UN NETWORKS
ಉಳ್ಳಾಲ:ವಿದ್ಯಾರ್ಥಿಗಳಿಗೆ ತಂಬಾಕು ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದ ಕುತ್ತಾರು ಮದನಿ ನಗರದಲ್ಲಿರುವ ಹೊಟೇಲ್ ಮಾಲೀಕನ ಮತ್ತು ಪ್ರಬಂಧಕನ ವಿರುದ್ದ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ರೂ.,14,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮದನಿ ನಗರದ ದ್ವಾರಕಾಮಯಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಹೊಟೇಲ್ ಮಾಲೀಕ ಜೋಜೊ ಜೋಸೆಫ್ ಮತ್ತು ಪ್ರಬಂಧಕ ಪುತ್ತೂರು ಕುರಿಯ ದ ಸಲೀಂ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.ಹೊಟೇಲಿನಲ್ಲಿ ಅಕ್ರಮವಾಗಿ ಸ್ಮೋಕಿಂಗ್ ಹಟ್ ನಿರ್ಮಿಸಿ ವಿದ್ಯಾರ್ಥಿಗಳಿಗೆ ಸಿಗರೇಟು, ತಂಬಾಕು ಸೇವನೆಗೆ ಅವಕಾಶ ಮಾಡಿಕೊಡುತ್ತಿದ್ದರು. ಈ ಸಂಬಂಧ ಉಳ್ಳಾಲ ಪೊಲೀಸರು ದಾಳಿ ನಡೆಸಿ ಎಂಟು ಹುಕ್ಕಾ ಪಾಟ್, 57 ತಂಬಾಕು ಮಿಶ್ರಿತ ಫ್ಲೇವರ್ ಸೇರಿದಂತೆ ಒಟ್ಟು ರೂ. 14,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇಬ್ಬರ ವಿರುದ್ಧ ಕೋಕ್ಟಾ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.
ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ , ಪಿಎಸ್ ಐ ಗುರುವಪ್ಪ ಕಾಂತಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ


