UN NETWORKS
ಸೋಮೇಶ್ವರ: ಹಿಂದೂ ಯುವ ಸೇನೆ , ಪಾಂಚಜನ್ಯ ಶಾಖೆ ತೊಕ್ಕೊಟ್ಟು ಇದರ ವತಿಯಿಂದ ಸೋಮೇಶ್ವರ ದೇವಸ್ಥಾನದ ಅಶ್ವತ ಕಟ್ಟೆಯಲ್ಲಿ ಜೋತಾಡಿಸಿದ ಅಯ್ಯಪ್ಪ ಮಾಲೆಗಳನ್ನು ಹಾಗು ಹಳೆಯ ದೇವರ ಫೊಟೋಗಳನ್ನು ತೆಗೆದು ನೇತ್ರಾವತಿ ನದಿಯಲ್ಲಿ ವಿಸರ್ಜಿಸುವ ಕೆಲಸ ಆದಿತ್ಯವಾರ ಬೆಳಿಗ್ಗೆ ನಡೆಯಿತು.
ಕಾರ್ಯಕ್ರಮದಲ್ಲಿ ಸೋಮೇಶ್ವರ ಸೋಮನಾಥ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವಿಶ್ವನಾಥ ಗಟ್ಟಿ ವಗ್ಗ ಪಾಲ್ಗೊಂಡು, ಕಠಿನ ವೃತಾಚರಣೆಯಲ್ಲಿ ಅಯ್ಯಪ್ಪ ಮಾಲೆದರಿಸಿ ನಂತರ ಅದನ್ನು ತೆಗೆದು ಪವಿತ್ರವಾದ ಅಶ್ವತ ಮರದಲ್ಲಿ ಜೋತಾಡಿಸುವುದು ನಮ್ಮ ನಂಬಿಕೆಗೆ ಅಪಚಾರ, ಹಾಗೆಯೇ ಮನೆಯಲ್ಲಿ ಪೂಜಿಸಿದ ದೇವರ ಫೊಟೋಗಳನ್ನು ಕಟ್ಟೆಯಲ್ಲಿ ಬಿಟ್ಟು ಹೋಗುವುದರಿಂದ ನಮಗೆ ನಾವೇ ಗೃಹಚಾರ ತಂದುಕೊಂಡ ಹಾಗೆ, ಅದನ್ನು ಹರಿಯುವ ನದಿಯಲ್ಲಿ ಜಲಸ್ತಂಬನಗೊಳಿಸಿದರೆ ಮುಕ್ತಿ ಸಿಗುತ್ತದೆ ಎಂದು ತಿಳಿಸಿ ಆ ಕಾರ್ಯವನ್ನು ತೊಕ್ಕೊಟ್ಟು ಹಿಂದೂ ಯುವ ಸೇನೆ ಮಾಡುತ್ತಿರುವುದು ಶ್ಲಾಘನೀಯ ಎಂದರು. ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಅದ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಪ್ರವೀಣ್ ಎಸ್.ಕುಂಪಲ, ಪುರುಷೋತ್ತಮ ಕಲ್ಲಾಪು, ಹಿಂದೂ ಯುವ ಸೇನೆ ,ಪಂಚ ಜನ್ಯ ಶಾಖೆ ತೊಕ್ಕೊಟ್ಟು ಇದರ ಅಧ್ಯಕ್ಷ ದೀಕ್ಷಿತ್ ಪೂಜಾರಿ ತೊಕ್ಕೊಟ್ಟು, ಸತೀಶ್ ಚೆಂಬುಗುಡ್ಡೆ, ವಿಕಾಸ್ ರಾವ್ ಕುಂಪಲ, ಜಿತೇಶ್ ಶೆಟ್ಟಿ ಪಿಲಾರ್,ಸಂಪತ್ ಕುಮಾರ್ ಧರ್ಮನಗರ, ಶರತ್ ತೊಕ್ಕೊಟ್ಟು, ವೆಂಕಟಗಿರಿ ಕುಂಪಲ, ರವಿ ಧರ್ಮನಗರ, ಪ್ರವೀಣ್ ಕೊಲ್ಯ,ಹರ್ಷರಾಜ್ ಕುಂಪಲ,ದೀಪಕ್ ಪೂಜಾರಿ ಕುಂಪಲ, ಉದಯ ಉಳ್ಳಾಲ್, ಗೌತಮ್ ಆಚಾರ್ಯ,ರವಿ ಕಲ್ಪನೆ, ನಿಶ್ಚಲ್, ಮೊದಲಾದವರು ಉಪಸ್ಥಿತರಿದ್ದರು.


