ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಅಸೈಗೋಳಿ: ಕರ್ನಾಟಕ ರಾಜ್ಯಮೀಸಲು ಪೊಲೀಸ್ ಪಡೆಯಲ್ಲಿ ಅಮೂಲಾಗ್ರ ಬದಲಾವಣೆ ನಡೆಸುತ್ತಿದ್ದು, ವರ್ಷವೊಂದಕ್ಕೆ 1000ಕ್ಕೂ ಹೆಚ್ಚು ಯುವಜನರನ್ನು ಪೊಲೀಸ್ ಇಲಾಖೆಗೆ ಸೇರ್ಪಡೆಗೊಳಿಸುತ್ತಿದ್ದು, ಕೆಎಸ್‍ಆರ್‍ಪಿಯಲ್ಲಿ ಯುವ ಪಡೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಬೆಂಗಳೂರಿನ ಕೆಎಸ್‍ಆರ್‍ಪಿ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅಭಿಪ್ರಾಯಪಟ್ಟರು.
ಅಸೈಗೋಳಿಯ ಕೆಎಸ್‍ಆರ್‍ಪಿ 7ನೇ ಪಡೆ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ರಾಜ್ಯ ಮೀಸಲು ಪೊಲೀಸ್ 1, 3, 4, 9 ಮತ್ತು 10ನೇ ಬೆಂಗಳೂರು ಹಾಗೂ ಶಿಗ್ಗಾವಿ ಘಟಕಗಳ ವಿಶೇಷ ಮೀಸಲು ಪೆÇಲೀಸ್ ಕಾನ್ಸ್‍ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಸಮಾರಂಭದಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು.
ಕೆಎಸ್‍ಆರ್‍ಪಿಯಲ್ಲಿ ಪೊಲೀಸರಿಗೆ ಕೆಲಸದ ಒತ್ತಡಗಳಿವೆ ಈ ನಿಟ್ಟಿನಲ್ಲಿ ಪೊಲೀಸರಿಗೆ ನ್ಯಾಯುತವಾಗಿ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪೊಲೀಸರನ್ನು ಒತ್ತಡದಿಂದ ಕಡಿಮೆ ಮಾಡಲು ಅವರಿಗೆ ಸಿಗುವ ವರ್ಷದ 15 ದಿನಗಳ ರಜೆ ಕಡ್ಡಾಯವಾಗಿ ಪೊಲೀಸರು ಪಡೆದುಕೊಳ್ಳಬೇಕು ಮತ್ತು ಪೆÇಲೀಸರಿಗೆ ಬರುವ ಕಾಯಿಲೆಯನ್ನು ತಡೆಯಲು ಕೆಎಸ್‍ಆರ್‍ಪಿಯಲ್ಲಿ ಪ್ರತೀವರುಷ ಕಡ್ಡಾಯವಾಗಿ ವೈದ್ಯಕೀಯ ತಪಾಸಣೆ ನಡೆಸುವ ಯೋಜನೆಯನ್ನು ರೂಪಿಸಿದೆ ಎಂದರು.
ಕೆಎಸ್‍ಆರ್‍ಪಿಯಲ್ಲಿರುವ ಹಳೆ ಬಸ್‍ಗಳನ್ನು ಬದಲಿಸಲಿದ್ದು, 15ವರುಷದ ಹಿಂದಿನ ಬಸ್ಸುಗಳನ್ನು ಸ್ಥಗಿತಗೊಳಿಸಿ ಈ ವರ್ಷ 50 ಸುಸಜ್ಜಿತ ಬಸ್ಸುಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ವರ್ಷ 50ಬಸ್ಸುಗಳನ್ನು ಒದಗಿಸಲಿದ್ದು, ಸಮರ್ಪಕ ವೇತನ, ಸಮವಸ್ತ್ರ ಹಾಗೂ ಮುಂಬಡ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ತಿಂಗಳಲ್ಲಿ ನಾಲ್ಕನೇ ಪೆರೇಡ್
ಕೆಎಸ್‍ಆರ್‍ಪಿಯಲ್ಲಿ ಒಂದೇ ತಿಂಗಳಲ್ಲಿ ಈಗಾಗಲೇ ನಾಲ್ಕು ಪೆರೇಡ್ ನಡೆದಿದ್ದು ಸಾವಿರ ಹೊಸ ಯುವಕರು ಸೇರ್ಪಡೆಗೊಂಡಿದ್ದಾರೆ. ಮೂರು ತಿಂಗಳಲ್ಲಿ ಮತ್ತೆ ತರಬೇತಿ ನಡೆಯಲಿದ್ದು ಸಾವಿರ ಕಾನ್ಸ್‍ಟೇಬಲ್‍ಗಳ ನೇಮಕ ಹಾಗೂ 60ಎಸ್‍ಐಗಳ ನೇಮಕಕ್ಕೆ ಸರ್ಕಾರ ಅನುಮತಿ ನೀಡಿದೆ. ಮಳೆಗಾಲ ಆರಂಭ ಹಿನ್ನೆಲೆಯಲ್ಲಿ ತರಬೇತಿ 8ತಿಂಗಳಿಗೆ ಮೊಟಕುಗೊಳಿಸಲಾಗಿದೆ ಎಂದು ಪ್ರವೀಣ್ ಸೂದ್ ಹೇಳಿದರು.
ಇದೇ ಸಂದರ್ಭದಲ್ಲಿ ಒಳಾಂಗಣ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಮಹಂತೇಶ್ ಜಿ. ( ಪ್ರಥಮ), ಮಂಜಪ್ಪ ಬಾರ್ಕಿ (ದ್ವಿತೀಯ) ಹೊರಾಂಗಣ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಶಿವಾನಂದ ಎಂ.ಶಿವೂರು (ಪ್ರಥಮ), ಶ್ರೀಶೈಲ (ದ್ವಿತೀಯ) ಗುಂಡು ಹಾರಿಸುವ ಪರೀಕ್ಷೆಯಲ್ಲಿ ಹನುಮಂತಪ್ಪ (ಪ್ರಥಮ) ಮಹೇಶ್ (ದ್ವಿತೀಯ) ಸರ್ವೋತ್ತಮ ಪ್ರಶಿಕ್ಷಣಾರ್ಥಿ ಶಿವಾನಂದ ಎಂ. ಶಿವೂರು ಅವರಿಗೆ ಬಹುಮಾನ ನೀಡಿದ ಗೌರವಿಸಲಾಯಿತು.
153 ಪ್ರಶಿಕ್ಷಾಣಾರ್ಥಿಗಳು:
ಶಿಬಿರದಲ್ಲಿ 153 ಮಂದಿ ಪ್ರಶಿಕ್ಷಣಾರ್ಥಿಗಳಿದ್ದು, 1ನೇ ಪಡೆಯಿಂದ 32, 3ನೇ ಪಡೆಯಿಂದ 35, 4ನೇ ಪಡೆಯಿಂದ 45, 9ನೇ ಪಡೆಯಿಂದ 24, 10ನೇ ಪಡೆಯಿಂದ 17 ಮಂದಿಯಿದ್ದು, ಅವರಲ್ಲಿ 6 ಸ್ನಾತಕೋತ್ತರ, 79 ಪದವೀಧರರು, 4 ಡಿಪ್ಲೋಮ/ಐಟಿಐ, 56 ಪಿಯುಸಿ /ಡಿಎಡ್ ಹಾಗೂ 8ಮಂದಿ ಎಸ್‍ಎಸ್‍ಎಲ್‍ಸಿ ಶಿಕ್ಷಣ ಹೊಂದಿದ್ದಾರೆ. 25ಮಂದಿ ತರಬೇತುದಾರರನ್ನು 6 ತುಕಡಿಗಳಾಗಿ ವಿಂಗಡಿಸಲಾಗಿತ್ತು. 16 ಕಿರಿಯ ಅ„ಕಾರಿಗಳು, ನಿವೃತ್ತ ಅ„ಕಾರಿಗಳು, ಉಪನ್ಯಾಸಕರು ಉಪನ್ಯಾಸ ನೀಡಿದ್ದಾರೆ.
ಸಮಾರಂಭದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಮುರುಗನ್, ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾ„ಕಾರಿ ಡಾ.ಶರಣಪ್ಪ ಹಾಗೂ ಕೆಎಸ್‍ಆರ್‍ಪಿ ಐಜಿಪಿ ಮಾಲಿನಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.
7ನೇ ಪಡೆ ಕಮಾಂಡೆಂಟ್ ಹಾಗೂ ತರಬೇತಿ ಶಾಲೆಯ ಪ್ರಾಂಶುಪಾಲ ಸಿ.ರಂಗಸ್ವಾಮಿ ಸ್ವಾಗತಿಸಿದರು. ಮುಡಿಪು ಪದವಿಪೂರ್ವ ಕಾಲೇಜು ಉಪನ್ಯಾಸಕ ಉಮೇಶ್ ಕೆ.ಆರ್. ಕಾರ್ಯಕ್ರಮ ನಿರೂಪಿಸಿದರು.

















