UN NETWORKS
ಮುಡಿಪು : ನೂರಾನಿಯಾ ಜುಮಾ ಮಸೀದಿ ಮತ್ತು ಸಲಾಹುದ್ದೀನ್ ಸೆಕೆಂಡರಿ ಮದ್ರಸ ಸಾಂಬಾರ್ ತೋಟ ಮುಡಿಪು ಮತ್ತು ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಸಾಂಬಾರ್ ತೋಟ ಇವರ ಜಂಟಿ ಆಶ್ರಯದಲ್ಲಿ ಕಾಶ್ಮೀರದ ಪುಲ್ವಾನಾದಲ್ಲಿ ನಮ್ಮ ಸೈನಿಕರ ಮೇಲೆ ನಡೆದ ಪೈಶಾಚಿಕ ಕೃತ್ಯವನ್ನು ಖಂಡಿಸಿ. ಖಂಡನಾ ಸಭೆ ಮದ್ರಸ ವಠಾರದಲ್ಲಿ ಶನಿವಾರ ಬೆಳಿಗ್ಗೆ ನಡೆಯಿತು.
ನೂರಾನಿಯಾ ಜುಮಾ ಮಸೀದಿಯ ಖತೀಬರಾದ ಪಿ.ಕೆ.ಮೊಹಮ್ಮದ್ ಮದನಿ ,ಮಸೀದಿಯ ಅಧ್ಯಕ್ಷರಾದ ಇಬ್ರಾಹಿಮ್ ಹಾಜಿ, ಕಾರ್ಯದರ್ಶಿ ಎಸ್.ಇ.ಮೊಹಮ್ಮದ್, ಸದಸ್ಯರಾದ ನಾಸೀರ್ ಅರಫಾ, ಜೊತೆ ಕಾರ್ಯದರ್ಶಿ ಹಸನ್ ಹಾಜಿ, ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ಸಾಂಬಾರ್ ತೋಟ ಇದರ ಸಂಘಟನಾ ಕಾರ್ಯದರ್ಶಿ ಅಸ್ಗರ್ , ಪ್ರಧಾನ ಕಾರ್ಯದರ್ಶಿ ಯಾಸೀರ್ ಅಹ್ಮದ್, ಕಾರ್ಯದರ್ಶಿ ಎಸ್.ಎಚ್.ಅಝೀಝ್, ಸದಸ್ಯರಾದ ಶರೀಫ್ ಸಾಂಬಾರ್ ತೋಟ, ಝಾಹೀದ್, ವಿಸ್ಡಮ್ ವೆಲ್ಫೇರ್ ಅಸೋಸಿಯೇಶನ್ ಗೌರವ ಅಧ್ಯಕ್ಷ ಎಸ್.ಎಚ್.ಇಬ್ರಾಹಿಮ್, ಮಸೀದಿಯ ಮುಖ್ಯ ಉಪಾಧ್ಯಾಯರಾದ ಖಾಸಿಮ್ ಸ ಅದಿ, ಅದ್ಯಾಪಕರಾದ ಮುಸ್ತಫ ಸ ಅದಿ, ಆರೀಸ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.


