯಲ್ಲಿತೊಡಗಿಸಿಕೊಂಡಿರುವುದು ನಿಜಕ್ಕೂ ಅಭಿನಂದನೀಯ. ಹಾಗೆಯೇ ಊರಿನ ಜನತೆಗೆ ಮಾಹಿತಿ ಸಂದೇಶ ನೀಡುವ ಸಂತಸ ಪಡುವ ಹೊಸ ವಿನ್ಯಾಸಗಳು ಮೂಡಿ ಬರಲಿ ಎಂದು ಅಶಿಸಿದರು.
ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತೆ ಪ್ರಮೀಳಾ, ಉಳ್ಳಾಲ ನಗರಸಭೆಯ ಪೌರಾಯುಕ್ತೆ ವಾಣಿ ವಿ. ಆಳ್ವ, ಹಿರಿಯ ವಾರ್ತಾಧಿಕಾರಿ ರೋಹಿಣಿ, ನಗರಸಭೆಯ ಸ್ಥಳೀಯ ಕೌನ್ಸಿಲರ್ ಮಮತಾ ರಾಘವ ಹಾಗೂ ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವೇದಾವತಿ ಕೆ. ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ 30ಜನ ಚಿತ್ರಕಲಾ ಶಿಕ್ಷಕರು ಪಾಲ್ಗೊಂಡಿದ್ದು ಅಬ್ಬಕ್ಕನ ಜೀವನ ಕುರಿತಾದ ಚಿತ್ರಗಳ ರಚನೆಯಲ್ಲಿ ತೊಡಗಿಸಿಕೊಂಡರು.
ಚಿತ್ರಕಲಾ ಕಾರ್ಯಗಾರ ಮೂರು ದಿನಗಳ ಕಾಲ ನಡೆಯಲಿದೆ.


