UN NETWORKS
ಕಣಚೂರು: ದಾದಿಯರು ಎಂದರೆ ಶ್ರೇಷ್ಟ ಜೀವದಾನಿಗಳು, ಸಂಸಾರದೊಂದಿಗೆ ಹೆಚ್ಚುಕಾಲ ಇರಲಾರದೆ ಸಮಾಜದಲ್ಲಿ ಬಾಳುತ್ತಾ ತ್ಯಾಗಮಯಿಗಳಾಗಿದ್ದಾರೆ ಎಂದು ನಾಟೆಕಲ್ ಕಣಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು. ಕಣಚೂರು ಮೋನು ಅಭಿಪ್ರಾಯ ಪಟ್ಟರು.
ನಾಟೆಕಲ್ ಕಣಚೂರು ನರ್ಸಿಂಗ್ ವಿಜ್ಞಾನ ಸಂಸ್ಥೆಗಳ ಆಶ್ರಯದಲ್ಲಿ ಬಿ.ಎಸ್ಸಿ ನರ್ಸಿಂಗ್ ನ ಮೂರನೇ ಬ್ಯಾಚ್ ಆಯೋಜಿಸಿದ್ದ ಲ್ಯಾಂಪ್ ಲೈಟಿಂಗ್ ಆಂಡ್ ಓಥ್ ಟೇಕಿಂಗ್ ಸೆರೆಮನಿ ಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.ದಾದಿಯರ ನಡೆಸುವ ಕರ್ತವ್ಯ ಒಂದು ಸೇವೆಯೇ ಆಗಿದೆ. ಆದರೂ ಪದವಿ ಮುಗಿಸಿದ ತಕ್ಷಣ ಪರಿಣತರಾಗಲು ಅಸಾಧ್ಯ. ಕರ್ತವ್ಯದಲ್ಲೇ ಹೆಚ್ಚುಕಾಲ ತೊಡಗುತ್ತಾ ಸೂಕ್ಷ್ಮತೆಗಳನ್ನು ಅರಿಯುವ ಮೂಲಕ ಪರಿಣತರಾಗಬಹುದು. ಕರ್ತವ್ಯದಲ್ಲಿ ಯಶಸ್ಸನ್ನು ಕಾಣಲು ಸಾಧ್ಯ ಎಂದರು.
ವಿದ್ಯಾರ್ಥಿಗಳಿಗೆ ಲ್ಯಾಂಪ್ ಲೈಟಿಂಗ್ ನಡೆಸಿಕೊಟ್ಟ ಕುಲಶೇಖರ ಯುನಿಟಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಚಿತ್ರಾ.ಜಿ ಮಾತನಾಡಿ, ಇನ್ನೊಬ್ಬರನ್ನು ಬೆಳೆಸುವ ಸಾಮಥ್ರ್ಯ ಇರುವವರು ನಾಯಕರಾಗುತ್ತಾರೆ. ವಿದ್ಯಾರ್ಥಿಗಳು ಗುರುಗಳಿಗೆ ಗೌರವ ನೀಡುತ್ತಾ ಮುಂದುವರಿಯಬೇಕಿದೆ. ರೋಗಿಗಳಲ್ಲಿ ಆತ್ಮವಿಶ್ವಾಸ, ದಯೆಯ ವರ್ತನೆ ಹಾಗೂ ವಿಶ್ವಾಸವನ್ನು ತುಂಬಿಸುವ ಮೂಲಕ ಗುಣಮುಖರಾಗಿಸುವಲ್ಲಿ ದಾದಿಯರ ಪಾತ್ರ ಪ್ರಮುಖವಾಗಿರುತ್ತದೆ ಎಂಂದರು. ಕಣಚೂರು ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಪ್ರೊ.ರೆನಿಲ್ಡಾ ಶಾಂತಿ ಲೋಬೊ, ನಸ್ 9 ಮೆನೇಜರ್ ಸಿಮಾನ್ ವರ್ಗೀಸ್ ಉಪಸ್ಥಿತರಿದ್ದರು.
ಡೇವಿಡ್ ರಾಕೇಶ್ ಡಿಸೋಜ ನರ್ಸಿಂಗ್ ಇತಿಹಾಸ ಬೋಧಿಸಿದರು. ಆಲಿಯಾ ರೆಹ್ಮಾನ್ ಕಾರ್ಯಕ್ರಮ ನಿರೂಪಿಸಿದರು. ಅಸಿಸ್ಟೆಂಟ್ ಪ್ರೊ. ಮಾಲತಿ ವಂದಿಸಿದರು.


