UN NETWORKS
ತಲಪಾಡಿ: ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ ವಿರುದ್ದ ಮಂಗಳೂರಿನಲ್ಲಿ ಕಾಂಗ್ರೆಸ್ ಪಾದಯಾತ್ರೆ ಮಂಗಳೂರಿನ ತಲಪಾಡಿಯಿಂದ ಪಂಪ್ ವೆಲ್ ವರೆಗೆ ಪಾದಯಾತ್ರೆ ಎಂಟು ವರ್ಷಗಳಿಂದ ಪೂರ್ಣವಾಗದ ಪಂಪ್ ವೆಲ್ ಮತ್ತು ತೊಕ್ಕೊಟ್ಟು ಫ್ಲೈಓವರ್ ಸಂಸದ ನಳಿನ್ ಕುಮಾರ್ ಬೇಜವಾಬ್ದಾರಿ ಖಂಡಿಸಿ ಪಾದಯಾತ್ರೆ ಸಚಿವ ಯು.ಟಿ.ಖಾದರ್ ರಿಂದ ಪಾದಯಾತ್ರೆಗೆ ಚಾಲನೆ ಸಂಜೆ ಪಂಪ್ ವೆಲ್ ನಲ್ಲಿ ಸಮಾರೋಪಗೊಳ್ಳಲಿರುವ ಪಾದಯಾತ್ರೆ ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ಜೆ.ಆರ್.ಲೋಬೋ ಸೇರಿ ಕಾಂಗ್ರೆಸ್ ನಾಯಕರು ಭಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆಯುತ್ತಿರುವ ಪಾದಯಾತ್ರೆ.
ಸಿಎಂ ಕುಮಾರಸ್ವಾಮಿ ರಾಜೀನಾಮೆಗೆ ಸಿದ್ದ ಹೇಳಿಕೆ ವಿಚಾರ ಮಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿಕೆ ಖಂಡಿತವಾಗಿಯೂ ಇಲ್ಲ, ಸಿಎಂ, ಡಿಸಿಎಂ, ಸಿದ್ದರಾಮಯ್ಯ ಎಲ್ಲರೂ ಇರೋ ಸಮನ್ವಯ ಸಮಿತಿ ಇದೆ.ಈ ಸಮನ್ವಯ ಸಮಿತಿಯಿಂದ ಸರ್ಕಾರ ಚೆನ್ನಾಗಿ ನಡೆಯುತ್ತಿದೆ.ಎಲ್ಲರೂ ಪ್ರೀತಿ ವಿಶ್ವಾಸದಿಂದ ಟೀಮ್ ವರ್ಕ್ ಆಗಿ ಕೆಲಸ ಮಾಡುತ್ತಿದ್ದೇವೆ ಹೀಗಾಗಿ ನಮ್ಮಲ್ಲಿ ಯಾವುದೇ ಗೊಂದಲಗಳು ಇರಲು ಸಾಧ್ಯವೇ ಇಲ್ಲ .ಈ ವಿಚಾರದಲ್ಲಿ ಸಿಎಂಗೆ ಯಾವುದೇ ಅಸಮಾಧಾನ ಇರಲು ಸಾಧ್ಯವೇ ಇಲ್ಲ.
ಸಿದ್ದರಾಮಯ್ಯ ನಮ್ಮ ಹಿರಿಯ ನಾಯಕರು, ಸಿಎಲ್ ಪಿ ಮುಖಂಡ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲರೂ ಪ್ರೀತಿ ವಿಶ್ವಾಸದಿಂದ ಇದ್ದೇವೆ ಅಭಿವೃದ್ಧಿ ಅಥವಾ ಬೇರೆ ವಿಚಾರದಲ್ಲಿ ಚರ್ಚೆ ನಡೆಯುವುದು ಸ್ವಾಭಾವಿಕ ಕೆಲಸ ಆಗುವಾಗ ನನ್ನ ಪಕ್ಷದ ಶಾಸಕರು ನನ್ನಲ್ಲೂ ಕೂಡ ಚರ್ಚೆ ಮಾಡ್ತಾರೆ.ಇಂತಹ ಚರ್ಚೆಗಳಿದೆಯೇ ಹೊರತು ಯಾವುದೇ ವೈಮನಸ್ಸು, ಗೊಂದಲ ಇಲ್ಲ.ಬಿಜೆಪಿಯವರು ಕನಸು ಕಾಣೋದು ಬೇಡ, ಐದು ವರ್ಷ ನಾವೇ ಇರ್ತೇವೆ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಅಂತ ಹೈಕಮಾಂಡ್ ತೀರ್ಮಾನ ಆಗಿದೆ ಅದೇ ರೀತಿ ಎಲ್ಲರೂ ಅದನ್ನು ಪಾಲಿಸಿಕೊಂಡು ಹೋಗ್ತಿದಾರೆ ಮೈತ್ರಿ ಸರ್ಕಾರಕ್ಕೆ ಧಕ್ಕೆ ತರುವ ಕೆಲಸ ಎಲ್ಲಿಯೂ ಆಗಲ್ಲಆಗೋದಿದ್ರೆ ಬಿಜೆಪಿಯವರು ಇಂಥ ಕೆಲಸ ಮಾಡ್ತಿದಾರೆ, ಇದು ಅವರ ಹಗಲುಗನಸು.


