UN NETWORKS
ಉಳ್ಳಾಲ: ಸಮುದ್ರ ತೀರಕ್ಕೆ ವಿಹಾರಕ್ಕೆಂದು ಬಂದಿದ್ದ ಬೆಂಗಳೂರು ದಂಪತಿ ಹಾಗೂ ಇಬ್ಬರು ಮಕ್ಕಳಲ್ಲಿ ಬಾಲಕಿಯೊಬ್ಬಳು ಸಮುದ್ರ ಪಾಲಾಗಿ ದಂಪತಿ ಮತ್ತು ಇನ್ನೋರ್ವ ಬಾಲಕಿಯನ್ನು ಸ್ಥಳೀಯ ಜೀವರಕ್ಷಕರೊಬ್ಬರೇ ರಕ್ಷಿಸಿರುವ ಘಟನೆ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.

ಬೆಂಗಳೂರು ಬನಶಂಕರಿ ನಿವಾಸಿ ಚಿಂತಾಮಣಿ ಮತ್ತು ಶ್ರದ್ಧಾ ದಂಪತಿ ಪುತ್ರಿ ಮೈತ್ರಿ ಕೇಟ್ಕರ್ (5) ಮೃತ ಬಾಲಕಿ. ಇನ್ನೋರ್ವ ಬಾಲಕಿ ಗಾರ್ಜಿ ಕೇಟ್ಕರ್(6) ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಸ್ಥಳದಲ್ಲಿ ಲೈಫ್ ಗಾಡ್ 9 ಆಗಿರುವ ಅಶೋಕ್ ಅವರು ದಂಪತಿ ಹಾಗೂ ಇಬ್ಬರು ಮಕ್ಕಳು ಸಮುದ್ರಪಾಲಾಗುತ್ತಿದ್ದಂತೆ ಒಬ್ಬರೇ ಸಮುದ್ರಕ್ಕೆ ಹಾರಿ ಕ್ಯಾನ್ ಸಹಾಯದ ಮೂಲಕ ಮೂವರನ್ನು ಹರಸಾಹಸ ಪಟ್ಟು ಮೊದಲಿಗೆ ಹೊರತಂದು ರಕ್ಷಿಸಿದ್ದಾರೆ. ಇನ್ನೋರ್ವ ಬಾಲಕಿ ಮೈತ್ರಿ ಆಳ ಸಮುದ್ರದಲ್ಲಿದ್ದರೂ ಬೃಹತ್ ಅಲೆಗಳ ನಡುವೆ ಹೋರಾಡಿ, ಹೊರತರುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ.


