UN NETWORKS
ಉಳ್ಳಾಲ: ಶ್ರೀ ಗೋಕರ್ಣಾಥೇಶ್ವರ ಕ್ಷೇತ್ರ ಕುದ್ರೋಳಿ ಇದರ ಬ್ರಹ್ಮಕಲಶೋತ್ಸವ ಹಾಗೂ ಹೊರೆಕಾಣಿಕೆ ಮೆರವಣಿಗೆಗೆ ಸಂಬಂಧಿಸಿದಂತೆ ಉಳ್ಳಾಲ ವಲಯಮಟ್ಟದ ಸಭೆಯು ಗುರುವಾರ ನಡೆಯಿತು.
ಶ್ರೀ ಗೋಕಾರ್ಣಾಥೇಶ್ವರ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಸಾಯಿರಾಂ ಮತ್ತು ಕೊಶಾಧಿಕಾರಿ ಪದ್ಮರಾಜ್ ಅವರು ಸಭೆಯ ನೇತೃತ್ವವನ್ನು ವಹಿಸಿದ್ದರು. ಸಭೆಯ ಅಧ್ಯಕ್ಷತೆಯನ್ನು ಕೊಲ್ಯ ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರಾದ ಆನಂದ್ ಎಸ್. ಕೊಂಡಾಣ ಅವರು ವಹಿಸಿದ್ದರು.ಗೌರವಾಧ್ಯಕ್ಷರಾದ ಡಾ.ರಾಮಾನುಜಂ, ಕಾರ್ಯದರ್ಶಿ ರಾಘವ ಡಿ.ಎನ್, ಕೋಶಾಧಿಕಾರಿ ಜಯಂತ್ ಪಿ.ಎಸ್, ಉಪಾಧ್ಯಕ್ಷರಾದ ಶಶಿಕಾಂತ್, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಕೆ.ಟಿ.ಸುವರ್ಣ,ಬಿಲ್ಲವ ಪ್ರಮುಖರಾದ ಚಂದ್ರಶೇಖರ್ ಉಚ್ಚಿಲ್, ನಮಿತಾ ಶ್ಯಾಂ, ಸತೀಶ್ ಕುಂಪಲ. ಮೋಹನ್ ರಾಜ್ ಕನೀರುತೋಟ, ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರುಸೇವಾ ಸಂಘದ ಅಧ್ಯಕ್ಷ ಗಂಗಾಧರ ಪೂಜಾರಿ, ತಲಪಾಡಿ ಬಿಲ್ಲವ ಸಂಘದ ಚಂದ್ರಹಾಸ್, ಪ್ರಮುಖರಾದ ನಾರಾಯಣ ಪೂಜಾರಿ, ಚಂದ್ರಹಾಸ್ ಸಾಲ್ಯಾನ್, ಸುರೇಶ್ ಭಂಡಾರಮನೆ, ಜಯಂತ್ ಕಿನ್ಯ, ಜಗನ್ನಾಥ ಪೂಜಾರಿ, ಕುಸುಮಾಕರ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.
ಹೊರೆಕಾಣಿಕೆ ಮತ್ತು ಬ್ರಹ್ಮಕಲಶೋತ್ಸವದ ಉಳ್ಳಾಲ ವಲಯ ಪ್ರಧಾನ ಸಂಚಾಲಕರಾಗಿ ರವೀಂದ್ರ ಬಂಗೇರ ಕೊಣಾಜೆ ಅವರನ್ನು ಆಯ್ಕೆ ಮಾಡಲಾಯಿತು. ಹರೀಶ್ ಪೂಜಾರಿ ಕೊಣಾಜೆ ಕಾರ್ಯಕ್ರಮ ನಿರ್ವಹಿಸಿದರು.


