UN NETWORKS
ಬೋಳಿಯಾರ್ : ಬೋಳಿಯಾರ್ ಸಮೀಪ ರಸ್ತೆ ಬದಿಯಲ್ಲಿ ನಿಂತಿದ್ದ ಶಾಲಾ ಬಾಲಕನೋರ್ವನಿಗೆ ಪಿಕಪ್ ವಾಹನ ಢಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಮೃತ ಬಾಲಕನನ್ನು ಬೋಳಿಯಾರ್ ಅಮ್ಮೆಮ್ಮಾರ್ ನಿವಾಸಿ ಶಂಕರ್ ಎಂಬವರ ಪುತ್ರ ಪ್ರತ್ಯುಶ್ (7) ಎಂದು ಗುರುತಿಸಲಾಗಿದೆ.
ಕಲ್ಲಡ್ಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿಯಾಗಿದ್ದ ಈತನನ್ನು ಆತನ ತಾಯಿ ಶಾಲಾ ವಾಹನಕ್ಕೆ ಹತ್ತಿಸಲು ರಸ್ತೆ ಬದಿಗೆ ಬಂದಿದ್ದರು. ಈ ಸಂದರ್ಭ ಬಸ್ ಚಾಲಕ ಸಣ್ಣ ವಿದ್ಯಾರ್ಥಿಗಳಿಗೆ ರಜೆ ಎಂದು ತಿಳಿಸಿದ ಕಾರಣ ಬಾಲಕ ರಸ್ತೆ ದಾಟಿ ಬದಿಯಲ್ಲಿ ನಿಂತಿದ್ದಾಗ ಮರಳು ತುಂಬಿದ್ದ ಪಿಕಪ್ ಢಿಕ್ಕಿ ಹೊಡದಿದೆ. ಇದರಿಂದ ಗಂಭೀರ ಗಾಯಗೊಂಡ ಬಾಲಕ ಮೃತಪಟ್ಟಿದ್ದಾನೆ. ಪಿಕಪ್ ಚಾಲಕನ ವಿರುದ್ಧ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


