ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ದಾದಿಯರು ತಮ್ಮ ಬಗ್ಗೆ ಅಪಾರ ನಿರೀಕ್ಷೆಯೊಂದಿಗೆ ಬರುವ ರೋಗಿಗಳ ಸಂಪೂರ್ಣ ಆರೈಕೆಯನ್ನು ಮಾನವೀಯತೆಯಿಂದ ಮಾಡಬೇಕು ಎಂದು ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ನ ಅಧ್ಯಕ್ಷ ಕಣಚೂರು ಮೋನು ಹೇಳಿದರು.
ದೇರಳಕಟ್ಟೆಯ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ಗುರುವಾರ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ ಅಂಗವಾಗಿ ನಡೆದ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.



ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ. ರೋಗಿಗಳಿಗೂ ಚಿಕಿತ್ಸಾ ವಿಧಾನಗಳ ಕುರಿತಂತೆ ಜಾಗೃತಿ, ಮಾಹಿತಿ ಕೊರತೆ ಇದೆ. ಇದನ್ನು ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಿ ರೋಗಿಗಳ ಆರೈಕೆ ನಡೆಸುವ ದಾದಿಯರ ಕಾರ್ಯ ದೇವರು ಮೆಚ್ಚುವ ಕೆಲಸವಾಗಿದೆ ಎಂದರು.
ಈ ಸಂದರ್ಭ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಡಳಿತಾಧಿಕಾರಿ ಅಬ್ದುಲ್ ರಹಿಮಾನ್, ಸಹಾದಾ ರೆಹಮಾನ್, ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ಡೀನ್ ಪ್ರೊ. ಡಾ. ಖಾಜಾ ನಾಸಿರುದ್ಧೀನ್, ವೈದ್ಯಕೀಯ ಸುಪರಿಟೆಂಡೆಂಟ್ ಡಾ. ದೇವಿ ಪ್ರಸಾದ್, ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ರೋಹನ್ ಮೋನಿಸ್ ಉಪಸ್ಥಿತರಿದ್ದರು.
ನರ್ಸಿಂಗ್ ಸುಪರ್ ವೈಸರ್ ಡಿಚ್ಚಮ್ಮ ಸ್ವಾಗತಿಸಿದರು. ಅನೀತಾ ಮ್ಯಾಥ್ಯು ಕಾರ್ಯಕ್ರಮ ನಿರೂಪಿಸಿದರು. ಶಕುಂತಳಾ ವಂದಿಸಿದರು.







