UN NETWORKS
ದೇರಳಕಟ್ಟೆ: ರತ್ನೋತ್ಸವ-2018 ಅಂಗವಾಗಿ ದೇರಳಕಟ್ಟೆ ಬೆಳ್ಮ ಪಂಚಾಯಿತಿ ವಠಾರದಿಂದ ಆರಂಭಗೊಂಡ ಸಾಂಸ್ಕೃತಿಕ ದಿಬ್ಬಣ ಮೆರವಣಿಗೆಗೆ ಬೆಳ್ಮ ಗ್ರಾ.ಪಂ ಅಧ್ಯಕ್ಷೆ ವಿಜಯ ಕೃಷ್ಣಪ್ಪ ಪೂಜಾರಿ ಚಾಲನೆ ನೀಡಿದರು.
ಪೂರ್ಣ ಕುಂಭ, ಮಂಗಳವಾದ್ಯ, ಚೆಂಡೆವಾದನ, ಕಂಸಾಲೆ, ಕಥಕ್ಕಳಿ, ಹಾಲಕ್ಕಿ, ವೀರಗಾಸೆ, ಕೀಲುಕುದುರೆ, ಹುಲಿವೇಷ, ಕರಗ ನೃತ್ಯ, ಗೊಂಬೆ ಕುಣಿತ, ಪೂಜಾ ಕುಣಿತ, ಬಣ್ಣದ ಕೊಡೆಗಳ ಜೊತೆಗೆ ಸಮ್ಮೇಳನಾಧ್ಯಕ್ಷ 80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಹಿರಿಯ ಸಾಹಿತಿ ನಾ.ಡಿ.ಸೋಜ ಅವರನ್ನು ದೇರಳಕಟ್ಟೆ ಗ್ರೀನ್ ಗ್ರೌಂಡಿಗೆ ಮೆರವಣಿಗೆ ಮೂಲಕ ಕರೆತರಲಾಯಿತು.















