ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಅಳೇಕಲ: ಸುನ್ನಿ ವಿದ್ಯಾರ್ಥಿ ಸಂಘಲ ಇದರ 2014-15 ಸಾಲಿನ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಅಳೇಕಲದ ಸುನ್ನೀ ಸೆಂಟರ್ ನಲ್ಲಿ ಎಸ್.ವಿ.ಎಸ್ ನ ನಿರ್ದೇಶಕರಾದ ಎನ್.ಡಿ ಅಬೂಬಕ್ಕರ್ ಮದನಿ ಉಸ್ತಾದರು ದುಆ ಮಾಡುವ ಮೂಲಕ ಮಹಾಸಭೆಯನ್ನು ಉದ್ಘಾಟನೆ ಮಾಡಿದರು. ಎಸ್.ವಿ.ಎಸ್ ನ ಅಧ್ಯಕ್ಷರಾದ ಅನ್ಸಾರ್ ಅಳೇಕಲ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
2014-15ನೇ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ವಾಚಿಸಿ ಮಂಜೂರು ಮಾಡಲಾಯಿತು. 2014-15ನೇ ಸಾಲಿನ ಸಮಿತಿಯನ್ನು ಬರ್ಖಾಸ್ತು ಗೊಳಿಸಿ 2015-16ನೇ ಸಾಲಿಗೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಿ.ಎಮ್ ಅಶ್ರಫ಼್ , ಉಪಾಧ್ಯಕ್ಷರಾಗಿ ಫ಼ಾಝಿಲ್ ಅಳೇಕಲ , ಆರೀಫ಼್ ಸಾದುಹಿತ್ಲು , ಪ್ರ.ಕಾರ್ಯದರ್ಶಿಯಾಗಿ ಜವಾದ್ ಅಳೇಕಲ , ಕಾರ್ಯದರ್ಶಿಯಾಗಿ ರಹ್ಮತ್ ತಾಝಿಲ್, ಸಾದಿಕ್ ಪಾಂಡೆಲ್ ಪಕ್ಕ , ಕೋಶಾಧಿಕಾರಿಯಾಗಿ ಬಶೀರ್ ಅಳೇಕಲ , ಆಫೀಸ್ ಮೆನೇಜರ್ ಆಗಿ ಮುಹಮ್ಮದ್ ಕೈಸ್ ಇವರನ್ನು ನೇಮಕ ಮಾಡಲಾಯಿತು . ಕಾರ್ಯಕಾರಿಣಿ ಸದಸ್ಯರುಗಳಾಗಿ ಸಯ್ಯಿದ್ ಖುಬೈಬ್ ತಂಙಳ್ , ಅನ್ಸಾರ್ ಅಳೇಕಲ , ಆಶಿಕ್ ಕಕ್ಕೆತೋಟ , ನಿಸಾರ್ ಅಹ್ಮದ್ , ಸೈಫಾನ್ ಬಳಂಗರೆ , ಜಾಫರ್ ಯು .ಎಸ್ , ಮುಜೀಬ್ , ಜಾವೀದ್ , ಆಶಿಕ್ , ನಾಝಿಮ್ , ಇವರನ್ನು ಆರಿಸಲಾಯಿತು .



