UN NETWORKS
ಮುಡಿಪು: ಮುಡಿಪಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೇಂಜರ್ಸ್ ಘಟಕದ ಆಶ್ರಯದಲ್ಲಿ ಚಾರಣ ಕಾರ್ಯಕ್ರಮ ಭಾನುವಾರ ನಡೆಯಿತು.
ಮಕ್ಕಳಲ್ಲಿ ನಿಸರ್ಗದ ಒಲವು ಮೂಡಿಸಿ, ಸದಾ ಲವಲವಿಕೆಯಿಂದ ಇರುವಂತೆ ಮಾಡುವ ಒಂದು ಕಾರ್ಯಕ್ರಮವಾಗಿದೆ. ರೇಂಜರ್ಸ್ಗಳಿಗೆ ಜೀವನ ಶಿಕ್ಷಣ ನೀಡುವುದರ ಜೊತೆಗೆ ಪ್ರಕೃತಿ ಅಧ್ಯಯನವು ವಿಕಾಸಗೊಳ್ಳಲು ನೆರವಾಗುತ್ತದೆ. ಅವರ ಪ್ರತಿಭೆ ಆಸಕ್ತಿಗಳಿಗೆ ಹೊಸ ಹುಮ್ಮಸ್ಸು ನೀಡುವ ಪ್ರಯತ್ನವಾಗಿದೆ. ಪರಸ್ಪರ ಗೀತೆಯನ್ನು ಹೇಳುತ್ತಾ, ಧಣಿದಾಗ ಗುಂಪಿನಲ್ಲಿ ಸೇರಿ ವಿನೋದವಳಿಗಳನ್ನು ನಡೆಸುತ್ತಾ, ಪರಸ್ಪರ ಸಹೋದರಿಯರೊಂದಿಗೆ ನಗುತ್ತಾ ಇತರರನ್ನು ನಗಿಸುತ್ತಾ ಮುಡಿಪು ಗುಡ್ಡೆಯನ್ನು ಏರಿ ಜೋಸೆಫ್ ಅವರ ಚರ್ಚಿನ ವರೆಗೆ ಚಾರಣ ಮಾಡಿದರು.
ಅಲ್ಲಿಯ ವಿಶೇಷತೆ, ಪ್ರಕೃತಿ ವೀಕ್ಷಣೆ ಮತ್ತು ಪರಿಸರದ ಪವಾಡಗಳ ಕುರಿತು ಪ್ರೀತಿ ಡಿಸೋಜ ಮತ್ತು ಫೌಸ್ಟಿನ್ ಡಿಸೋಜ ಅವರು ರೇಂಜರ್ಸ್ಗಳಿಗೆ ತಿಳಿಸಿದರು. ಸುಮಾರು 15ನಿಮಿಷಗಳ ಕಾಲ ಅಲ್ಲಿನ ಧ್ಯಾನಗೃಹದಲ್ಲಿ ಎಲ್ಲರು ಸೇರಿ ಮನಶಾಂತಿಯ ಅರಿವನ್ನು ಪಡೆದರು. ರೇಂಜರ್ಸ್ ಲೀಡರ್ ಶುಭ.ಕೆ. ಎಚ್ ಕಾರ್ಯಕ್ರಮ ಸಂಯೋಜಿಸಿದರು. ಘಟಕದ 21ರೇಂಜರ್ಸ್ಗಳು ಭಾಗವಹಿಸಿದ್ದರು.


