UN NETWORKS
ಉಳ್ಳಾಲ: ಉಳ್ಳಾಲ ಹಳೆಕೋಟೆ ಅಲ್ ಕರೀಂ ಜುಮಾ ಮಸೀದಿಯ ಆಶ್ರಯದಲ್ಲಿ ನಾಲ್ಕು ದಿವಸಗಳ ಮತಪ್ರಭಾಷಣದ ಸಮಾರೋಪ ಹಳೆಕೋಟೆ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯಿತು.
ಸಯ್ಯದ್ ಮದನಿ ದರ್ಗಾದ ಖತೀಬ ಅಝೀಝ್ ಬಾಖವಿ ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯದ್ ಮದನಿ ದರ್ಗಾದ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಧಾರ್ಮಿಕ ಮತ ಪ್ರಸಂಗವನ್ನು ಕೇಳಿ ತಮ್ಮ ಧಾರ್ಮಿಕತೆಯ ವಿಚಾರಧಾರೆಗಳನ್ನು ಮತ್ತು ಧರ್ಮದೊಂದಿಗಿರುವ ಅಭಿಮಾನವನ್ನು ಇನ್ನಷ್ಟು ಹೆಚ್ಚಿಸಲು ಅವಕಾಶವಾಗಿದೆ. ದಾರಿ ತಪ್ಪಿ ಹೋಗುತ್ತಿರುವ ಯುವಕ ಯುವತಿಯರಿಗೆ ವಿಚಾರವನ್ನು ಮನವರಿಕೆ ಮಾಡಿ ಕೊಡುವಲ್ಲಿ ಈ ಕಾರ್ಯಕ್ರಮ ಸಫಲತೆ ಕಾಣತ್ತಿದೆ. ಇಂತಹ ಉತ್ತಮವಾದ ಕಾರ್ಯ ಮುಂದೆಯೂ ನಿರಂತರವಾಗಿ ನಡೆಯಲಿ ಎಂದು ಹೇಳಿದರು.
ಸಯ್ಯದ್ ಮದನಿ ಅರಬಿಕ್ ಕಾಲೇಜು ಪ್ರಾಂಶುಪಾಲ ಉಸ್ಮಾನ್ ಫೈಝಿ ದುಆ ನೆರವೇರಿಸಿದರು. ಹಳೆಕೋಟೆ ಅಲ್ ಕರೀಂ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮೊಹಮ್ಮದ್ ತ್ವಾಹ, ಖತೀಬ ಉಸ್ಮಾನ್ ಸಅದಿ ಅಲ್ ಫಾಲಿಳಿ, ಸಯ್ಯದ್ ಮದನಿ ಅರಬಿಕ್ ಕಾಲೇಜು ಪ್ರೊಫೆಸರ್ ಇಬ್ರಾಹಿಂ ಮದನಿ, ದಅವಾ ಕಾಲೇಜು ಪ್ರಾಂಶುಪಾಲ ಇಬ್ರಾಹಿಂ ಅಹ್ಸನಿ, ಹಿಫ್ಲುಲ್ ಖುರಾನ್ ಕಾಲೇಜು ಪ್ರಾಂಶುಪಾಲ ಝೈನ್ ಸಖಾಫಿ, ಉಳ್ಳಾಲ ದರ್ಗಾ ಮುಫತ್ತಿಸ್ ಸುಲೈಮಾನ್ ಸಖಾಫಿ, ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫ ಅಬ್ದುಲ್ಲ, ಸಯ್ಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಜೊತೆ ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಮೇಲಂಗಡಿ ಮುಹಿಯ್ಯುದ್ದೀನ್ ಜುಮಾ ಮಸೀದಿ ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ್, ಅಕ್ಕರೆಕೆರೆ ಅಬೂಬಕರ್ ಜುಮಾ ಮಸೀದಿ ಅಧ್ಯಕ್ಷ ಖಾದರ್ ಮುಸ್ಲಿಯಾರ್, ಉಳ್ಳಾಲ ನಗರ ಸಭೆ ಸದಸ್ಯ ಅಸ್ಗರ್ ಆಲಿ, ಮಾಜಿ ಸದಸ್ಯ ಇಸ್ಮಾಯಿಲ್ ಪೊಡಿಮೋನು, ಹಳೆಕೋಟೆ ಹಳೆ ವಿದ್ಯಾರ್ಥಿ ಅಸೋಸಿಯೇಶನ್ ಮರ್ಖಲ್ ಇಸ್ಲಾಂ ಮದ್ರಸದ ಸ್ಥಾಪಕಾಧ್ಯಕ್ಷ ಶಬೀರ್ ಹಸನ್, ಇಖ್ರಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಫಾರೂಕ್, ಉಳ್ಳಾಲ ಟೆಸ್ಟ್ ಸ್ಪೋಟ್ರ್ಸ್ ಅಧ್ಯಕ್ಷ ಅಬ್ದುರ್ರಹಿಮಾನ್, ಅಬ್ಬಾಸ್ ಕೋಟೆಪುರ, ಹಳೆಕೋಟೆ ಅಲ್ ಕರೀಂ ಜುಮಾ ಮಸೀದಿಯ ಉಪಾಧ್ಯಕ್ಷ ಝೈನುದ್ದೀನ್ ಯು.ಎಚ್, ಮೊಹಮ್ಮದ್, ಕಾರ್ಯದರ್ಶಿ ಅಬ್ದುಲ್ ರವೂಫ್, ಕೋಶಾಧಿಕಾರಿ ಇಲ್ಯಾಸ್ ಹಾಜಬ್ಬ, ಹಳೆಕೋಟೆ ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯು.ಎನ್.ಇಬ್ರಾಹಿಂ, ಕೋಶಾಧಿಕಾರಿ ಅಬ್ದುಲ್ ಕರೀಂ, ಸಲಾಮ್ ಮದನಿ ಉಸ್ತಾದ್, ಅಲ್ತಾಫ್ ಹಳೆಕೋಟೆ, ಶಮೀರ್ ಹಳೆಕೋಟೆ, ಮಸೀದಿಯ ಉಸ್ತಾದರುಗಳಾದ ಆದಂ ಮುಸ್ಲಿಯಾರ್, ಹಂಝ ಮುಸ್ಲಿಯಾರ್ ಹಾಗೂ ಅಬ್ದುಲ್ಲ ಮುಸ್ಲಿಯಾರ್ ಉಪಸ್ಥಿತರಿದ್ದರು.
ಹಳೆಕೋಟೆ ಹಳೆ ವಿದ್ಯಾರ್ಥಿ ಅಸೋಸಿಯೇಶನ್ ಮರ್ಖಲ್ ಇಸ್ಲಾಂ ಮದ್ರಸದ ಗೌರವ ಅಧ್ಯಕ್ಷ ಮೊಹಮ್ಮದ್ ರಫೀಕ್.ಎಚ್ ಕಾರ್ಯಕ್ರಮ ನಿರೂಪಿಸಿದರು. ಹಳೆಕೋಟೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ. ಮಂಜನಾಡಿ ಸ್ವಾಗತಿಸಿದರು. ಮರ್ಖಲ್ ಇಸ್ಲಾಮ್ ಮದ್ರಸದ ಸದರ್ ಇರ್ಫಾನ್ ಮದನಿ ವಂದಿಸಿದರು.


