UN NETWORKS
ಉಳ್ಳಾಲ: ಬ್ರಹ್ಮಶ್ರೀ ಬಿಲ್ಲವ ವೇದಿಕೆ, ತೊಕ್ಕೊಟ್ಟು ಉಳ್ಳಾಲ ಇದರ ವತಿಯಿಂದ ಫೆ.24ರಂದು ತೊಕ್ಕೊಟ್ಟು ಮಂಗಳೂರ್ ವನ್ ಶಾಲಾ ಮೈದಾನದಲ್ಲಿ ನಡೆಯಲಿರುವ ಉಳ್ಳಾಲ ಕ್ಷೇತ್ರ ವ್ಯಾಪ್ತಿಯ ಕೋಟಿಚೆನ್ನಯ್ಯ ಕ್ರೀಡಾಕೂಟದ ಆಮಂತ್ರಣ ಪತ್ರಿಕೆಯನ್ನು ಬಿಲ್ಲವ ವೇದಿಕೆಯ ಅಧ್ಯಕ್ಷ ಕೆ.ಟಿ.ಸುವರ್ಣರವರು ವೇದಿಕೆಯ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು.
ವೇದಿಕೆಯ ಕಾರ್ಯಾದ್ಯಕ್ಷ ಸತೀಶ್ ಕರ್ಕೇರ, ನಿರ್ದೇಶಕರುಗಳಾದ ಬಾಬು ಶಾಸ್ತಾ ಕಿನ್ಯಾ, ಸುರೇಶ್.ಕೆ.ಪಿ ಮಾಡೂರು, ಪಾಧಾದಿಕಾರಿಗಳಾದ ಜೀವನ್ ಕುಮಾರ್ ತೊಕ್ಕೊಟ್ಟು, ಲಕ್ಷ್ಮಣ್ ಪೂಜಾರಿ, ಹರೀಶ್ ಮುಂಡೋಳಿ, ಆನಂದ.ಕೆ.ಅಸೈಗೋಳಿ, ಯು. ರಾಜೇಶ್ ಕೆರೆಬೈಲ್, ಹರೀಶ್ ಅಂಬ್ಲಮೊಗರು, ಪ್ರವೀಣ್.ಎಸ್.ಕುಂಪಲ ಉಪಸ್ಥಿತರಿದ್ದರು.


