ಮಂಗಳೂರು: ಕರಾವಳಿ ಉತ್ಸವ-2018 ರ ಅಂಗವಾಗಿ ಕರಾವಳಿ ಯುವ ಉತ್ಸವದ ಪ್ರಯುಕ್ತ ರಥಬೀದಿ ಸರಕಾರಿ ಕಾಲೇಜಿನಲ್ಲಿ ನಡೆದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಮಂಗಳೂರು ಸಂತ ಆನ್ಸ್ ಕಾಲೇಜು ಇದರ ಬಿ.ಎಡ್ ವಿದ್ಯಾರ್ಥಿನಿ ವಿನುತಾ ಕೆ. ಗಟ್ಟಿ ಇವರು ಪ್ರಥಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
`ಕರಾವಳಿಯ ಯುವಜನತೆ ಅಂದು-ಇಂದು-ಮುಂದು’ ಎಂಬ ವಿಚಾರದಲ್ಲಿ ನಡೆಸಿದ ಭಾಷಣಕ್ಕೆ ಪ್ರಥಮ ಪ್ರಶಸ್ತಿ ದೊರೆತಿದೆ. ಕೈರಂಗಳ ನಿವಾಸಿಯಾಗಿರುವ ಇವರು ಅದ್ಭುತ ಯಕ್ಷಗಾನ ಕಲಾವಿದೆಯಾಗಿದ್ದು, ಬಯೋಸಾಯನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿದ್ದಾರೆ.



