UN NETWORKS
ಮುಡಿಪು : ಯುವಕರು ಕಟ್ಟಿಕೊಂಡ ಬ್ಲಡ್ ಸೋಮ ತರಣ್ ಮಂಗಳೂರು ತಂಡ ಮೂಲ ಉದ್ದೇಶಕ್ಕೆ ಜಾಸ್ತಿ ಒತ್ತು ಕೊಡುವ ಕೆಲಸ ಸಮಾಜದಲ್ಲಿ ಮಾಡುತ್ತಿದೆ. ಈ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿಯುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಕಾರ್ಯ ಶ್ಲಾಘನೀಯ ಎಂದು ಮುಡಿಪು ಬ್ರೈಟ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಜಲೀಲ್ ಮೋಂಟುಗೋಳಿ ಅಭಿಪ್ರಾಯಪಟ್ಟರು.
ಬ್ಲಡ್ ಡೋನರ್ಸ್ ಮಂಗಳೂರು ಇದರ ಐದನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಮುಡಿಪು ಭಾಗದಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಾಣ ಕಾರ್ಯಕ್ಕೆ ನಡೆದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಐದು ವರ್ಷಗಳಾದರೂ ವಾರ್ಷಿಕೋತ್ಸವ ಆಚರಣೆಗೆ ದುಂದು ವೆಚ್ಚ ಮಾಡದೆ ಸಂಘಟನೆಯು ನಿರಾಶ್ರಿತರ ಸಹಕಾರಕ್ಕೆ ನಿಂತು ಮೂಲ ಉದ್ದೇಶವನ್ನು ಈಡೇರಿಸುತ್ತಾ ಬಂದಿದೆ. ಇದೀಗ ಬಡಕುಟುಂಬದವರಿಗೆ ಮೂರು ಮನೆಗಳ ನಿರ್ಮಾಣ ಕಾಮಗಾರಿಗೆ ಕೈ ಹಾಕಿರುವುದು ಸಂಘಟನೆ ಯುವಕರ ಮಹೋನ್ನತ ಕಾರ್ಯ. ರಕ್ತ ಕೊಡುವುದರ ಜೊತೆಗೆ ಮನೆ ನಿರ್ಮಾಣದಲ್ಲಿ ತೊಡಗಿಸಿ ಅಶಕ್ತರ ಪಾಲಿಗೆ ದಾರಿದೀಪ ಆಗಿದ್ದಾರೆ. ಇತ್ತೀಚೆಗೆ ಪ್ರಸವ ಸಂದರ್ಭ ಮಹಿಳೆಯೊಬ್ಬರಿಗೆ 39 ಬಾಟಲಿ ರಕ್ತದ ಕೊರತೆಯ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ತಕ್ಷಣ 100 ಕ್ಕಿಂತ ಅಧಿಕ ಮಂದಿ ಪ್ರತಿಕ್ರಿಯಿಸಿ ಸಕಾಲಕ್ಕೆ ರಕ್ತ ಒದಗಿಸಿ ಮಾನವೀಯತೆ ಮೆರೆದಿದ್ದಾರೆ . 20-30 ರ ಯುವಕರು ದಾರಿ ತಪ್ಪು ವ ಸಂದರ್ಭ ಬ್ಲಡ್ ಡೋನರ್ಸ್ ತಂಡದಿಂದ ಸಮಾಜವನ್ನು ಕಾಯುವ ಕೆಲಸ ಆಗುತ್ತಿದೆ ಎಂದರು.ಗೌಸಿಯಾ ಜುಮಾ ಮಸೀದಿ ಖತೀಬ ಅಸೀಫ್ ಸಖಾಫಿ ದುಆ ನೆರವೇರಿಸಿದರು.ತಾ.ಪಂ ಸದಸ್ಯ ಹೈದರ್ ಕೈರಂಗಳ ಮಾತನಾಡಿ, ಮನೆಯ ವ್ಯವಸ್ಥೆ ಯ ಜವಾಬ್ದಾರಿ ನಿರ್ವಹಿಸುತ್ತಾ ದುಡಿದ ಪಾಲಿನಲ್ಲಿ ಸ್ವಲ್ಪವನ್ನು ಸಮಾಜಕ್ಕೆ ಅರ್ಪಿಸುವ ಕಾರ್ಯ ಯುವಕರಿಂದ ಆಗಿದೆ. ಇದು ಎಲ್ಲರಿಗೂ ಮಾದರಿ. ತಾಳ್ಮೆಭರಿತ ಯುವಕರನ್ನು ಕಟ್ಟಿಕೊಂಡು ಸಮಾಜದ ಅಶಕ್ತರ ಕಣ್ಣೀರು ಒರೆಸಲು ಮುನ್ನುಗ್ಗು ತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಗೌಸಿಯಾ ಜುಮಾ ಮಸೀದಿ ಅಧ್ಯಕ್ಷ ಕುಂಞ ಬಾವಾ, ಬಾಳೆಪುಣಿ ಗ್ರಾ.ಪಂ ಸದಸ್ಯರುಗಳಾದ ಬಶೀರ್ ಮುಡಿಪು, ಸಿದ್ದೀಕ್ ಕೆ.ಎಚ್, ಬ್ಲಡ್ ಡೋನರ್ಸ್ ಮಂಗಳೂರು ಇದರ ಪ್ರ.ಕಾರ್ಯದರ್ಶಿ ನವಾಝ್ ನರಿಂಗಾನ, ಕೋಶಾಧಿಕಾರಿ ಫಯಾಝ್ ಮಾಡೂರು, ಉಪಾಧ್ಯಕ್ಷ ರುಗಳಾದ ಸಲಾಂ ಚೆಂಬುಗುಡ್ಡೆ, ಮುನೀರ್ ಚೆಂಬುಗುಡ್ಡೆ, ಜೊತೆ ಕಾರ್ಯದರ್ಶಿ ಲತೀಫ್ ಉಪ್ಪಿನಂಗಡಿ, ಸಂಘಟನ ಕಾರ್ಯದರ್ಶಿ ಅಶ್ರಫ್ ಉಪ್ಪಿನಂಗಡಿ, ಅಡ್ಮಿನ್ ಗಳಾದ ಫಾರೂಕ್ ಬಿಗ್ ಗೇರೇಜ್,ಮೊಹಿದು ಸೀತಾಂಗೋಳಿ, ಅದ್ನಾನ್ ಕುಂಜೆತ್ತೂರು. ಝಾಹೀರ್ ಶಾಂತಿನಗರ, ಶಾಹುಲ್ ಹಮೀದ ಕಾಶಿಪಟ್ನ ಮುಂತಾದವರು ಉಪಸ್ಥಿತರಿದ್ದರು.ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದೀಖ್ ಮಂಜೇಶ್ವರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಡ್ಮಿನ್ ಸೀರಾಜ್ ಪಜೀರ್ ಸ್ವಾಗತಿಸಿದರು. ಅಡ್ಮಿನ್ ರಝಾಕ್ ಸಾಲ್ಮರ ವಂದಿಸಿದರು.


