UN NETWORKS
ಉಳ್ಳಾಲ: ವ್ಯೆದ್ಯಕೀಯ ಸರ್ಜಿಕಲ್ ನರ್ಸಿಂಗ್ ವಿಭಾಗ ಹಾಗೂ ಆಕ್ಟ್ಸ್ -ಯೆನ್ ವತಿಯಿಂದ ಇಸಿಜಿ ಇಂಟರ್ಪ್ರೆಟೇಷನ್ಸ್ – ಬಿಯಾಂಡ್ ದಿ ಬೇಸಿಕ್ಸ್ ಎಂಬ ಪ್ರಾದೇಶಿಕ ಕಾರ್ಯಾಗಾರವನ್ನು ನಡೆಸಲಾಯಿತು.
ಯೇನೆಪೊಯ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಸಿ. ವಿ. ರಘುವೀರ್, ಯೇನೆಪೊಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಗಂಗಾಧರ ಸೋಮಯಾಜಿ, ಯೇನೆಪೊಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಲೀನ ಕೆ .ಸಿ ಹಾಗೂ ಆಕ್ಟ್ಸ್ -ಯೆನ್ ಸಂಯೋಜಕ ಡಾ. ಮೇಘನಾ ಮುಕುಂದ್, ವ್ಯೆದ್ಯಕೀಯ ಸರ್ಜಿಕಲ್ ನರ್ಸಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಶಶಿಕುಮಾರ್ ಜವದಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಯೇನೆಪೊಯ ವ್ಯೆದ್ಯಕೀಯ ಸರ್ಜಿಕಲ್ ನರ್ಸಿಂಗ್ ವಿಭಾಗದ ಸಹಾಯಕ ಪ್ರೊ. ಗಿರೀಶ್ ಜಿ. ಆರ್ ಸ್ವಾಗತಿಸಿದರು. ಸಂತೋಷ್ ಥೋಮಸ್ ವಂದಿಸಿದರು. ಕಾರ್ಯಗಾರದಲ್ಲಿ 94ಮಂದಿ ಭಾಗವಹಿಸಿದರು.


