UN NETWORKS
ಮುಡಿಪು : ಸೈನಿಕರನ್ನು ಕೊಂದ ಪಾಕ್ ವಿರುದ್ಧ ವಿಶ್ವವೇ ತಿರುಗಿ ಬಿದ್ದಿರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲಿ ಮಿಸೈಲ್ ಬೀಳ್ತದೋ, ಏನಾಗುತ್ತದೋ ಗೊತ್ತಿಲ್ಲ. ಈ ಹಿನ್ನೆಲೆಯಲ್ಲಿ ದೇಶ ಕಾಯುವ ಸೈನಿಕರಿಗಾಗಿ ಪ್ರತಿಯೊಬ್ಬರೂ ಒಂದು ಹೊತ್ತಿನ ಅನ್ನತ್ಯಾಗ ಮಾಡುವ ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಮುಖಂಡ ಟಿ.ಜಿ.ರಾಜಾರಾಮ್ ಭಟ್ ಕರೆ ನೀಡಿದರು.

ಮುಡಿಪುವಿನಲ್ಲಿ ಮಂಗಳವಾರ ನಡೆದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ, ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ದೇಶ ತ್ಯಾಗಕ್ಕೆ ಹೆಸರಾಗಿದ್ದು, ಹುತಾತ್ಮ ಯೋಧ ಗುರು ಅವರ ಪತ್ನಿ ಸೈನ್ಯಕ್ಕೆ ಸೇರುವುದಾಗಿ ಮಾಡಿರುವ ಪ್ರತಿಜ್ಞೆ, ಒರಿಸ್ಸಾದ ಯೋಧ ರಾಮ ಠಾಕೂರ್ ಅವರ ತಂದೆ ಕಿರಿಯ ಪುತ್ರನನ್ನೂ ಸೈನ್ಯಕ್ಕೆ ಸೇರಿಸುವ ಬಗ್ಗೆ ಆಡಿರುವ ಮಾತುಗಳು ತ್ಯಾಗಕ್ಕೆ ಸಾಕ್ಷಿಯಾಗಿದೆ. ಯೋಧರ ಬಲಿದಾನ ಎಂದಿಗೂ ವ್ಯರ್ಥವಾಗದು. 45 ಸೈನಿಕರ ಜೀವಕ್ಕೆ ಬದಲು 450 ಪಾಪಿ ಪಾಕ್ ಸೈನಿಕರ ಜೀವ ಬಲಿ ಪಡೆಯುವ ದಿನ ದೂರವಿಲ್ಲ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.ಇದೇ ಸಂದರ್ಭದಲ್ಲಿ ನಿವೃತ್ತ ಯೋಧರಾದ ಪ್ರಭಾಕರ ಮುಡಿಪು, ಗೋಪಾಲ ಮೂಲ್ಯ ಕಂಬಾಜೆ, ಪಿ.ಮಹಾಲಿಂಗ ಭಟ್ ಕಂಬಳಪದವು, ಸಂತೋಷ್, ರಾಮಕೃಷ್ಣ ಶಾಸ್ತ್ರಿ ಹೂಹಾಕುವ ಕಲ್ಲು ಇವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಮಹೇಶ್ ಚೌಟ, ಜಗದೀಶ್ ಆಳ್ವ ಕೂವೆತ್ತಬೈಲು, ಅಅಸ್ಗರ್ ಸಾಂಬಾರು ತೋಟ, ಚಂದ್ರಶೇಖರ ಕಲ್ಲಾಪು ಇನ್ನಿತರರು ಉಪಸ್ಥಿತರಿದ್ದರು.


