UN NETWORKS
ಕುಂಪಲ: ಕುಂಪಲ ಗೆಳೆಯರ ವತಿಯಿಂದ ದ.ಕ. ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಎಸೋಸಿಯೇಶನ್ನ ಸಹಯೋಗದಲ್ಲಿ 21ವರ್ಷದ ವಯೋಮಾನದ ಒಳಗಿನ ಪುರುಷರ ಜಿಲ್ಲಾ ಮಟ್ಟದ ಪ್ರೊ ಮಾದರಿಯ ಮ್ಯಾಟ್ ಕಬ್ಬಡ್ಡಿ ಪಂದ್ಯಾಟ ಕುಂಪಲ ಮೂರುಕಟ್ಟದಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಉದ್ಘಾಟಿಸಿದರು.
ಉದ್ಯಮಿ ಜಯಂತ್ ಕೊಂಡಾಣ, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಪ್ರಕಾಶ್ ಕುಂಪಲ, ವಿನೋದ್ ಕುಂಪಲ, ಉದ್ಯಮಿ ಹರೀಶ್ ಮೂರುಕಟ್ಟ, ಶರತ್ ಕುಮಾರ್, ಸುರೇಶ್ ಸಾಲಿಯಾನ್, ಚಂದ್ರಹಾಸ್ ಮೂರುಕಟ್ಟ, ಅಶೋಕ್ ಕುಂಪಲ, ವೆಂಕಟಗಿರೀಶ್ ಕುಂಪಲ, ಪುರಸಭೆ ಸದಸ್ಯ ರವಿಚಂದ್ರ ಗಟ್ಟಿ, ವಿನೋದ್ ಗಟ್ಟಿ ಕುಂಪಲ, ಸಾಗರ್ ಕುಂಪಲ, ಕಿಶೋರ್ ಡಿ.ಕೆ, ಲಿಖಿತ್ ಕುಂಪಲ, ಚೇತನ್ ಸನಿಲ್, ಚಂದ್ರಹಾಸ್ ಮಿತ್ರನಗರ, ನವಾಝ್ ಮೊಂಟುಗೋಳಿ ಉಪಸ್ಥಿತರಿದ್ದರು.40ತಂಡಗಳು ಭಾಗವಹಿಸಿದ ಈ ಕಬ್ಬಡ್ಡಿ ಪಂದ್ಯಾಟದಲ್ಲಿ ವಿಕಾಸ್ ಪದವಿಪೂರ್ವ ಕಾಲೇಜು ಪ್ರಥಮ, ಆಝಾದ್ ಕಿನ್ಯ ದ್ವಿತೀಯ, ಆಳ್ವ ಫ್ರೆಂಡ್ ಪಿಲಾರ್ ತೃತೀಯ, ದುರ್ಗಾಪರಮೇಶ್ವರೀ ತಲಪಾಡಿ ಚತುರ್ಥ ಸ್ಥಾನ ಪಡೆಯಿತು.
ವಿಕಾಸ್ ಕಾಲೇಜಿನ ಶ್ರೇಯಸ್ ಉತ್ತಮ ಸವ್ಯಸಾಚಿ ಪ್ರಶಸ್ತಿ ಗಳಿಸಿದರೆ, ಯಶ್ಬಿನ್ ಉತ್ತಮ ಹಿಡಿತಗಾರ, ಆಝಾದ್ ಕಿನ್ಯದ ಆಶಿಕ್ ಉತ್ತಮ ದಾಳಿಗಾರ ಪ್ರಶಸ್ತಿ ಪಡೆದರು.ಪ್ರವೀಣ್.ಎಸ್. ಕುಂಪಲ ಕಾರ್ಯಕ್ರಮ ನಿರೂಪಿಸಿದರು. ಕಬ್ಬಡ್ಡಿಯ ವೀಕ್ಷಕ ವಿವರಣೆ ನೀಡಿದರು.


