UN NETWORKS
ಉಳ್ಳಾಲ: ಬೆಳ್ಮ ಗ್ರಾ.ಪಂ. ವ್ಯಾಪ್ತಿಯ ಕಾನಕರೆಯಲ್ಲಿ ಸೃಷ್ಟಿಯಾಗಿರುವ ಕುಡಿಯುವ ನೀರಿನ ಸಮಸ್ಯೆ ವಿಚಾರಕ್ಕೆ ಸಂಬಂದಿಸಿ ಗುರುವಾರ ಬೆಳ್ಮ ಗ್ರಾ.ಪಂ. ಕಚೇರಿಯಲ್ಲಿ ನಡೆದ ಗಾಮ ಸಭೆಯಲ್ಲಿ ಭಾರೀ ಚರ್ಚೆ ನಡೆದು ಗ್ರಾಮಸ್ಥರು ಅಧ್ಯಕ್ಷರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಸಭೆ ಆರಂಭವಾವಾದಾಗಲೇ ಗ್ರಾಮಸ್ಥರು ಗ್ರಾಮಸಭೆಗೆ ಪರಿಸರ ಇಲಾಖೆಯ ಅಧಿಕಾರಿಗಳು ಬಾರದಿರುವ ಬಗ್ಗೆ ತರಾಟೆಗೆ ತೆಗೆದುಕೊಂಡರು. ಕಾನಕರೆಯಲ್ಲಿ ಕಲುಷಿತ ನೀರು ತುಂಬಿ ಸೊಳ್ಳೆ ಉತ್ಪತಿಯಾಗಿದ್ದು, ಪರಿಸರ ಹಾಳಾಗಿದೆ ಅಧಿಕಾರಿಗಳು ಇಲ್ಲದ ಕಾರಣ ಈ ಬಗ್ಗೆ ನಾವು ಯಾರಲ್ಲಿ ಕೇಳಬೇಕು ಎಂಬ ಗ್ರಾಮಸ್ಥರ ಪ್ರಶ್ನೆಗೆ ನೋಡಲ್ ಅಧಿಕಾರಿಯವರು ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಗಮನ ಸೆಳೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪೆಟ್ರೋಲ್ ಬಂಕ್ ನಿಂದಾಗಿ ಬಾವಿ ನೀರು ಕಲುಷಿತಗೊಂಡು ಕಾನಕೆರೆ ನಿವಾಸಿಗಳಿಗೆ ಕುಡಿಯಲು ನೀರಿಲ್ಲದಂತಾಗಿದೆ. ಇದಕ್ಕೆ ಪರ್ಯಾಯವಾಗಿ ಪೈಪ್‍ಲೈನ್ ವ್ಯವಸ್ಥೆ ಮಾಡಿದರೂ ಸರಿಯಾಗಿ ನೀರು ಸರಬರಾಜಾಗುತ್ತಿಲ್ಲ. ಪರಿಸರದಲ್ಲಿ ಕೊಳಚೆ ನೀರು ತುಂಬಿ ಸೊಳ್ಳೆಗಳು ಉತ್ಪತ್ತಿಯಾಗಿದೆ. ಈ ಬಗ್ಗೆ ಮನವಿಗಳನ್ನು ಸಲ್ಲಿಸಿ ಸಂಬಂಧಪಟ್ಟವರ ಗಮನಸೆಳೆದರೂ ಪರಿಹಾರ ದೊರೆತಿಲ್ಲ. ಕಾನೆಕರೆ ಗ್ರಾಮಸ್ಥರು ಪಂಚಾಯತ್‍ನ ಅಧ್ಯಕ್ಷೆ ಮತ್ತು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಸಮಸ್ಯೆಗೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಅಬ್ದುಲ್ ಸತ್ತಾರ್ ` ಸಮಸ್ಯೆ ಇರುವುದು ಕಾನಕೆರೆಯಲ್ಲಿ ಮಾತ್ರವಲ್ಲ, ಎಲ್ಲಾ ಕಡೆ ಇದೆ. ಪರಿಶೀಲಿಸಿ ವ್ಯವಸ್ಥೆ ಮಾಡುತ್ತೇವೆ ಎಂದಾಗ ಅಧ್ಯಕ್ಷೆ ವಿಜಯ ಕೃಷ್ಣಪ್ಪ ಕಾನಕರೆಯ ಸದಸ್ಯರಾಗಿ ಸಮಸ್ಯೆ ಗೊತ್ತಿದ್ದರೂ ಕೂಡಾ ಯಾವುದೇ ಸಹಕಾರ ಕೊಟ್ಟಿಲ್ಲ. ಕುಡಿಯುವ ನೀರಿನ ವಿಚಾರದಲ್ಲಿ ಬೇಜವಾಬ್ದಾರಿ ವರ್ತಿಸುತ್ತಿದ್ದಾರೆ. ಕೊಳಚೆ ನೀರಿನ ಸಮಸ್ಯೆ ಬೇರೆ ಇದೆ ಇದಕ್ಕೆ ಅಧ್ಯಕ್ಷರು ಪರಿಹಾರ ಯಾಕೆ ಸೂಚಿಸುವುದಿಲ್ಲ ಎಂದು ಪ್ರಶ್ನಿಸಿ ಪಂ. ಸದಸ್ಯರನ್ನೇ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಇಲ್ಲಿನ ಸಮಸ್ಯೆ ಶೀಘ್ರದಲ್ಲಿ ಪರಿಹಾರ ಮಾಡಬೇಕೆಂದು ಒತ್ತಾಯಿಸಿದರು. ಪೆಟ್ರೋಲ್ ಪಂಪ್‍ನಿಂದ ಸೃಷ್ಟಿಯಾಗಿರುವ ಕುಡಿಯುವ ನೀರಿನ ಸಮಸ್ಯೆಗೆ ಪಂಚಾಯತ್ ಹೊಣೆ ಹೊತ್ತುಕೊಳ್ಳಬೇಕು. ಕೆಲವು ಕಡೆ ಅಕ್ರಮ ಕಟ್ಟಡಗಳು ನಿರ್ಮಾಣ ಆಗುತ್ತದೆ. ಮಾಮೂಲಿ ಇದ್ದ ಚರಂಡಿಯನ್ನು ಮುಚ್ಚಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಇದರಿಂದ ಬೇರೆ ಮನೆಗೆ ತೊಂದರೆ ಆಗಿದೆ. ಈ ರೀತಿಯ ಸಮಸ್ಯೆಗೆ ಪರಿಹಾರ ಇಲ್ಲವೇ ಎಂದು ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಿದ ಸದಸ್ಯರು ಈ ಬಗ್ಗೆ ಶೀಘ್ರದಲ್ಲಿ ಪರಿಶೀಲನೆ ಮಾಡಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದರು. ಬ್ಯಾನರ್ ಮತ್ತು ಪಾರ್ಕಿಂಗ್ ವಿಚಾರದಲ್ಲಿ ಗ್ರಾಮಸ್ಥರೊಬ್ಬರು ನೀಡಿದ ಸಲಹೆಯನ್ನು ಸ್ವೀಕರಿಸಿದ ಬೆಳ್ಮ ಗ್ರಾ.ಪಂ. ಸದಸ್ಯರು ಈ ವಿಚಾರದಲ್ಲಿ ಗ್ರಾಮಸ್ಥರ ಸಲಹೆ ಪ್ರಕಾರ ನಿಯಮ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ತಾ.ಪಂ.ನ ದೀಪಕ್‍ರಾಜ್ ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಅಧ್ಯಕ್ಷ ವಿಜಯ ಕೃಷ್ಣಪ್ಪ, ಉಪಾಧ್ಯಕ್ಷ ಸತ್ತಾರ್, ಪಿಡಿಓ ನವೀನ್ ಮತ್ತು ಗ್ರಾ.ಪಂ. ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.


