UN NETWORKS
ತೊಕ್ಕೊಟ್ಟು: ಪರಸ್ಪರ ಸಂಪರ್ಕ ಬೆಳಸುವ ಹಬ್ಬವಾಗಿದೆ ಕ್ರಿಸ್‍ಮಸ್. ಪರರ ಜತೆ, ದೇವರ ಜತೆ, ಅಂತಕರಣದ ಜತೆ ಇಂತಹ ಸಂಬಂಧದ ಬಗ್ಗೆ ಅರಿತುಕೊಂಡು ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಿಕೊಂಡು ಎಲ್ಲರನ್ನು ಸ್ವಾಗತಿಸುವ ಗುಣ ಬೆಳೆಸಿಕೊಳ್ಳಬೇಕೆಂದು ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮ ಕೇಂದ್ರದ ಧರ್ಮಗುರು ಜೆ.ಬಿ. ಸಲ್ದಾನ ಕರೆ ನೀಡಿದರು.
ಅವರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಫೆರ್ಮನ್ನೂರು ಇದರ ಆಶ್ರಯದಲ್ಲಿ ಪೊಸಕುರಲ್ ಬಳಗ, ಸದ್ಭಾವನಾ ವೇದಿಕೆ ಮತ್ತು ಸಾರ್ಜಂಟ್ ಬಿಷಪ್ ದೇವಾಲಯ ಬಬ್ಬುಕಟ್ಟೆ ಇವರ ಸಹಭಾಗಿತ್ವದಲ್ಲಿ ತೊಕ್ಕೊಟ್ಟುವಿನ ಅಂಬೇಡ್ಕರ್ ರಂಗಮಂದಿರದಲ್ಲಿ ಮಂಗಳವಾರ ನಡೆದ ಸೌಹಾರ್ದ ಕ್ರಿಸ್‍ಮಸ್ ಸಂಭ್ರಮದ ಅಧ್ಯಕ್ಷತೆ ವಹಿಸಿ ಆಶಿರ್ವಚನ ನೀಡಿದರು.
ಪ್ರಸಕ್ತ ಕಾಲಘಟ್ಟದಲ್ಲಿ ಪ್ರತಿಕ್ಷೇತ್ರಗಳಲ್ಲಿ ಜಾತಿಯತೆ ಬೆಳೆಯುತ್ತಿದ್ದು, ರೀತಿ ವಿಶ್ವಾಸ ಕಡಿಮೆಯಾಗುತ್ತಿದೆ. ಇದಕ್ಕೆ ತೆರೆ ಎಳೆಯಲು ಏಸುಕ್ರಿಸ್ತ ಇನ್ನೊಮ್ಮೆ ಹುಟ್ಟಿ ಬರಬೇಕಾಗಿದೆ. ಸಂಸ್ಕಾರವನ್ನುಹಿರಿಯರಿಗೆ ಗೌರವ ಕೋಡುವುದನ್ನು ನಾವಿಂದು ಮರೆತಿದ್ದೇವೆ. ವೈದ್ಯಕೀಯ, ಶಿಕ್ಷಣ ಕೇತ್ರಗಳು ವ್ಯಾಪಾರೀಕರಣ ಆಗುತ್ತಿದೆ ಎಂದು ಖ್ಯಾತ ದಂತ ವೈದ್ಯ ಮುರಲೀಮೋಹನ್ ಚೊಂತಾರು ಹೇಳಿದರು. ಚೊಕ್ಕಬೆಟ್ಟು ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಮಾತನಾಡಿ,ಆಚಾರ ವಿಚಾರಗಳು , ದರ್ಮ ಸಂಸ್ಕೃತಿ ಇರುವುದು ಮನುಜ ಧರ್ಮಕ್ಕೆ ಮಾತ್ರ ಹೊರತು ಪ್ರಾಣಿಗಳಿಗೆ ಇಲ್ಲ. ಪ್ರಾಣಿಗಳಲ್ಲಿ ದಯಾಗುಣ ಇದೆ. ಪರಸ್ಪರ ಸಂಬಂಧ ಪ್ರೀತಿ ಉಂಡು. ಆದರೆ ಈಗುಣ ಮನುಷ್ಯರಲ್ಲಿ ಇಲ್ಲದಿರುವುದು ಯಾಕೆ ಎಂಬುದು ಪ್ರಶ್ನೆಯಾಗಿದೆ. ನಮ್ಮಲ್ಲಿ ಎಲ್ಲಾ ಇದೆ ಆದರೆ ಮನುಷ್ಯತ್ವ ಗುಣ ಬೇರೆ ಇದೆ. ಪ್ರೀತಿ ವಿಶ್ವಾಸ, ಸೇವೆಗೆ ಮದರ್ ತೆರೆಸಾ ಅಂದು ಮಾದಿ ಆದರ್ಶರಾಗಿದ್ದರು. ಈಗ ಹೃದಯಂವತಿಕೆಯ ಸೇವೆ ನಮ್ಮಲ್ಲಿಲ್ಲ ಪ್ರೀತಿ ವಿಶ್ವಾಸ ಎನ್ನುವುದೇ ಪ್ರಕೃತಿಯ ದೊಡ್ಡ ಸಂಪತ್ತು. ನಿಜವಾದ ಸಂಪತ್ತು ಹೃದಯ ಸಂಪತ್ತು ಆಗಿದೆ ಎಂದರು.
ಪೊಸಕುರಲ್ ನಿರ್ದೇಶಕ ವಿದ್ಯಾದರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂತ ಸೆಬೆಸ್ಟಿಯನ್ ಧರ್ಮ ಕೇಂದ್ರ ಪಾಲನಾ ಸಮಿತಿಯ ಉಪಾಧ್ಯಕ್ಷ ಮೆಲ್ವಿನ್‍ಡಿ ಸೋಜ ಮಾತನಾಡಿದರು.ಕಾರ್ಯಕ್ರಮದಲ್ಲಿ ಬಿಷಪ್ ಸಾರ್ಜಂಟ್ ದೇವಾಲಯದ ವಂದನೀಯ ಜಯಕುಮಾರ್ ಕೋಟ್ಯಾನ್, ಪೆರ್ಮನ್ನೂರು ಚರ್ಚ್‍ನ ಸಹಾಯಕ ಧರ್ಮಗುರು ಫದರ್ ಸ್ಟ್ಯಾನಿ ಪಿಂಟೋ, ಫದರ್ ಲೈಝಿಲ್ ಡಿಸೋಜ, ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ, ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಸದ್ಬಾವನಾ ವೇದಿಕೆಯ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ತ್ವಾಹಾ ಹಾಜಿ, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಜಮಾಅತೆ ಇಸ್ಲಾಮಿ ಹಿಂದ್ ಮಾಜಿ ಅಧ್ಯಕ್ಷ ಎ.ಎಚ್. ಅಬೂಬಕರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಉಮರಬ್ಬ, ಸುರೇಶ್ ಭಟ್ನಗರ್, ಪೊಸಕುರಲ್ ಮಹಿಳಾ ವಿಭಾಗದ ಅಧ್ಯಕ್ಷ ಸುವಾಸಿನಿ ಬಬ್ಬಟುಕಟ್ಟೆ, ಕೌನ್ಸಿಲರ್ ವೀಣ ಶಾಂತಿಡಿ ಸೋಜ, ಬಾಝಿಲ್ ಡಿಸೋಜ, ಮೊದಲಾದವರು ಉಪಸ್ಥಿತರಿದ್ದರು. ರೊನಾಲ್ಡ್ ಫೆರ್ನಾಂಡಿಸ್ ಸ್ವಾಗತಿಸಿದರು. ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಲಾಯನ್ ಡಿ ಸೋಜ ವಂದಿಸಿದರು.
ಕಾರ್ಯಕ್ರಮದ ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.


