UN NETWORKS
ತೊಕ್ಕೊಟ್ಟು: ಲಾರಿಯೊಂದು ಹಠಾತ್ ಬ್ರೇಕ್ ಹಾಕಿದ ಪರಿಣಾಮ ಬಸ್ ಹಿಂಬದಿಯಿಂದ ಢಿಕ್ಕಿ ಹೊಡೆದ ಘಟನೆ ಚೆಂಬುಗುಡ್ಡೆ ಸಮೀಪ ಸೋಮವಾರ ಸಂಭವಿಸಿದೆ.
ಎಲಿಯಾರುಪದವುನಿಂದ ಮಂಗಳೂರು ಕಡೆಗೆ ಚಲಿಸುತ್ತಿದ್ದ ಬಸ್ಸಿನ ಮುಂಭಾಗದಲ್ಲಿ ರಾಡನ್ನು ಹೇರಿಕೊಂಡು ಲಾರಿಯೊಂದು ಮುಡಿಪು ಕಡೆಗೆ ತೆರಳುತಿತ್ತು. ಚೆಂಬುಗುಡ್ಡೆ ಮಾರ್ಗಮಧ್ಯೆ ಲಾರಿ ಚಾಲಕ ಹಠಾತ್ ಆಗಿ ಬ್ರೇಕ್ ಒತ್ತಿದ ಪರಿಣಾಮ ಹಿಂಬದಿಯಲ್ಲಿದ್ದ ಬಸ್ ಲಾರಿಯ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದೆ. ಬಸ್ಸಿನ ಗಾಜು ಸಂಪೂರ್ಣ ಹಾನಿಯಾಗಿದೆ.


