UN NETWORKS
ಪಾನೀರ್: ನಮ್ಮ ಜೀವಿತಾವಯಲ್ಲಿ ಧಾರ್ಮಿಕ ಹಬ್ಬಗಳನ್ನು ಮಾತ್ರವೇ ಆಚರಿಸಿದರೆ ಸಾಲದು, ಹಬ್ಬದ ಹಿಂದಿರುವ ಸಂದೇಶಗಳ ಪಾಲನೆಯನ್ನೂ ಅನುಷ್ಠಾನಗೊಳಿಸಬೇಕಾಗಿದೆ ಎಂದು ಪ್ರಧಾನ ಧರ್ಮಗುರು ರೆ.ಫಾ. ಜೋಸೆಫ್ ಮಾರ್ಟಿಸ್ ಹೇಳಿದರು.
ಪಾನೀರ್ ದಯಾಮಾತೆ ಮರ್ಸಿಯಮ್ಮನವರ ಇಗರ್ಜಿಯ ಪರಮಪ್ರಸಾದದ ಮೆರವಣಿಗೆ ಹಾಗೂ ದಿವ್ಯ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದ ಅವರು ನಮ್ಮ ಜೀವನದಲ್ಲಿ ದೇವ ಸ್ಮರಣೆ ಸದಾ ಇರಬೇಕು, ಧಾರ್ಮಿಕ ಭಾವನೆಯೊಂದಿಗೆ, ಸಂಸ್ಕಾರ, ನಾವೆಲ್ಲರೂ ಒಂದೇ ಎನ್ನುವ ಭಾವನೆ ಮುಖ್ಯ. ಸಾಮಾಜಿಕ ಸೇವಾ ಮನೋಭಾವ, ಚಿಂತನೆ ಅಗತ್ಯ ಎಂದರು. ಕಾರ್ಯಕ್ರಮದ ಪ್ರಯುಕ್ತ ಚರ್ಚ್ ವ್ಯಾಪ್ತಿಯ ಕ್ರೈಸ್ತರು ನೂತನ ಬೆಂಚುಗಳು ಹಾಗೂ ಐದು ಎಲ್‍ಇಡಿ ಟಿವಿಗಳನ್ನು ಕೊಡುಗೆಯಾಗಿ ನೀಡಿದರು. ಪಾನೀರ್ ಚರ್ಚ್‍ನ ಧರ್ಮಗುರು ರೆ.ಫಾ. ಡೆನ್ನಿಸ್ ಸುವಾರಿಸ್, ಅತಿಥಿ ಧರ್ಮಗುರು ಫಾ. ವಿಜಯಾ ಟೆಲ್ಲಿಸ್, ಫಾ. ವಿಲ್ಸನ್ ಮೋರಾಸ್, ಫಾ. ಜೋಯ್ ಪಾಯ್ಸ್, ಫಾ. ಬಾಲರಾಜ್, ಫಾ. ಬರ್ನಾಡ್, ಚರ್ಚ್‍ನ ದಿಯಾಕೋನ್ ಲ್ಯಾರಿ ಫ್ರಾಂಕ್ಲಿನ್ ಪಿಂಟೋ, ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನ್ನಿಸ್ ಗೋನ್ಸಾಲ್ವೀಸ್ ಹಾಗೂ ನಿಕಟಪೂರ್ವ ಉಪಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ ಉಪಸ್ಥಿತರಿದ್ದರು.


