Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಗ್ರಾಮ

ತೊಕ್ಕೊಟ್ಟು ಫ್ಲೈಓವರ್ ಅಣುಕು ಉದ್ಘಾಟನೆ : ಡಿವೈಎಫ್ ಐ ವತಿಯಿಂದ ಹೀಗೊಂದು ಪ್ರತಿಭಟನೆ

UllalaVaniBy UllalaVaniDecember 31, 2018Updated:December 31, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ತೊಕ್ಕೊಟ್ಟು ಫ್ಲೈಓವರ್ ಅನ್ನು ಪ್ರಧಾನಿ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಸಂಸದ ನಳಿನ್ ಕಟೀಲ್ ಜೊತೆಗೆ ಡಿವೈಎಫ್ ಐ ಕಾರ್ಯಕರ್ತರು ಸೇರಿಕೊಂಡು ಉದ್ಘಾಟಿಸಿದರು.ಕೇಳುವಾಗ ಇದೊಂದು ಅಚ್ಚರಿಯೇ ಹೌದು. ಆದರೆ ವಾಸ್ತವವಾಗಿ ಕಾಮಗಾರಿ ಮುಗಿಸುವ ದಿನಾಂಕ ನೀಡಿರುವ ಸಂಸದರು ತಪ್ಪಿದ್ದಾರೆ ಎಂದು ಆರೋಪಿಸಿ ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ತೊಕ್ಕೊಟ್ಟು ಸೇತುವೆಯನ್ನು ಮೂವರ ಮುಖವಾಡವನ್ನು ಧರಿಸಿ ಅಣುಕು ಉದ್ಘಾಟನೆ ನಡೆಸುವ ಮೂಲಕ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಡಿವೈ ಎಫ್ ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಕುಮಾರ್ ಬಜಾಲ್ ಮಾತನಾಡಿ, ತಲಪಾಡಿಯಿಂದ ಕುಂದಾಪುರದವರೆಗೆ ಹೆದ್ದಾರಿ ದುರಸ್ತಿಗೊಳಿಸಲು ಅಸಾಧ್ಯವಾಗಿದೆ. ನ,.1, ಡಿ.30 ಎಂದು ನಳಿನ್ ಕಟೀಲ್ ದಿನಕ್ಕೊಂದು ಹೇಳಿಕೆ ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಮುಕ್ತಾಯಗೊಳಿಸುತ್ತೇವೆ ಅನ್ನುತ್ತಾ ಸುಳ್ಳು ಹೇಳಿಕೆಗಳನ್ನೇ ನೀಡುತ್ತಲೇ ಬಂದಿದ್ದಾರೆ. ಫೆ.28 ರ ಒಳಗೆ ಸಂಚಾರ ಮುಕ್ತ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನು ತಪ್ಪು ಹಾದಿಗೆ ಕೊಂಡೊಯುವ ಪ್ರಯತ್ನವಾಗಿದೆ. ಜನರಲ್ಲಿನ ಆಕ್ರೋಶ ಕಡಿಮೆ ಗೊಳಿಸುವ ಸಲುವಾಗಿ ಸುಳ್ಳು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಈವರೆಗೂ ಮುಕ್ತಾಯ ಮಾಡಲು ಸಾಧ್ಯವಾಗಿಲ್ಲ. ಅಮಾಯಕ ವಾಹನ ಸವಾರರು ಪ್ರಾಣಹಾನಿಯಾದ ಘಟನೆ ದಿನನಿತ್ಯ ಸಂಭವಿಸುತ್ತಲೇ ಇದೆ.

ಜನರಿಗೆ ಸರಿಯಾಗಿ ಓಡಾಟ ನಡೆಸಲು ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಸಚಿವ ನಿತಿನ್ ಗಡ್ಕರಿ ಮತ್ತು ನಳಿನ್ ಕಟೀಲ್ ಅವರ ಮುಖವಾಡಗಳನ್ನು ಧರಿಸಿ ಅಣುಕು ಉದ್ಘಾಟನೆ ನೆರವೇರಿಸಲಾಗಿದೆ. 21 ವರ್ಷ ಪಡೆದ ಬೋಗಿಬಿಲ್ ಸೇತುವೆಯನ್ನು ಮುಗಿಸಿದ ಮೋದಿ ಪೋಸ್ ನೀಡುತ್ತಾರೆ. ಆದರೆ ಅದೇ 11 ವರ್ಷವಾದರೂ ತೊಕ್ಕೊಟ್ಟು ಸೇತುವೆ ಪೂರ್ಣಗೊಳಿಸಲು ಅಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ತೊಕ್ಕೊಟ್ಟು, ಪಂಪ್ ವೆಲ್ ಸೇತುವೆ ಕಾಮಗಾರಿ 21 ವರ್ಷ ಆಗುವ ಮೂಲಕ ಗಿನ್ನೆಸ್ ದಾಖಲೆ ಪಡೆಯಲಿದೆ. ಅಚ್ಚೇ ದಿನ್ ಬಿಡಿ ಕನಿಷ್ಠ ಅಚ್ಚೇ ಸಡಕ್ ನೀಡಲು ಅಸಾಧ್ಯವಾಗಿದೆ. ವಿಶ್ವದ ಎತ್ತರದ ಮೂರ್ತಿ ಎಂದು ಸರ್ದಾರ್ ವಲ್ಲಭಬಾಯ್ ಪಟೇಲ್ ಮೂರ್ತಿಯನ್ನು ನೀಡಲಾದರೂ, ಒಂದು ಕಿ.ಮೀ ಉದ್ದ ದ ತೊಕ್ಕೊಟ್ಟು ಸೇತುವೆ ನಿರ್ಮಿಸಲು ಅಸಾಧ್ಯವಾಗಿದೆ. ಮುಂದಿನ ಚುನಾವಣೆಯಲ್ಲಿ ಜನ ಸರಿಯಾದ ಉತ್ತರವನ್ನು ನೀಡಲಿದ್ದಾರೆ. ಕಾಮಗಾರಿ ಪೂರ್ಣಗೊಳ್ಳದಿದ್ದಲ್ಲಿ ಹಂತಹಂತವಾಗಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ವಕ್ತಾರ ಫಾರುಕ್ ಉಳ್ಳಾಲ್ ಮಾತನಾಡಿ , ಬಿಜೆಪಿ ಪಕ್ಷದ ಜನವಿರೋಧಿ ಕೃತ್ಯಗಳನ್ನು ಜನರಿಗೆ ತಿಳಿಸುವಂತಹ ಬಹಿರಂಗ ಪ್ರದರ್ಶನವಾಗಿದೆ. ಕಟೀಲ್ ಗೆ ಇಚ್ಛಾಶಕ್ತಿ ಇದ್ದಲ್ಲಿ ಕಾಮಗಾರಿ ಮುಗಿಯುತಿತ್ತು. ವಾಸ್ತವ ನವಯುಗ ಕಂಪೆನಿಯಿಂದ ಸಚಿವ ನಿತಿನ್ ಗಡ್ಕರಿ, ಸಂಸದ ಕಟೀಲ್ ಪಡೆದ ಲಂಚದ ಆಮಿಷದಿಂದ ಕಾಮಗಾರಿ ವಿಳಂಬವಾಗಿದೆ. ಮೂರು ಮುಖಗಳು ತ್ರೀ ಈಡಿಯಟ್ಸ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ನಳಿನ್ ಅವರಿಗೆ ಜಿಲ್ಲೆಗೆ ಬರಲು ಹಕ್ಕಿಲ್ಲ ಅನ್ನುವ ಜಾಗೃತಿಯನ್ನು ಮಾಡುತ್ತೇವೆ. ಇಂಗ್ಲೀಷ್, ಹಿಂದಿ ಭಾಷೆಯೂ ಬರುವುದಿಲ್ಲ ತಿಂಗಳಲ್ಲಿ ಎಷ್ಟು ದಿನಗಳು ಎಂಬುದೂ ಸಂಸದರಿಗೆ ಗೊತ್ತಿಲ್ಲ. ತೊಕ್ಕೊಟ್ಟು ಪಂಪ್ ವೆಲ್ ನಲ್ಲಿ ಇಕ್ಕಟ್ಟಿನಲ್ಲಿ ಸಾಗಬೇಕಾದ ದುರ್ದೈವ ಎಲ್ಲರಿಗೂ ಒದಗಿದೆ. ಇನ್ನೂ ಕಾಮಗಾರಿ ಮುಗಿಯದಿದ್ದಲ್ಲಿ ಸಂಸದರ ಮನೆಗೆ ಧರಣಿ ಹಾಕುತ್ತೇವೆ. ಅಲ್ಲದೆ ವಿಮಾನ ನಿಲ್ದಾಣದಿಂದ ಜಿಲ್ಲೆಗೆ ಕಾಲಿಡದ ರೀತಿಯಲ್ಲಿ ಪ್ರತಿಬಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಗಡಿನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಸಿದ್ಧೀಖ್ ತಲಪಾಡಿ ಮಾತನಾಡಿ, ಭರವಸೆ ಕೊಡುವುದೇ ಒಂದು ಸಾಧನೆ ಅನ್ನುವುದು ಅವರ ಮನದಲ್ಲಿದೆ. 10 ವರ್ಷಗಳ ಆಡಳಿತ ಪೂರೈಸುವುದರ ಜೊತೆಗೆ ಅಷ್ಟೇ ಕಾಲ ಫ್ಲೈಓವರ್ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಸಾಧ್ಯವಾಗಿದೆ. ದೇಶದಲ್ಲಿ ಬೆಂಕಿ ಹಚ್ಚುವುದರಲ್ಲೇ ಕಾಲ ಕಳೆದ ಮತ್ತು ಅಣುಕು ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟ ಏಕೈಕ ಸಂಸದರ ಖ್ಯಾತಿ ಪಡೆದುಕೊಂಡಿದ್ದಾರೆ. ಭರವಸೆ ಕೊಡುವಾಗ ತಾವು ಯಾವ ಸ್ಥಾನದಲ್ಲಿರುವುದಾಗಿ ಗೊತ್ತಿಲ್ಲ. ಬುದ್ಧಿವಂತರ ಜಿಲ್ಲೆಯ ಸಂಸದರು ಎಂದು ಹೇಳಲು ನಾಚಿಕೆಯಾಗುತ್ತಿದೆ. ಸಂಸದರಿಗೆ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು ಸೀಟು ನೀಡಿದಲ್ಲಿ ರಾತ್ರಿಯಿಡೀ ದುಡಿದು ಸೋಲಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಮಾತನಾಡಿ, ವಿದ್ಯಾರ್ಥಿಗಳು, ಸಾರ್ವಜನಿಕರು ತೊಕ್ಕೊಟ್ಟು ಪಂಪ್ ವೆಲ್ ಪ್ರದೇಶದಲ್ಲಿ ದಿನನಿತ್ಯ ತೊಂದರೆಯನ್ನು ಅನುಭವಿಸುತ್ತಲೇ ಇದ್ದಾರೆ. ಸರಿಯಾದ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ತಲುಪಲಾಗುತ್ತಿಲ್ಲ. ಎರಡು ಕಡೆಯಲ್ಲಿ ಬ್ಲಾಕ್ ಆಗಿ, ವಾಹನ ಸವಾರರಿಗೆ ತೆರಳಲು ಅಸಾಧ್ಯವಾಗುತ್ತಲೇ ಇದೆ. ಮುಂದೆ ದೊಡ್ಡ ಮಟ್ಟಿನಲ್ಲಿ ಜನಸಮೂಹ ಎದ್ದು ಹೋರಾಡುತ್ತಾರೆ ಎಂದು ಎಚ್ಚರಿಸಿದರು.

ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ನವೀನ್ ಕೊಂಚಾಡಿ , ಜಿಲ್ಲಾ ಜತೆ ಕಾರ್ಯದರ್ಶಿ ನಿತಿನ್ ಕುತ್ತಾರ್, , ಉಳ್ಳಾಲ ವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಜಯಂತ್ ನಾಯ್ಕ್ , ಪದ್ಮಾವತಿ. ಯಸ್ ಶೆಟ್ಟಿ, ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಗಡಿನಾಡು ರಕ್ಷಣಾ ವೇದಿಕೆ ಸಿದ್ದೀಖ್ ತಲಪಾಡಿ, ರಫೀಕ್ ಹರೇಕಳ, ಇಬ್ರಾಹಿಂ ಮದಕ, ಮಹಾಬಲ ಟಿ. ದೆಪ್ಪೆಲಿಮಾರ್, ಹರೇಕಳ ಗ್ರಾ.ಪಂ ಸದಸ್ಯ ಅಶ್ರಫ್ ಹರೇಕಳ, ಹನೀಫ್ ಹರೇಕಳ, ಮಿಥುನ್ ಕುತ್ತಾರ್ ಉಪಸ್ಥಿತರಿದ್ದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಮನಸ್ಸು ಶಾಂತವಾಗಿದ್ದಾಗ ಮಾತ್ರ ಏಕಾಗ್ರತೆ ಸಾಧ್ಯ: ಡಾ. ಸರ್ಫ್ರಾಜ್ ಜೆ. ಹಾಸಿಮ್

August 14, 2026

ಕಳೆದುಕೊಂಡ ಹಣ ವಾರಸುದಾರರಿಗೆ ಹಸ್ತಾಂತರ

August 13, 2026

ಕುಂಪಲ ಜಂಕ್ಷನ್‌ನಲ್ಲಿ ಮಾದಕ ವಸ್ತು ಸೇವನೆ ಆರೋಪ

August 13, 2026
Leave A Reply

Advertise
ಸಂಪರ್ಕಿಸಿ

ಸ್ತನ್ಯಪಾನದ ಮಹತ್ವದ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವ ಅಗತ್ಯವಿದೆ : ರೋಟರಿ ಡೌನ್‌ಟೌನ್ ಕ್ಲಬ್ ಅಧ್ಯಕ್ಷ ಉಮೇಶ್‌ ಗಟ್ಟಿ

August 8, 2026

ಹಣ ಇಲ್ಲದಿದ್ದರೆ ಯಾರೂ ಸಾಯಬಾರದು – ಸಂವಿಧಾನದ ಪರಿಚ್ಛೇದ 21ರ ಬೆಳಕಿನಲ್ಲಿ ತುರ್ತಾಗಿ ಆರೋಗ್ಯ ಸಚಿವ ಯು.ಟಿ ಖಾದರ್ ಕೂಡಲೇ ಸ್ಪಂದಿಸುವ ಅಗತ್ಯ ಇದೆ.

August 1, 2026

ತಂದೆಯ ಸಾವು; ವಿಧವೆ ತಾಯಿಯ ಜವಾಬ್ದಾರಿ ಹೊತ್ತಿದ್ದ ಯುವತಿ ಈಗ ಐಸಿಯುನಲ್ಲಿ….! ಸುಮಾರು ₹20 ಲಕ್ಷ ಚಿಕಿತ್ಸಾ ವೆಚ್ಚ; ಆರೋಗ್ಯ ಸಚಿವ ಯು.ಟಿ.ಖಾದರ್‌ ಸಹಕಾರ ಅಗತ್ಯ

July 31, 2026

ಸಾವಿರ ವರ್ಷ ಕಳೆದರೂ ಕೊರೋನಾ ವೈರಸ್ ಇರುತ್ತೆ- ಭಯ ಬೇಡ ಎಚ್ಚರವಿರಲಿ: ಆರೋಗ್ಯ ಸಚಿವ ಯು.ಟಿ. ಖಾದರ್

July 22, 2026
suddi

ಮನಸ್ಸು ಶಾಂತವಾಗಿದ್ದಾಗ ಮಾತ್ರ ಏಕಾಗ್ರತೆ ಸಾಧ್ಯ: ಡಾ. ಸರ್ಫ್ರಾಜ್ ಜೆ. ಹಾಸಿಮ್

By UllalaVaniAugust 14, 20260

ಉಳ್ಳಾಲ: ಮನಸ್ಸು ಶಾಂತವಾಗಿ ಮತ್ತು ಸ್ಥಿರವಾಗಿದ್ದಾಗ ಮಾತ್ರ ಏಕಾಗ್ರತೆಯನ್ನು ಸಾಧಿಸಲು ಸಾಧ್ಯ. ಮಕ್ಕಳು ಓದಲು ಕುಳಿತುಕೊಳ್ಳುವ ಮುನ್ನ ಉಸಿರಾಟದ ವ್ಯಾಯಾಮಕ್ಕೆ…

ಮೂಡಾ ವ್ಯಾಪ್ತಿಯ ಕೊಟ್ಟಾರ ಆಸ್ತಿ ಖರೀದಿ ಪ್ರಕ್ರಿಯೆ: ಮೂಲ ದಾಖಲೆಗಳ ಕುರಿತು ಪ್ರಶ್ನೆಗಳ ಸರಮಾಲೆ

August 14, 2026

ಉಳ್ಳಾಲವಾಣಿ ಲೋಗೋ ಉಪಯೋಗಿಸಿ ಸಂಸ್ಥೆಯ ಹೆಸರಿನಲ್ಲಿ ಎಡಿಟ್‌ ಮಾಡಿದ ಫೋಟೋ ಶೇರ್ — ಕಾನೂನು ಕ್ರಮದ ಎಚ್ಚರಿಕೆ

August 14, 2026

ಬಂಟ್ವಾಳ: ಗಾಂಜಾ ಸಹಿತ ಮೂವರ ಬಂಧನ- 4.90 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ

August 14, 2026
1 2 3 … 2,059 Next
Automatic YouTube Gallery

ಉಳ್ಳಾಲದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ | ನೇರ ಪ್ರಸಾರ | 2026 | ತೊಕ್ಕೊಟ್ಟು

ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸಹಭಾಗಿತ್ವದಲ್ಲಿ, ತಾಲೂಕು ತಹಶಿಲ್ದಾರ್ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಆಡಳಿತದಿಂದ
80ನೇ ಸ್ವಾತಂತ್ರ‍್ಯೋತ್ಸವ ಆಚರಣೆ

ಸ್ಥಳ: ತೊಕ್ಕೊಟ್ಟು ಒವರ್‌ಬ್ರಿಡ್ಜ್ ಫ್ಲಾö್ಯ ಗ್ ಪೋಲ್

ಉಳ್ಳಾಲ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಒವರ್ ...
ಬ್ರಿಡ್ಜ್ ವರೆಗೆ ವಿದ್ಯಾರ್ಥಿಗಳ ಪಥಚಂಚಲನShow More
ಉಳ್ಳಾಲದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ | ನೇರ ಪ್ರಸಾರ | 2026 | ತೊಕ್ಕೊಟ್ಟು
Now Playing
ಉಳ್ಳಾಲದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ | ನೇರ ಪ್ರಸಾರ | 2026 | ತೊಕ್ಕೊಟ್ಟು
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ...
ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸಹಭಾಗಿತ್ವದಲ್ಲಿ, ತಾಲೂಕು ತಹಶಿಲ್ದಾರ್ ನೇತೃತ್ವದಲ್ಲಿ ಉಳ್ಳಾಲ ತಾಲೂಕು ಆಡಳಿತದಿಂದ
80ನೇ ಸ್ವಾತಂತ್ರ‍್ಯೋತ್ಸವ ಆಚರಣೆ

ಸ್ಥಳ: ತೊಕ್ಕೊಟ್ಟು ಒವರ್‌ಬ್ರಿಡ್ಜ್ ಫ್ಲಾö್ಯ ಗ್ ಪೋಲ್

ಉಳ್ಳಾಲ ಅಬ್ಬಕ್ಕ ವೃತ್ತದಿಂದ ತೊಕ್ಕೊಟ್ಟು ಒವರ್ ...
ಬ್ರಿಡ್ಜ್ ವರೆಗೆ ವಿದ್ಯಾರ್ಥಿಗಳ ಪಥಚಂಚಲನShow More
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
Now Playing
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
ಕೊಣಾಜೆ ಮೈದಾನದಲ್ಲಿ ಗುರು-ಗಾಂಧಿ ಸಂವಾದ ಶತಮಾನೋತ್ಸವ -ನೇರ ಪ್ರಸಾರ
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version