UN NETWORKS
ಉಳ್ಳಾಲ: ` ಸಮಸ್ತ ಸಮಾಜ ಹಾಗೂ ರಾಣಿ ಅಬ್ಬಕ್ಕ ಚರಿತ್ರೆ’ ಸಾಮಾಜಿಕ ಪೌರಾಣಿಕ ಐತಿಹಾಸಿಕ ಕೃತಿ ಬಿಡುಗಡೆ ಸಮಾರಂಭ ಇತ್ತೀಚೆಗೆ ಅಂಬಿಕಾರೋಡಿನ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು.
ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ ಕೃತಿ ಬಿಡುಗಡೆಗೊಳಿಸಿದರು. ಕೆ.ವಿಠಲದಾಸ್ ಗಟ್ಟಿ ಕಾಯಂಗಳ ಇವರ ಸಾಹಿತ್ಯದಲ್ಲಿ ಕೃತಿ ರಚನೆಯಾಗಿದೆ. ಈ ಸಂದರ್ಭ ಗಟ್ಟಿ ಸಮಾಜದ ಅಧ್ಯಕ್ಷ ಪವಿತ್ರ ಕುಮಾರ್ ಗಟ್ಟಿ, ಉಳ್ಳಾಲ ನಗರಸಭೆ ಸದಸ್ಯ ದಿನಕರ್ ಉಳ್ಳಾಲ್, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಮಮತಾ ಡಿ.ಯಸ್ ಗಟ್ಟಿ, ರವೀಂದ್ರನಾಥ ಪೂಂಜಾ, ನ್ಯಾಯವಾದಿ ಪುಷ್ಪಲತಾ, ಟಿ.ಎಲ್ ಗಟ್ಟಿ, ಕೃಷ್ಣ ಗಟ್ಟಿ ಕೋಟೆಕಾರು, ಪದ್ಮನಾಭ ಬಜಿಲಕೇರಿ, ಪದ್ಮಾವತಿ ಕಾಯಂಗಳ, ನವೀನ್ ಗಟ್ಟಿ ಬೆಂಗಳೂರು ಉಪಸ್ಥಿತರಿದ್ದರು.ಬಿ. ನಾರಾಯಣ ಕುಂಪಲ ನಿರೂಪಿಸಿದರು. ವೆಂಕಟೇಶ್ ವಂದಿಸಿದರು.


